PhonePe Blogs Main Featured Image

Trust & Safety

ಲಾಟರಿ ಹಗರಣಗಳ ಬಗ್ಗೆ ತಿಳಿದುಕೊಳ್ಳುವುದು, ಪತ್ತೆ ಹಚ್ಚುವುದು ಮತ್ತು ಅದರಿಂದ ಪಾರಾಗುವುದು

PhonePe Regional|2 min read|03 July, 2024

URL copied to clipboard

ನೀವು ಎಂದೂ ಬಳಸಿರದಂತಹ ಅತ್ಯಾಕರ್ಷಕ ಇಮೇಲ್ ಅಥವಾ ಫೋನ್ ಕರೆಯ ಮೂಲಕ ನೀವು ಲಾಟರಿಯಲ್ಲಿ ಜಾಕ್‌ಪಾಟ್ ಹೊಡೆದಿದ್ದೀರಿ ಎಂದು ಬಂದಾಗ ನೀವು ಎಷ್ಟು ಭಾವೋದ್ವೇಗಕ್ಕೆ ಒಳಗಾಗುತ್ತೀರಲ್ಲವೇ! ಆದರೆ ಇಲ್ಲಿ ಟ್ವಿಸ್ಟ್ ಇಲ್ಲಿದೆ: ಆ ಬಹುಮಾನವನ್ನು ಪಡೆಯಲು, ಕೆಲವು ಪ್ರಕ್ರಿಯೆ ಶುಲ್ಕಗಳಿಗಾಗಿ ಅವರು ನಿಮ್ಮ ಜೇಬಿನಿಂದ ಪಾವತಿಸುವಂತೆ ಕೇಳುತ್ತಾರೆ. ಇದು ವಿಲ್ಲಿ ವೊಂಕಾ ಚಾಕೊಲೇಟ್ ಫ್ಯಾಕ್ಟರಿಗೆ ಗೋಲ್ಡನ್ ಟಿಕೆಟ್ ಗೆದ್ದಂತೆ, ಕೇವಲ ಚಾಕೊಲೇಟ್ ಉಚಿತವಾಗಿ ಸಿಗಲ್ಲ ಎಂದು ಗೊತ್ತಾಗಲು ನೀವು ಮೊದಲೇ ಪಾವತಿಸಬೇಕಾಗುತ್ತದೆ

ಲಾಟರಿ ಹಗರಣ ಎಂದರೇನು?

ಲಾಟರಿ ಹಗರಣವು ಒಂದು ರೀತಿಯ ವಂಚನೆಯಾಗಿದ್ದು, ಇದು ಅನಿರೀಕ್ಷಿತ ಇಮೇಲ್ ಅಧಿಸೂಚನೆ, ಫೋನ್ ಕರೆ ಅಥವಾ ಮೇಲ್ ಮೂಲಕ ಪ್ರಾರಂಭವಾಗುತ್ತದೆ. ಈ ಲಾಟರಿ ಟಿಕೆಟ್‌ ಮೇಲೆ ನೀವು ದೊಡ್ಡ ಮೊತ್ತದ ಹಣವನ್ನು ಗೆದ್ದಿದ್ದೀರಿ ಎಂದು ಹೇಳಿಕೊಂಡು ನಿರ್ದಿಷ್ಟ ಫೋನ್ ಸಂಖ್ಯೆ ಅಥವಾ ಏಜೆಂಟ್‌ನ ಇಮೇಲ್ ಅಡ್ರೆಸ್ ಅನ್ನು ಸಂಪರ್ಕಿಸಲು ಕೇಳುತ್ತದೆ. ಆದರೆ ವಾಸ್ತವವಾಗಿ, ಅದು ವಂಚಕರಿಗೆ ಸೇರಿರುತ್ತದೆ. ಏಜೆಂಟ್ ಅನ್ನು ಸಂಪರ್ಕಿಸಿದ ನಂತರ, ಲಾಟರಿ ಬಹುಮಾನವನ್ನು ಪಡೆಯಲು ಪ್ರಕ್ರಿಯೆಯ ಶುಲ್ಕವನ್ನು ಪಾವತಿಸುವುದು ಅದರ ಉದ್ದೇಶವಾಗಿರುತ್ತದೆ.

