PhonePe Blogs Main Featured Image

Trust & Safety

ಪಾವತಿ ವಂಚನೆಗಳ ಪ್ರಕಾರಗಳು ಮತ್ತು ಸುರಕ್ಷತೆಗಾಗಿ ಪಾಲಿಸಬೇಕಾದ ಅತ್ಯುತ್ತಮ ಅಭ್ಯಾಸಗಳು

PhonePe Regional|4 min read|11 May, 2021

URL copied to clipboard

ಡಿಜಿಟಲ್ ಪಾವತಿ ವಿಧಾನಗಳ ಪ್ರಸರಣವು ಜೀವನವನ್ನು ಬಹಳಷ್ಟು ಸುಲಭಗೊಳಿಸಿದೆ. ಈಗ ನೀವು ಪೇಮೆಂಟ್ ಆ್ಯಪ್‌ಗಳ ಮೂಲಕ ಹಣವನ್ನು ಕಳಿಸುವುದು, ಎಲ್ಲಾ ಬಿಲ್‌ಗಳನ್ನು ಪಾವತಿಸುವುದು, ರೀಚಾರ್ಜ್ ಮಾಡುವುದು, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಮತ್ತು ನಿಮ್ಮ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ತ್ವರಿತ ಪಾವತಿಗಳನ್ನು ಮಾಡುವುದು ಸಾಧ್ಯವಾಗಿರುವುದು, ನಗದು ಹಣದ ಮೇಲಿನ ಅವಲಂಬನೆಯನ್ನು ಬಹಳಷ್ಟು ಕಡಿಮೆ ಮಾಡಿದೆ.

ಡಿಜಿಟಲ್ ಪಾವತಿ ವಿಧಾನಗಳು ಜನರಿಗೆ ದೊಡ್ಡ ವರದಾನವಾಗಿದ್ದರೂ, ವಂಚಕರು ಅವುಗಳ ಲಾಭವನ್ನು ಪಡೆದು, ನಿರಂತರವಾಗಿ ನಿಮ್ಮನ್ನು ವಂಚನೆಯ ವಹಿವಾಟು ನಡೆಸುವಂತೆ ಮಾಡಲು ಹೊಸ ಮಾರ್ಗಗಳನ್ನು ನೋಡುತ್ತಿದ್ದಾರೆ.

PhonePe ಯಲ್ಲಿನ ವಂಚನೆ ತಡೆಗಟ್ಟುವ ಉಪಕ್ರಮಗಳು, ವಂಚನೆಯ ಪ್ರಕಾರಗಳು ಮತ್ತು ನೀವು ಅವುಗಳಿಂದ ಹೇಗೆ ಸುರಕ್ಷಿತವಾಗಿರಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

PhonePe ಯಲ್ಲಿ ವಂಚನೆ ತಡೆಗಟ್ಟುವ ಉಪಕ್ರಮಗಳು

PhonePe ಯಲ್ಲಿ ನಾವು ನಿಮ್ಮ ವಹಿವಾಟಿನ ಅನುಭವವನ್ನು ಹೆಚ್ಚು ಭದ್ರ ಮತ್ತು ಸುರಕ್ಷಿತವಾಗಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ವಂಚಕರನ್ನು ದೂರವಿಡಲು, ನಾವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಹುವಿಧಗಳ ಸದೃಢವಾದ ಅಪಾಯ ಮತ್ತು ವಂಚನೆ ನಿಯಂತ್ರಣ ಪ್ರಕ್ರಿಯೆಗಳನ್ನು ಬಳಸುತ್ತೇವೆ.