ರೆಡ್ ಫ್ಲಾಗ್

ಸಂಭವನೀಯ ಹಗರಣವನ್ನು ಗುರುತಿಸಲು ಸಹಾಯ ಮಾಡುವ ಕೆಲವು ರೆಡ್ ಫ್ಲಾಗ್ಸ್ ಇಲ್ಲಿವೆ, ಇವು ನೀವು ಜಾಗರೂಕರಾಗಿರಲು ಮತ್ತು ವಿಷಮ ಪರಿಸ್ಥಿತಿಯಿಂದ ಪಾರಾಗಲು ಸಹಾಯ ಮಾಡುತ್ತವೆ:

  • ಅನಪೇಕ್ಷಿತ ನೋಟಿಫಿಕೇಶನ್‌ಗಳು: ಯಾವುದೇ ಲಾಟರಿಯಲ್ಲಿ ಸಕ್ರಿಯವಾಗಿ ಭಾಗವಹಿಸದೆ ಇದ್ದರೂ ನೀವು ಲಾಟರಿಗೆ ಸಂಬಂಧಿಸಿದ ಅನಪೇಕ್ಷಿತ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಿದರೆ ಜಾಗರೂಕರಾಗಿರಿ. ನೀವು ಎಂದೂ ಪಾಲ್ಗೊಳ್ಳದ ಲಾಟರಿಯಿಂದ ಗೆಲ್ಲುವ ಬಗ್ಗೆ ಕೇಳಿದರೆ, ಎಚ್ಚರಿಕೆಯಿಂದಿರಿ. ನೀವು ಸ್ವಇಚ್ಛೆಯಿಂದ ಲಾಟರಿಗೆ ಸೇರಿದಾಗ ಕಾನೂನುಬದ್ಧ ಗೆಲುವುಗಳು ಸಾಮಾನ್ಯವಾಗಿ ಸಂಭವಿಸುತ್ತವೆ.
  • ಮುಂಗಡ ಪಾವತಿಗಳು: ಅಧಿಕೃತ ಲಾಟರಿಗಳಾದರೆ, ವಿಜೇತರಿಗೆ ಮುಂಚಿತವಾಗಿ ಶುಲ್ಕವನ್ನು ಪಾವತಿಸಲು ಕೇಳುವುದಿಲ್ಲ. ನೀವು ನಿಜವಾಗಿಯೂ ಗೆದ್ದಿದ್ದರೆ, ನಿಮ್ಮ ಬಹುಮಾನವನ್ನು ಕ್ಲೈಮ್ ಮಾಡುವ ಮೊದಲು ನೀವು ಯಾವುದೇ ಹಣ ಕಟ್ಟಬೇಕಾಗಿಲ್ಲ. ನೀವು ಗೆದ್ದಿದ್ದೀರಿ ಎಂದು ಯಾರಾದರೂ ಹೇಳಿದರೆ, ಆದರೆ ಮೊದಲು ನಿಮ್ಮಿಂದ ಹಣವನ್ನು ಕೇಳಿದರೆ, ಅದು ಅಸಲಿ ಗೆಲುವು ಅಲ್ಲ ಎಂಬುದರ ಸಂಕೇತವಾಗಿರುತ್ತದೆ. 
  • ಬೆಳ್ಳಗಿರುವುದೆಲ್ಲ ಹಾಲಲ್ಲ: ಅತ್ಯಾಕರ್ಷಕವಾಗಿ ಕಾಣುತ್ತಿದ್ದರೆ, ಅದೊಂದು ದೂರ್ತಜಾಲವಾಗಿರಬಹುದು. ನೀವು ಅದರ ಬಗ್ಗೆ ಉತ್ಸುಕರಾಗುವ ಮೊದಲು, ಕ್ರಾಸ್ ಚೆಕ್ ಮಾಡುವುದು ಒಳಿತು.
  • ತುರ್ತು ತಂತ್ರಗಳು: ಅವರು ನಿಮ್ಮನ್ನು ಬೇಗ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದರೆ ಜಾಗರೂಕರಾಗಿರಿ. ಬಲಿಪಶುಗಳು ಆಳವಾಗಿ ಯೋಚಿಸುವುದನ್ನು ಅಥವಾ ಸಲಹೆ ಪಡೆಯುವುದನ್ನು ತಡೆಯಲು ವಂಚಕರು ಆಗಾಗ್ಗೆ ತುರ್ತುಸ್ಥಿತಿಯನ್ನು ಬಳಸುತ್ತಾರೆ.
  • ಹೊಂದಿಕೆಯಾಗದ ಸಂಪರ್ಕ ಮಾಹಿತಿ: ಅವರು ಕೊಟ್ಟ ಸಂಪರ್ಕ ವಿವರಗಳು ಲಾಟರಿ ಸಂಘಟಕರ ಅಧಿಕೃತ ಮಾಹಿತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲವೇ ಎಂಬುದನ್ನು ಪರಿಶೀಲಿಸಿ. ಕಾನೂನುಬದ್ಧ ಲಾಟರಿಗಳು ಸ್ಥಿರ ಮತ್ತು ನಿಖರವಾದ ಮಾಹಿತಿಯನ್ನು ಹೊಂದಿರುತ್ತವೆ.
  • ವ್ಯಾಕರಣ ದೋಷಗಳು: ಅಧಿಕೃತ ಸಂವಹನದಲ್ಲಿ ಕಳಪೆ ವ್ಯಾಕರಣ ಮತ್ತು ಕಾಗುಣಿತದ ಬಗ್ಗೆ ಗಮನ ಕೊಡಿ. ನಿಜವಾದ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ಪತ್ರವ್ಯವಹಾರದಲ್ಲಿ ವೃತ್ತಿಪರ ಮಾನದಂಡವನ್ನು ನಿರ್ವಹಿಸುತ್ತವೆ.
  • ಅನಾಮಧೇಯ ಪಾವತಿ ವಿಧಾನಗಳು: ಗಿಫ್ಟ್ ಕಾರ್ಡ್‌ಗಳು ಅಥವಾ ವೈರ್ ಟ್ರಾನ್ಸ್ಫರ್‌ಗಳಂತಹ ಅಸಾಂಪ್ರದಾಯಿಕ ಅಥವಾ ಪತ್ತೆಹಚ್ಚಲಾಗದ ವಿಧಾನಗಳ ಮೂಲಕ ಪಾವತಿಸಲು ಅವರು ಒತ್ತಾಯಿಸಿದರೆ, ಅದು ಬಹುತೇಕ ವಂಚನೆಯಾಗಿರುತ್ತದೆ. ಪ್ರಾಮಾಣಿಕ ಸಂಸ್ಥೆಗಳು ಸುರಕ್ಷಿತ ಮತ್ತು ಪಾರದರ್ಶಕ ಪಾವತಿ ವಿಧಾನಗಳನ್ನು ಬಳಸುತ್ತವೆ.
  • ಅಧಿಕೃತ ವೆಬ್‌ಸೈಟ್ ಇಲ್ಲದಿರುವುದು: ಅಧಿಕೃತ ವೆಬ್‌ಸೈಟ್‌ನ ಅಲಭ್ಯತೆಯು ಕೂಡ ಒಂದು ರೆಡ್ ಫ್ಲ್ಯಾಗ್ ಆಗಿರುತ್ತದೆ. ಲಾಟರಿ ಸಂಸ್ಥೆಗಳು ಸಾಮಾನ್ಯವಾಗಿ ಮಾಹಿತಿಯನ್ನು ಒದಗಿಸಲು ಮತ್ತು ಅವರ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ವೃತ್ತಿಪರ ಆನ್ಲೈನ್ ಉಪಸ್ಥಿತಿಯನ್ನು ಹೊಂದಿರುತ್ತವೆ.
  • ದೂರುಗಳಿಗಾಗಿ ಪರಿಶೀಲಿಸಿ: ಲಾಟರಿ ಸಂಸ್ಥೆಗೆ ಸಂಬಂಧಿಸಿದ ಯಾವುದೇ ವರದಿಯಾದ ಹಗರಣಗಳು ಅಥವಾ ದೂರುಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಿ. ಇತರರು ವಂಚನೆಗೆ ಒಳಗಾಗಿದ್ದರೆ, ನೀವೂ ಸಹ ಆಗುವ ಅವಕಾಶ ಹೆಚ್ಚು. 
  • ಅನಗತ್ಯ ವೈಯಕ್ತಿಕ ಮಾಹಿತಿ: ಅವರು ನಿಮ್ಮ ಬ್ಯಾಂಕ್ ವಿವರಗಳು ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯಂತಹ ಅನಗತ್ಯ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಜಾಗರೂಕರಾಗಿರಿ. ಕಾನೂನುಬದ್ಧ ಲಾಟರಿಗಳಿಗೆ ಬಹುಮಾನಗಳನ್ನು ನೀಡಲು ವ್ಯಾಪಕವಾದ ವೈಯಕ್ತಿಕ ಮಾಹಿತಿಯ ಅಗತ್ಯವಿರುವುದಿಲ್ಲ.