PhonePe ಖಾತೆ ಮತ್ತು ವಹಿವಾಟು ಭದ್ರತೆ: ನಮ್ಮ ಪ್ಲಾಟ್‌ಫಾರ್ಮ್ ಅನ್ನು ಭದ್ರ ಮತ್ತು ಸುರಕ್ಷಿತವಾಗಿರಿಸಲು, ನಾವು ಎಲ್ಲಾ ಖಾತೆಗಳನ್ನು ಮತ್ತು ಯಾವುದೇ ಖಾತೆಯಿಂದ ಮಾಡಲಾಗುವ ಪ್ರತಿ ವಹಿವಾಟನ್ನು ಮೌಲ್ಯೀಕರಿಸುತ್ತೇವೆ. ಈ ಮೌಲ್ಯಮಾಪನಗಳನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತದೆ. ಹೊಸ ಬಳಕೆದಾರರು PhonePeಯಲ್ಲಿ ನೋಂದಾಯಿಸಿದ ತಕ್ಷಣ, ಅವರ ಫೋನ್ ನಂಬರ್ ಅನ್ನು OTP ಮೂಲಕ ಮೌಲ್ಯೀಕರಿಸಲಾಗುತ್ತದೆ. ಅಲ್ಲದೆ, ಎಲ್ಲಾ UPI ವಹಿವಾಟುಗಳಿಗೆ MPIN / ಪಾಸ್‌ವರ್ಡ್ ಸೆಟಪ್ ಸಹ ಮಾಡಬೇಕಾಗುತ್ತದೆ ಮತ್ತು ಹೊಸ ಸಾಧನದಿಂದ ಮಾಡಲಾಗುವ ಯಾವುದೇ ಲಾಗಿನ್ ಅನ್ನು OTP ಪರಿಶೀಲನೆಯ ಮೂಲಕ ಮೌಲ್ಯೀಕರಿಸಲಾಗುತ್ತದೆ.

ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳನ್ನು ಯಾರಾದರೂ ಮಾಡಲು ಪ್ರಯತ್ನಿಸಿದಲ್ಲಿ, ಅದು ಅನುಮಾನಾಸ್ಪದವೆಂದು ಕಂಡುಬಂದರೆ, ಅಂತಹ ಬಳಕೆದಾರರು ಪ್ಲಾಟ್‌ಫಾರ್ಮ್‌ ಬಳಸದಂತೆ ಮತ್ತು ಅಂತಹ ವಹಿವಾಟುಗಳನು ನಡೆಯದಂತೆ ನಾವು ಅವುಗಳನ್ನು ನಿರ್ಬಂಧಿಸುತ್ತೇವೆ.

ಅಪಾಯ ಸಾಧ್ಯತೆಯ ತನಿಖೆಗಳು: ನಮ್ಮ ಅಪಾಯ ತನಿಖಾ ತಂಡವು ವಿವಿಧ ಚಾನೆಲ್‌ಗಳ ಮೂಲಕ ವರದಿಯಾಗುವ ವಂಚನೆ ಘಟನೆಗಳನ್ನು ನಿರ್ವಹಿಸುತ್ತದೆ ಮತ್ತು ಗ್ರಾಹಕರು, ಮಾರಾಟಗಾರರು, ಪಾಲುದಾರರು ಮತ್ತು ಬಾಹ್ಯ ಏಜೆನ್ಸಿಗಳಿಗೆ ಸಹಾಯವನ್ನು ನೀಡುತ್ತದೆ. ಈ ತಂಡವು ವಂಚನೆಯ ವಹಿವಾಟುಗಳನ್ನು ತಡೆಯುವ ಮೂಲಕ ವಂಚಕರ ವಿರುದ್ಧ ಖಚಿತವಾದ ರಕ್ಷಣೆಯ ವ್ಯವಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ವಂಚನೆಯನ್ನು ತಡೆಗಟ್ಟುವ ತಾಂತ್ರಿಕ ಸಾಮರ್ಥ್ಯಗಳು: ಪ್ರತಿಯೊಂದು ವಂಚನೆಯ ವಹಿವಾಟು ವಿವರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಾವು ವಹಿವಾಟು ನಡೆಸಿದ ಸಾಧನಗಳ IP, ಅವುಗಳ ಸ್ಥಳ ನಿರ್ದೇಶಾಂಕಗಳಂತಹ ನೈಜ-ಸಮಯದ ಸಂಕೇತಗಳನ್ನು ದಾಖಲಿಸುತ್ತ ಹೋಗುತ್ತೇವೆ. ಅಷ್ಟೇ ಅಲ್ಲ, ನಾವು ಅನುಮಾನಾಸ್ಪದ ಬಳಕೆದಾರರನ್ನು ಫ್ಲ್ಯಾಗ್ ಮಾಡಲು ಪ್ರತಿ ಬಳಕೆದಾರರ ಚಟುವಟಿಕೆ, ಸಾಧನ ಮತ್ತು ಪಾವತಿ ಪ್ರಕಾರಗಳ ಬಳಕೆಯ ಇತಿಹಾಸದಂತಹ ಮಾಹಿತಿಯನ್ನು ಸಹ ನಾವು ಪರಿಶೀಲಿಸುತ್ತೇವೆ.

ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ: ನಾವು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಾನೂನು ಜಾರಿ ಸಂಸ್ಥೆಗಳ ಸೈಬರ್-ಅಪರಾಧ ವಿಭಾಗಗಳೊಂದಿಗೆ ಸಹಭಾಗಿತ್ವ ಹೊಂದಿದ್ದೇವೆ. ವಂಚನೆ ದೂರುಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ, ಅಂತಹ ವಹಿವಾಟುಗಳ ಅಗತ್ಯ ವಿವರಗಳನ್ನು ಈ ವಿಭಾಗಗಳಿಗೆ ನೀಡುವ ಮೂಲಕ ಅವರ ತನಿಕೆಗೆ ಸಹಾಯ ಮಾಡುತ್ತೇವೆ ಮತ್ತು ಇಂತಹ ವಹಿವಾಟುಗಳನ್ನು ನಿರ್ಬಂಧಿಸುತ್ತೇವೆ ಹಾಗೂ ವಂಚನೆ ಮಾಡಿದ ಬಳಕೆದಾರರನ್ನು PhonePe ಪ್ಲಾಟ್‌ಫಾರ್ಮ್‌ ಬಳಸದಂತೆ ತಡೆಯುತ್ತೇವೆ. ಅಷ್ಟೇ ಅಲ್ಲ, ನಾವು ಹೀಗೆ ಗುರುತಿಸಲಾಗುವ ವಂಚಕ ಬಳಕೆದಾರರ ಋಣಾತ್ಮಕ ಡೇಟಾಬೇಸ್ ಅನ್ನು ಸಹ ನಾವು ನಿರ್ವಹಿಸುತ್ತೇವೆ.

ವಂಚನೆಯನ್ನು ತಡೆಯಲು ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳು:

  • ಯಾರೊಂದಿಗೂ ನಿಮ್ಮ ಕಾರ್ಡ್ ಸಂಖ್ಯೆ, ಅವಧಿ ಮುಕ್ತಾಯ ದಿನಾಂಕ, ಪಿನ್, OTP ಮುಂತಾದ ಗೌಪ್ಯ ವಿವರಗಳನ್ನು ಹಂಚಿಕೊಳ್ಳಬೇಡಿ. PhonePe ಪ್ರತಿನಿಧಿಯಾಗಿ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರನ್ನು ಕೇಳಿ. ಹಾಗೂ @phonepe.com ಡೊಮೇನ್‌ನಿಂದ ಬರುವ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.
  • PhonePe ಮೂಲಕ ಹಣವನ್ನು ಸ್ವೀಕರಿಸಲು, ನೀವು ‘ಪಾವತಿ’ ಮಾಡಬೇಕಾಗಿಲ್ಲ ಅಥವಾ ನಿಮ್ಮ UPI ಪಿನ್ ಅನ್ನು ನಮೂದಿಸಬೇಕಾಗಿಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ.
  • Anydesk, TeamViewer ಅಥವಾ Screenshare ನಂತಹ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಇನ್‌ಸ್ಟಾಲ್ ಮಾಡುವುದು ಮಾಡಬೇಡಿ.
  • Google, Twitter, FB ಇತ್ಯಾದಿಗಳಲ್ಲಿ PhonePe ಗ್ರಾಹಕ ಬೆಂಬಲ ಸಂಖ್ಯೆಗಳನ್ನು ಹುಡುಕಬೇಡಿ. PhonePe ಗ್ರಾಹಕ ಬೆಂಬಲವನ್ನು ಸಂಪರ್ಕಿಸುವ ಏಕೈಕ ಅಧಿಕೃತ ಮಾರ್ಗವೆಂದರೆ https://phonepe.com/en/contact_us.html ನಲ್ಲಿ ನೋಡುವುದು.
  • ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.

Twitter ಹ್ಯಾಂಡಲ್‌ಗಳು: https://twitter.com/PhonePe

https://twitter.com/PhonePeSupport

Facebook ಖಾತೆ: https://www.facebook.com/OfficialPhonePe/

ವೆಬ್‌ಸೈಟ್: support.phonepe.com

  • PhonePe ಬೆಂಬಲ ತಂಡ ಎಂದು ಹೇಳಿಕೊಳ್ಳುವ ಯಾವುದೇ ಪರಿಶೀಲಿಸದ ಮೊಬೈಲ್ ನಂಬರ್‌ಗಳಿಗೆ ಎಂದಿಗೂ ಕರೆ ಮಾಡಬೇಡಿ / ಅವುಗಳಿಂದ ಬಂದ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.

ವಂಚಕರು ನಿಮ್ಮನ್ನು ಸಂಪರ್ಕಿಸಿದಾಗ ನೀವು ಏನು ಮಾಡಬೇಕು?

  • ಅಂತಹ ಘಟನೆ ನಡೆದಲ್ಲಿ, ತಕ್ಷಣ ನಿಮ್ಮ ಹತ್ತಿರದ ಸೈಬರ್ ಅಪರಾಧ ಕೇಂದ್ರಕ್ಕೆ ವರದಿ ಮಾಡಿ ಮತ್ತು ಪೊಲೀಸರಿಗೆ ಸಂಬಂಧಿತ ವಿವರಗಳನ್ನು (ಫೋನ್ ನಂಬರ್, ವಹಿವಾಟು ವಿವರಗಳು, ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಇತ್ಯಾದಿ) ಒದಗಿಸುವ ಮೂಲಕ FIR ದಾಖಲಿಸಿ.
  • ನಿಮ್ಮ PhonePe ಆ್ಯಪ್‌ಗೆ ಲಾಗಿನ್ ಮಾಡಿ ಮತ್ತು ‘ಸಹಾಯ’ ವಿಭಾಗಕ್ಕೆ ಹೋಗಿ. ಅದರಲ್ಲಿ ನೀವು ‘ಖಾತೆ ಭದ್ರತಾ ಸಮಸ್ಯೆ / ವಂಚನೆಯ ಚಟುವಟಿಕೆಯನ್ನು ವರದಿ ಮಾಡಿ’ ವಿಭಾಗದ ಅಡಿಯಲ್ಲಿ ವಂಚನೆ ಘಟನೆಯನ್ನು ವರದಿ ಮಾಡಬಹುದು.

ವಿವಿಧ ರೀತಿಯ ವಂಚನೆಗಳ ಕಿರುನೋಟ ಇಲ್ಲಿದೆ:

ಹಣ ವಿನಂತಿ ಸಂಬಂಧಿತ ವಂಚನೆ: PhonePe ಯಲ್ಲಿರುವ ‘ಪಾವತಿ ವಿನಂತಿ’ ವೈಶಿಷ್ಟ್ಯವು ಜನರಿಗೆ ಹಣಕ್ಕಾಗಿ ವಿನಂತಿಯನ್ನು ಕಳುಹಿಸಲು ಸಹಾಯ ಮಾಡುತ್ತದೆ. ನೀವು ಇಂತಹ ಕೋರಿಕೆ ಬಂದಾಗ, ‘ಪಾವತಿಸಿ’ ಬಟನ್ ಕ್ಲಿಕ್ ಮಾಡಿ, ನಿಮ್ಮ UPI ಪಿನ್ ನಮೂದಿಸುವ ಮೂಲಕ ಕೋರಿಕೆ ಸಲ್ಲಿಸಿದ ಬಳಕೆದಾರರಿಗೆ ಹಣವನ್ನು ಕಳುಹಿಸಬಹುದು. ಆದರೆ, ವಂಚಕರು ಈ ವೈಶಿಷ್ಟ್ಯವನ್ನು ಜನರಿಗೆ ಮೋಸ ಮಾಡಲು ಬಳಸುತ್ತಾರೆ. ಅವರು ಜನರಿಗೆ ಇದರ ಮೂಲಕ ಹಣಕ್ಕಾಗಿ ಕೋರಿಕೆ ಸಲ್ಲಿಸುತ್ತಾರೆ, ಅಂದರೆ ‘ಹಣವನ್ನು ಸ್ವೀಕರಿಸಲು ನಿಮ್ಮ UPI ಪಿನ್ ನಮೂದಿಸಿ,“ ಪಾವತಿ ಯಶಸ್ವಿಯಾಗಿದೆ ರೂ. xxx ಪಡೆಯುತ್ತೀರಿ”ಇತ್ಯಾದಿ ಸಂದೇಶಗಳನ್ನು ಬರೆದು ಮೋಸ ಮಾಡುತ್ತಾರೆ.

ಹಣ ವಿನಂತಿ ಸಂಬಂಧಿತ ವಂಚನೆಯ ಬಗ್ಗೆ ಇಲ್ಲಿ ಇನ್ನಷ್ಟು ಓದಿ.

ಹಣ ಸ್ವೀಕರಿಸಲು QR ಕೋಡ್ ಸ್ಕ್ಯಾನ್ ಮಾಡಿ ಎಂಬ ವಂಚನೆ: ವಂಚಕರು Whatsapp ನಂತಹ ಮಲ್ಟಿಮೀಡಿಯಾ ಆ್ಯಪ್‌ಗಳ ಮೂಲಕ ನಿಮಗೆ QR ಕೋಡ್ ಕಳಿಸುತ್ತಾರೆ ಮತ್ತು ಅದನ್ನು ಸ್ಕ್ರ್ಯಾನ್ ಮಾಡಿದರೆ ನಿಮಗೆ ಹಣವನ್ನು ಕಳಿಸುತ್ತೇವೆ ಎಂದು ಹೇಳುತ್ತಾರೆ. ನೆನಪಿಡಿ, ಹಣವನ್ನು ಸ್ವೀಕರಿಸಲು ನೀವು ಯಾವುದೇ QR ಕೋಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ಅಂತಹ ಯಾವುದೇ ವೈಶಿಷ್ಟ್ಯಗಳು ಲಭ್ಯವಿಲ್ಲ. ದಯವಿಟ್ಟು ಅಂತಹ ವಿನಂತಿಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಕಳುಹಿಸುವವರ ಫೋನ್ ನಂಬರ್ ಹಾಗೂ ಇತರ ವಿವರಗಳೊಂದಿಗೆ, ಇಂತಹ ಘಟನೆಯನ್ನು ನಮಗೆ ವರದಿ ಮಾಡಿ.

ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ಪಾವತಿ ವಂಚನೆ: ಬಳಕೆದಾರರು ತಾವು ವಹಿವಾಟುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ವರದಿ ಮಾಡಲು ಸಾಮಾಜಿಕ ಮಾಧ್ಯಮ ಚಾನಲ್‌ಗಳನ್ನು ಆಗಾಗ ಬಳಸುತ್ತಾರೆ. ವಂಚಕರು ಕಂಪನಿಯ ಪ್ರತಿನಿಧಿಗಳಂತೆ ನಟಿಸುತ್ತಾ ಬಳಕೆದಾರರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸುತ್ತಾರೆ. ಅವರು ಬಳಕೆದಾರರಿಗೆ Anydesk, TeamViewer ಅಥವಾ Screenshare ನಂತಹ ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಹೇಳುತ್ತಾರೆ. ನಂತರ, ‘PhonePe ಪರಿಶೀಲನಾ ವ್ಯವಸ್ಥೆ’ಯು ನಿಮ್ಮ ವಿವರಗಳನ್ನು ಸ್ಕ್ಯಾನ್ ಮಾಡುವುದಕ್ಕಾಗಿ ಫೋನ್ ಕ್ಯಾಮೆರಾ ಮುಂದೆ ನಿಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್ ಅನ್ನು ಹಿಡಿಯಿರಿ ಎನ್ನುತ್ತಾರೆ. ನೀವು ಹಾಗೆ ಮಾಡಿದಾಗ, ಅವರಿಗೆ ನಿಮ್ಮ ಕಾರ್ಡ್ ವಿವರಗಳು ದೊರೆತುಬಿಡುತ್ತವೆ. ನಂತರ, ಅವರು ಆ ಫೋನ್‌ನಿಂದ OTP SMS ಕೂಡಾ ಪಡೆದು, ತಮ್ಮ ಸ್ವಂತ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡುಬಿಡುತ್ತಾರೆ.

ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ಮಾಡಲಾಗುವ ಪಾವತಿ ವಂಚನೆಯ ಕುರಿತ ವಿವರಗಳನ್ನು ಇಲ್ಲಿ ಓದಿ.

ಟ್ವಿಟರ್ ವಂಚನೆ: ಬಳಕೆದಾರರು ಮೂಲ PhonePe ಗ್ರಾಹಕ ಬೆಂಬಲ ವಿಭಾಗದ ಹ್ಯಾಂಡಲ್‌ ಬಳಸಿ ಏನು ಪೋಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ವಂಚಕರು ನೋಡುತ್ತಿರುತ್ತಾರೆ (ಉದಾಹರಣೆಗೆ ಕ್ಯಾಶ್‌ಬ್ಯಾಕ್, ಹಣ ವರ್ಗಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತ ಟ್ವೀಟ್‌ಗಳು) ಮತ್ತು ತಕ್ಷಣ ಪ್ರತಿಕ್ರಿಯಿಸುತ್ತಾರೆ. ಅವರು ಬಳಕೆದಾರರನ್ನು ವಂಚಿಸುವ ಒಂದು ಜನಪ್ರಿಯ ಮಾರ್ಗವೆಂದರೆ, ನಕಲಿ ಗ್ರಾಹಕ ಸಹಾಯವಾಣಿ ಸಂಖ್ಯೆಯನ್ನು PhonePe ಸಹಾಯವಾಣಿ ಸಂಖ್ಯೆಗಳಂತೆ ಟ್ವೀಟ್ ಮಾಡುವುದು. ಗ್ರಾಹಕರು ಆ ನಕಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದಾಗ, ವಂಚಕರು ಅವರಿಂದ ಕಾರ್ಡ್ ಮತ್ತು OTP ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಂಡುಬಿಡುತ್ತಾರೆ.

ಟ್ವಿಟರ್ ವಂಚನೆಗಳ ಬಗ್ಗೆ ಇಲ್ಲಿ ಇನ್ನಷ್ಟು ಓದಿ.

ಡೆಬಿಟ್ / ಕ್ರೆಡಿಟ್ ಕಾರ್ಡ್ ಅಥವಾ ಟಾಪ್-ಅಪ್ ವಂಚನೆ: ಇಂತಹ ಸನ್ನಿವೇಶಗಳಲ್ಲಿ, ವಂಚಕರು ನಿಮ್ಮ ಬ್ಯಾಂಕ್, RBI, ಇ-ಕಾಮರ್ಸ್ ವೆಬ್‌ಸೈಟ್ ಅಥವಾ ಲಾಟರಿ ಯೋಜನೆಯ ಪ್ರತಿನಿಧಿಗಳು ಎಂದು ಹೇಳಿಕೊಂಡು ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರು ನಿಮ್ಮ 16 ಅಂಕಿಯ ಕಾರ್ಡ್ ಸಂಖ್ಯೆ ಮತ್ತು CVV ಸಂಖ್ಯೆಯನ್ನು ನೀಡಲು ಅವರು ನಿಮ್ಮನ್ನು ಕೇಳುತ್ತಾರೆ ಮತ್ತು ನಿಮಗೆ ಒಂದು OTP ಇರುವ SMS ಬರುತ್ತದೆ. ವಂಚಕರು ನಿಮ್ಮನ್ನು ಮರಳಿ ಕರೆ ಮಾಡಿ ಪರಿಶೀಲನೆ ಉದ್ದೇಶಗಳಿಗಾಗಿ ಆ OTP ಯನ್ನು ಕೇಳುತ್ತಾರೆ. ನೀವು ಅದನ್ನು ನೀಡಿದ ನಂತರ, ನಿಮ್ಮ ಖಾತೆಯಿಂದ ಹಣ ಕಡಿತಗೊಂಡು ವಂಚಕರ ವಾಲೆಟ್‌ಗೆ ಹೋಗುತ್ತದೆ.

ಟಾಪ್-ಅಪ್ ವಂಚನೆ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ.

ಸೋಷಿಯಲ್ ಎಂಜಿನಿಯರಿಂಗ್ ವಂಚನೆ: ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಿ ನಿಮ್ಮನ್ನು ನಂಬಿಸಿ ಮಾಡುವ ವಂಚನೆಯನ್ನು ಸೋಷಿಯಲ್ ಎಂಜಿನಿಯರಿಂಗ್ ವಂಚನೆ ಎಂದು ಕರೆಯಲಾಗುತ್ತದೆ. ನಿಮ್ಮ ಬ್ಯಾಂಕಿನ ಗ್ರಾಹಕ ಬೆಂಬಲ ಪ್ರತಿನಿಧಿಗಳು ಎಂದು ಹೇಳಿಕೊಂಡು ಈ ವಂಚಕರು ನಿಮಗೆ ಕರೆ ಮಾಡುತ್ತಾರೆ. ನಿಮ್ಮ ನಂಬಿಕೆಯನ್ನು ಗಳಿಸಲು, ನೀವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿವರಗಳನ್ನು (ಜನ್ಮ ದಿನಾಂಕ, ಸ್ಥಳ ಇತ್ಯಾದಿ) ಅವರು ಬಳಸುತ್ತಾರೆ ಮತ್ತು ಸೂಕ್ಷ್ಮ ಬ್ಯಾಂಕ್ ಖಾತೆ / ಕಾರ್ಡ್ ಮಾಹಿತಿಯನ್ನು ನೀಡಲು ನಿಮ್ಮನ್ನು ಕೇಳುತ್ತಾರೆ. ನಂತರ ಅವರು ವಹಿವಾಟನ್ನು ಪೂರ್ಣಗೊಳಿಸಲು OTP ಯನ್ನು ಕೇಳುತ್ತಾರೆ. ಆ ಮೂಲಕ ಅವರು ನಿಮ್ಮ ಡೆಬಿಟ್ ಕಾರ್ಡ್ ಬಳಸಿ ತಮ್ಮ ವಾಲೆಟ್ ಅನ್ನು ಟಾಪ್ ಅಪ್ ಮಾಡಿಕೊಳ್ಳುತ್ತಾರೆ.

ಸೋಷಿಯಲ್ ಎಂಜಿನಿಯರಿಂಗ್ ವಂಚನೆಗಳ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ಸಿಮ್ ಸ್ವಾಪ್ ವಂಚನೆ: ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ನಿಮ್ಮ ಫೋನ್ ನಂಬರ್‌ಗೆ ಹೊಸ ಸಿಮ್ ಅನ್ನು ಪಡೆಯುವ ವಂಚನೆಯನ್ನು ಸಿಮ್ ಸ್ವಾಪ್ ಹಗರಣ ಎನ್ನಲಾಗುತ್ತದೆ. ಇದನ್ನು ಮಾಡುವ ಮೂಲಕ ಅವರು ನಿಮ್ಮ ಬ್ಯಾಂಕ್ ಖಾತೆಯಿಂದ ಪಾವತಿಗಳನ್ನು ಅಧಿಕೃತಗೊಳಿಸಲು ಅಗತ್ಯವಾದ OTP ಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಇದರಲ್ಲಿ, ವಂಚಕರು ನಿಮ್ಮ ಮೊಬೈಲ್ ಆಪರೇಟರ್‌ ಪ್ರತಿನಿಧಿ ಎಂಬಂತೆ ನಟಿಸುತ್ತಾ, ನಿಮಗೆ ಕರೆ ಮಾಡುತ್ತಾರೆ ಮತ್ತು ನಿಮ್ಮ ನೆಟ್‌ವರ್ಕ್ ಅನ್ನು ಅಪ್‌ಗ್ರೇಡ್ ಮಾಡಲು SMS ಅನ್ನು ಫಾರ್ವರ್ಡ್ ಮಾಡಲು ಕೇಳುತ್ತಾರೆ. ಈ SMS ನಲ್ಲಿ ಅವರು ಖರೀದಿಸಿದ ಹೊಸ ಸಿಮ್‌ನ ಹಿಂಭಾಗದಲ್ಲಿರುವ 20 ಅಂಕಿಯ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಈ SMS ನಿಮ್ಮ ಪ್ರಸ್ತುತ ಸಿಮ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ನಕಲಿ ಸಿಮ್ ಅನ್ನು ಸಕ್ರಿಯಗೊಳಿಸುತ್ತದೆ.

ಸಿಮ್ ಸ್ವಾಪ್ ವಂಚನೆಯ ಬಗ್ಗೆ ಇಲ್ಲಿ ಇನ್ನಷ್ಟು ಓದಿ.

Keep Reading