ನೀವು ಲಾಟರಿ ಹಗರಣದ ಬಲಿಪಶುವಾಗಿದ್ದರೆ ಅದನ್ನು ವರದಿ ಮಾಡುವುದು ಹೇಗೆ:

ನೀವು ಲಾಟರಿ ಹಗರಣಕ್ಕೆ ಬಲಿಯಾಗಿದ್ದೀರಿ ಎಂದು ನಿಮಗೆ ಅನುಮಾನ ಬಂದರೆ, ಸಂಭವನೀಯ ಹಾನಿಯನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ನಷ್ಟವನ್ನು ತಡೆಗಟ್ಟಲು ತುರ್ತು ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ. ನೀವು ತೆಗೆದುಕೊಳ್ಳಬೇಕಾದ ಹಂತಗಳು ಹೀಗಿವೆ:

  • PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು ‘ಇತರೆ’ ಅಡಿಯಲ್ಲಿ ದೂರು ನೀಡಿ. ‘ಖಾತೆ ಭದ್ರತೆ ಮತ್ತು ಮೋಸದ ಚಟುವಟಿಕೆಯನ್ನು ವರದಿ ಮಾಡುವುದು’ ಆಯ್ಕೆಮಾಡಿ ಮತ್ತು ಘಟನೆಯನ್ನು ವರದಿ ಮಾಡಲು ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.
  • PhonePe ಗ್ರಾಹಕರ ಸಹಾಯವಾಣಿ ಸಂಖ್ಯೆ: ನೀವು ದೂರು ನೀಡಲು PhonePe ಗ್ರಾಹಕ ಸೇವೆಗೆ 80–68727374/022–68727374 ಕ್ಕೆ ಕರೆ ಮಾಡಬಹುದು, ನಂತರ ಗ್ರಾಹಕರ ಸಹಾಯವಾಣಿಯ ಏಜೆಂಟ್ ಟಿಕೆಟ್ ನೀಡಿ, ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ.
  • ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ನ ವೆಬ್‌ಫಾರ್ಮ್ https://support.phonepe.com/ ಅನ್ನು ಬಳಸಿಕೊಂಡು ಟಿಕೆಟ್ ರಚಿಸಬಹುದು,
  • ಸಾಮಾಜಿಕ ಮಾಧ್ಯಮ: ನೀವು PhonePe ನ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು
    • ಟ್ವಿಟರ್ — https://twitter.com/PhonePeSupport
    • ಫೇಸ್‌ಬುಕ್ — https://www.facebook.com/OfficialPhonePe
  • ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಪಡೆದಿರುವ ಟಿಕೆಟ್ ಐ.ಡಿ ಯನ್ನು ಹಂಚಿಕೊಳ್ಳಬಹುದು.
  • ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ 1930 ರ ಮೂಲಕ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಪ್ರಮುಖ ಸೂಚನೆ – PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್ನಿಂದ ಬರದ ಹೊರತು PhonePe ಮೂಲಕ ಎಂದು ಹೇಳಿಕೊಳ್ಳುವ ಎಲ್ಲಾ ಮೇಲ್ಗಳನ್ನು ನಿರ್ಲಕ್ಷಿಸಿ. ನೀವು ವಂಚನೆಯ ಬಗ್ಗೆ ಅನುಮಾನಿಸಿದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading