PhonePe Blogs Main Featured Image

Trust & Safety

ಹೆಚ್ಚುತ್ತಿರುವ ಉದ್ಯೋಗ ಹಗರಣ: ಉದ್ಯೋಗಾಕಾಂಕ್ಷಿಗಳನ್ನು ವಂಚಕರು ವಂಚಿಸುವ ಬಗೆ

PhonePe Regional|3 min read|27 January, 2025

URL copied to clipboard

ಉದ್ಯೋಗಾವಕಾಶಗಳ ಹುಡುಕಾಟ ಹೆಚ್ಚುತ್ತಿರುವ ಮತ್ತು ಉದ್ಯೋಗಾಕಾಂಕ್ಷಿಗಳು ಬೇಗನೆ ಉದ್ಯೋಗವನ್ನು ಪಡೆದುಕೊಳ್ಳುವ ಒತ್ತಡ ಅನುಭವಿಸುತ್ತಿರುವ ಈ ಕಾಲಘಟ್ಟದಲ್ಲಿ ವಂಚಕರು ಇದರ ಲಾಭ ಪಡೆಯುತ್ತಿದ್ದಾರೆ. ಪ್ರಸ್ತುತ ದಿನಮಾನದಲ್ಲಿ ಉದ್ಯೋಗ ವಂಚನೆಯ ಅತ್ಯಂತ ಕಳವಳಕಾರಿ ಅಂಶವೆಂದರೆ ಅಧಿಕೃತವಾಗಿ ಕಾಣುವ ನಕಲಿ ಇಮೇಲ್ ಹ್ಯಾಂಡ್ಲರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆ. ವ್ಯಕ್ತಿಗಳನ್ನು ತಮ್ಮ ಹಣವನ್ನು ಹಂಚಿಕೊಳ್ಳುವಂತೆ ವಂಚಿಸಲು ಸ್ಕ್ಯಾಮರ್‌ಗಳು ಇವುಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.ನಿರುದ್ಯೋಗ ದರ ಹೆಚ್ಚಿರುವುದರೊಂದಿಗೆ ಮನೆಯಿಂದಲೇ ಕೆಲಸ ಮಾಡುವ  ಉದ್ಯೋಗಗಳು ಅಧಿಕವಾಗಿರುವುದು ಉದ್ಯೋಗ ಹಗರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಸೆಪ್ಟೆಂಬರ್ 2024 ರ ಅನ್ವಯ ದೇಶಾದ್ಯಂತ ಸರಾಸರಿ ನಿರುದ್ಯೋಗ ದರವು 7.8% ಆಗಿದೆ. ಈ ಪರಿಸ್ಥಿತಿಯು ಕೆಲಸದ ನಿರೀಕ್ಷೆಯಲ್ಲಿರುವ ಮುಗ್ಧ ಉದ್ಯೋಗಾಂಕ್ಷಿಗಳನ್ನು ಶೋಷಿಸಲು ವಂಚಕರಿಗೆ ಅವಕಾಶ ಮಾಡಿಕೊಟ್ಟಿದೆ.

ನಕಲಿ ಇಮೇಲ್ ಹ್ಯಾಂಡ್ಲರ್‌ಗಳ ಉದಯ

ಕಾನೂನುಬದ್ಧ ಕಾರ್ಪೊರೇಟ್ ವಿಳಾಸಗಳ೦ತೆಯೇ ಇರುವ ಇಮೇಲ್ ವಿಳಾಸಗಳನ್ನು ರಚಿಸುವುದು ವಂಚಕರು ಬಳಸುವ ಜನಪ್ರಿಯ ವಂಚನೆಯ ವಿಧಾನವಾಗಿದೆ. ಈ ಇಮೇಲ್ ಹ್ಯಾಂಡ್ಲರ್‌ಗಳು ಸಾಮಾನ್ಯವಾಗಿ ಪ್ರಸಿದ್ಧ ಕಂಪನಿಯ ಹೆಸರನ್ನು ಅನುಕರಿಸುತ್ತಾರೆ. ಇದರಿಂದ ಉದ್ಯೋಗಾಂಕ್ಷಿಗಳು ತಾವು ಪ್ರತಿಷ್ಠಿತ ಕಂಪನಿಯೊಂದಿಗೆ ಸಂವಹನ ನಡೆಸಿಸುತಿದ್ದೇವೆ ಎಂದು ನಂಬುತ್ತಾರೆ. 

ಉದಾಹರಣೆಗೆ, ಸ್ಕ್ಯಾಮರ್ [email protected] ಅಥವಾ [email protected] ನಂತಹ ಇಮೇಲ್ ವಿಳಾಸವನ್ನು ಬಳಸಬಹುದು. ಇದು ನಿಜವಾದ ಕಾರ್ಪೊರೇಟ್ ಇಮೇಲ್ ವಿಳಾಸಕ್ಕೆ ಹೋಲುತ್ತದೆ. ಸಾಮಾನ್ಯವಾಗಿ, ಈ ಇಮೇಲ್‌ಗಳನ್ನು ಅಧಿಕೃತ ಕಂಪನಿಯ ಲೋಗೋಗಳು, ವಿಳಾಸಗಳು ಮತ್ತು ವೃತ್ತಿಪರ ಭಾಷೆಯೊಂದಿಗೆ ಔಪಚಾರಿಕ ಸಂವಹನಕ್ಕೆ ಹೊಂದಿಕೆಯಾಗುವಂತೆ, ಅಧಿಕೃತವಾಗಿ ಕಾಣುವಂತೆ ರಚಿಸಲಾಗುತ್ತದೆ.

ವಂಚಕರು ತಾವು ವಂಚಿಸಲು ಪ್ರಯತ್ನಿಸುತ್ತಿರುವ ಉದ್ಯೋಗ ಅರ್ಜಿಗಳ ಡೊಮೇನ್‌ಗೆ ಅನುಗುಣವಾಗಿ ಆನ್‌ಲೈನ್ ಸಂದರ್ಶನ ಪರೀಕ್ಷೆಗಳನ್ನು ರಚಿಸುತ್ತಾರೆ. ಇದರಿಂದ ಉದ್ಯೋಗಾಕಾಂಕ್ಷಿಗಳಿಗೆ ಈ ಪ್ರಕ್ರಿಯೆಯಲ್ಲಿ ನಂಬಿಕೆಯು ಹೆಚ್ಚುತ್ತದೆ. 

ಉದ್ಯೋಗಾಕಾಂಕ್ಷಿಗಳು ಇಮೇಲ್‌ಗೆ ಪ್ರತಿಕ್ರಿಯಿಸಿದ ನಂತರ, ಅವರಿಗೆ ಒಂದು ಆಕರ್ಷಕ ಉದ್ಯೋಗಾವಕಾಶದ ಪ್ರಸ್ತಾವ ನೀಡಲಾಗುತ್ತದೆ  ಮತ್ತು ಅವರು ಪ್ರಾರಂಭಿಸುವ ಮೊದಲು “ಪ್ರಕ್ರಿಯೆ ಶುಲ್ಕ” ಅಥವಾ “ತರಬೇತಿ ಶುಲ್ಕ” ಪಾವತಿಸಲು ಕೇಳಲಾಗುತ್ತದೆ. ಹಿನ್ನೆಲೆ ಪರಿಶೀಲನೆ, ತರಬೇತಿ ಅಥವಾ ಸಲಕರಣೆಗಳ ವೆಚ್ಚಗಳಿಗೆ ಈ ಶುಲ್ಕಗಳು ಅಗತ್ಯವೆಂದು ಸ್ಕ್ಯಾಮರ್‌ಗಳು ಹೇಳಿಕೊಳ್ಳುತ್ತಾರೆ. ಆದಾಗ್ಯೂ, ಪಾವತಿ ಮಾಡಿದ ನಂತರ, ಉದ್ಯೋಗದ ಪ್ರಸ್ತಾಪವು ಕಣ್ಮರೆಯಾಗುತ್ತದೆ ಮತ್ತು ವಂಚಕರು ಬಲಿಪಶುವಿನ ಹಣದೊಂದಿಗೆ ಕಣ್ಮರೆಯಾಗುತ್ತಾರೆ.

ಈ ವಿಧಾನವು ಅತ್ಯಂತ ಅಪಾಯಕಾರಿ ಏಕೆಂದರೆ  ಈ ವಂಚಕ ಇಮೇಲ್ ವಿಳಾಸಗಳಿಗೆ ಅತ್ಯಂತ ಜಾಗರೂಕ ವ್ಯಕ್ತಿಗಳು ಸಹ ಬಲಿಯಾಗುವ ಸಂಭವವಿರುತ್ತದೆ. ಇದು ಉದ್ಯೋಗದ ಕೊಡುಗೆಗಳ, ವಿಶೇಷವಾಗಿ ಮುಂಗಡ ಪಾವತಿಯನ್ನು ಕೋರುವ ಉದ್ಯೋಗದ ಕೊಡುಗೆಗಳ ನ್ಯಾಯಸಮ್ಮತತೆಯನ್ನು ಪರಿಶೀಲಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಸಾಮಾಜಿಕ ಮಾಧ್ಯಮ ಮತ್ತು ಉದ್ಯೋಗ ವೇದಿಕೆಗಳ ಮೂಲಕ ವಂಚನೆಗಳು

ಇತ್ತೀಚಿನ ವರ್ಷಗಳಲ್ಲಿ, ಸ್ಕ್ಯಾಮರ್‌ಗಳು ತಮ್ಮ ಮುಂದಿನ ಬಲಿಪಶುವನ್ನು ಹುಡುಕಲು ಸಾಮಾಜಿಕ ಮಾಧ್ಯಮ ಮತ್ತು ಉದ್ಯೋಗ ವೇದಿಕೆಗಳಳನ್ನು ಬಳಸುತ್ತಿದ್ದಾರೆ.

ವಂಚಕರು ಸಾಮಾನ್ಯವಾಗಿ ಗೌರವಾನ್ವಿತ ಕಂಪನಿಯವರೆಂದು ಹೇಳಿಕೊಂಡು ಆಕರ್ಷಕ ಕೊಡುಗೆಯೊಂದಿಗೆ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುತ್ತಾರೆ. ಅವರು ಸಂದೇಶಗಳ ಮೂಲಕ ವ್ಯಕ್ತಿಗಳನ್ನು ಸಂಪರ್ಕಿಸಬಹುದು ಅಥವಾ ಜನರು ಸಕ್ರಿಯವಾಗಿ ಉದ್ಯೋಗವನ್ನು ಹುಡುಕುತ್ತಿರುವ ಗುಂಪುಗಳು ಅಥವಾ ಇತರ ವೇದಿಕೆಗಳಲ್ಲಿ ನಕಲಿ ಉದ್ಯೋಗ ಪಟ್ಟಿಗಳನ್ನು ಪೋಸ್ಟ್ ಮಾಡಬಹುದು. ಈ ಪಟ್ಟಿಗಳು ಸಾಮಾನ್ಯವಾಗಿ ಕಡಿಮೆ ಅನುಭವ ಅಥವಾ ಕೌಶಲ್ಯಗಳ ಅಗತ್ಯವಿರುವ ಹೆಚ್ಚಿನ ಸಂಬಳದ ಹುದ್ದೆಗಳು ಮತ್ತು ಮನೆಯಿಂದ ಕೆಲಸ ಮಾಡುವ ಪ್ರಯೋಜನಗಳ ಭರವಸೆ ನೀಡುವುದರಿಂದ ಇದು ತ್ವರಿತವಾಗಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳನ್ನು ತಕ್ಷಣ ಆಕರ್ಷಿಸುತ್ತದೆ. 

ವ್ಯಕ್ತಿ ಆಸಕ್ತಿ ವ್ಯಕ್ತಪಡಿಸಿದಾಗ, ಸ್ಕ್ಯಾಮರ್ ನಕಲಿ KYC ಪ್ರಕ್ರಿಯೆಯನ್ನು ನಡೆಸುತ್ತಾರೆ. ಈ ಪ್ರಕ್ರಿಯೆಗಳು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಕಾಣಿಸುವ ಮೂಲಕ ವಿಶ್ವಾಸಾರ್ಹ ಎನಿಸಬಹುದು. ನಾಮ ಮಾತ್ರದ ಪರಿಶೀಲನೆಯ ನಂತರ, ಉದ್ಯೋಗಾಕಾಂಕ್ಷಿಗೆ ಅವರನ್ನು ಕೆಲಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಂಬಿಸಿ, ಅವರು ಕೆಲವು ಕಾರ್ಯಗಳು ಅಥವಾ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಅವರ ಸಂಬಳವನ್ನು ಪಡೆಯಲು ನಾಮ ಮಾತ್ರದ ಅಡ್ವಾನ್ಸ್ ಪಾವತಿಸಲು ಸೂಚಿಸಲಾಗುತ್ತದೆ. ಇದು “ಪಾವತಿ ಪ್ರಕ್ರಿಯೆ ಶುಲ್ಕ” ಎಂದೋ ಅಥವಾ ಬ್ಯಾಂಕ್ ಖಾತೆಯ ಪರಿಶೀಲನೆಗಾಗಿ  ಎಂದೋ  ಸ್ಕ್ಯಾಮರ್ ಹೇಳಬಹುದು. ವಿಶ್ವಾಸ ಗಳಿಸಲು ಅವರು ಖಾತೆಗೆ ಸಣ್ಣ ಮೊತ್ತವನ್ನೂ ಸಹ ಜಮಾ ಮಾಡಬಹುದು. ಆದರೆ ಕೊನೆಯಲ್ಲಿ, ಅವರು ವ್ಯಕ್ತಿಯಿಂದ ದೂರವಾಗುವುದಲ್ಲದೆ ಅವರು ಸಂಪರ್ಕವನ್ನು ಕಡಿತಗೊಳಿಸುತ್ತಾರೆ. ಈ ವಂಚನೆಗಳ ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಅವುಗಳು ಆಕರ್ಷಕ ಪ್ಯಾಕೇಜ್ ಆಗಿರುವುದಲ್ಲದೆ ನ್ಯಾಯಸಮ್ಮತತೆಯ ಹೊದಿಕೆಯನ್ನು ಹೊಂದಿರುತ್ತವೆ. ಉದ್ಯೋಗಾಕಾಂಕ್ಷಿಗಳು ನಕಲಿ ಒಪ್ಪಂದಗಳು, ಅಧಿಕೃತವಾಗಿ ಕಾಣಿಸುವಂತಹ ಶೀರ್ಷಿಕೆಗಳು ಮತ್ತು ಸಂಬಳದ ಭರವಸೆಗಳನ್ನು ಪಡೆಯಬಹುದು. ಆದರೆ ಹಣವನ್ನು ಕಳುಹಿಸಿದ ನಂತರವೇ ಅವರಿಗೆ ಸ್ಕ್ಯಾಮರ್‌ಗಳನ್ನು ತಲುಪಲು ಸಾಧ್ಯವಿಲ್ಲ ಎಂದು ಅರಿವಾಗುತ್ತದೆ.

ಗಮನಿಸಬೇಕಾದ ಎಚ್ಚರಿಕೆಯ ಕರೆಗಂಟೆಗಳು

ಈ ಮೋಸದ ತಂತ್ರಗಳನ್ನು ತಪ್ಪಿಸಲು ಉದ್ಯೋಗ ಹಗರಣದ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಗಮನಿಸಬೇಕಾದ ಕೆಲವು ಎಚ್ಚರಿಕೆಗಳು ಇಲ್ಲಿವೆ:

  1. ಅಪೇಕ್ಷಿಸದ ಉದ್ಯೋಗ ಕೊಡುಗೆಗಳು: ನೀವು ಕೆಲಸಕ್ಕೆ ಅರ್ಜಿ ಸಲ್ಲಿಸದಿದ್ದರೆ ಮತ್ತು ಯಾರಾದರೂ ಅನಿರೀಕ್ಷಿತವಾಗಿ ನಿಮ್ಮನ್ನು ಸಂಪರ್ಕಿಸುತ್ತಿದ್ದರೆ, ಅದು ಹಗರಣವಾಗಿರಬಹುದು.
  2. ಹಣಕ್ಕಾಗಿ ವಿನಂತಿಗಳು: ನೀವು ಕೆಲಸ ಮಾಡಲು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಸಂಬಳವನ್ನು ಪಡೆಯುವ ಮೊದಲು ಯಾವುದೇ ಹಣವನ್ನು ಪಾವತಿಸಲು ಒಂದು ಕಾನೂನುಬದ್ಧ ಕಂಪನಿಯು ನಿಮ್ಮನ್ನು ಎಂದಿಗೂ ಕೇಳುವುದಿಲ್ಲ. “ತರಬೇತಿ ಶುಲ್ಕಗಳು,” “ಹಿನ್ನೆಲೆ ಪರಿಶೀಲನೆ ಶುಲ್ಕಗಳು” ಅಥವಾ “ಇತರೆ ಶುಲ್ಕ” ವಿನಂತಿಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ.
  3. ತುಂಬಾ ಒಳ್ಳೆಯ ಕೊಡುಗೆಗಳು: ವಂಚಕರು ಸಾಮಾನ್ಯವಾಗಿ ಕನಿಷ್ಠ ಶ್ರಮ ಅಥವಾ ಅರ್ಹತೆಗಳ ಅಗತ್ಯವಿರುವ ಹೆಚ್ಚಿನ ಸಂಬಳದ ಉದ್ಯೋಗಗಳಂತಹ ಅವಾಸ್ತವಿಕ ಭರವಸೆಗಳೊಂದಿಗೆ ಜನರನ್ನು ಆಕರ್ಷಿಸುತ್ತಾರೆ.
  4. ನಕಲಿ ಇಮೇಲ್ ವಿಳಾಸಗಳು: ಇಮೇಲ್ ವಿಳಾಸಗಳನ್ನು ಯಾವಾಗಲೂ ಎರಡು ಬಾರಿ ಪರಿಶೀಲಿಸಿ. ಹೆಚ್ಚುವರಿ ಅಕ್ಷರಗಳು, ಸಂಖ್ಯೆಗಳು ಅಥವಾ ಅಸಾಮಾನ್ಯ ಡೊಮೇನ್ ಹೆಸರುಗಳಂತಹ, ಅಧಿಕೃತ ಡೊಮೇನ್‌ಗಳಿಗಿಂತ ಸ್ವಲ್ಪ ವ್ಯತ್ಯಾಸ ಹೊಂದಿರುವ ವಿಳಾಸಗಳ ಬಗ್ಗೆ ಎಚ್ಚರವಿರಲಿ.
  5. ತ್ವರಿತವಾಗಿ ಕಾರ್ಯನಿರ್ವಹಿಸಲು ಒತ್ತಡ: ಯೋಚಿಸಲು ಅಥವಾ ಪರಿಶೀಲಿಸಲು ಸಾಕಷ್ಟು ಸಮಯ ನೀಡದೆ ನೀವು ಶೀಘ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತೇಜಿಸಿದರೆ, ಅದು ವಂಚನೆಯಾಗಬಹುದು.
  6. ವೃತ್ತಿಪರವಲ್ಲದ ಸಂವಹನ: ವಂಚಕರು ಕಳಪೆ ವ್ಯಾಕರಣ, ವಿಚಿತ್ರ ಭಾಷೆ ಅಥವಾ ಸಾಮಾನ್ಯ ಭಾಷೆಯನ್ನು (ನಿಮ್ಮ ಹೆಸರಿನ ಬದಲಿಗೆ “ಪ್ರಿಯ ಅಭ್ಯರ್ಥಿ”) ಬಳಸಬಹುದು. ಇಂತಹ ಕೊಡುಗೆಗಳು ನಕಲಿಯಾಗಿರಬಹುದು.

ನಿಮ್ಮನ್ನು ರಕ್ಷಿಸಿಕೊಳ್ಳುವ ಬಗೆ

ಉದ್ಯೋಗ ಹಗರಣಗಳಿಗೆ ಬಲಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು, ಈ ಸಲಹೆಗಳನ್ನು ಅನುಸರಿಸಿ:

  • ಕಂಪನಿಯ ಬಗ್ಗೆ ಪರಿಶೀಲಿಸಿ: ಕಂಪನಿಯನ್ನು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ ಅನ್ನು ನೋಡಿ ಪರಿಶೀಲಿಸಿ. ಉದ್ಯೋಗದ ಪ್ರಸ್ತಾಪದ ಕಾನೂನುಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸಂವಹನ ಮಾರ್ಗಗಳ ಮೂಲಕ ನೇರವಾಗಿ ಅವರನ್ನು ಸಂಪರ್ಕಿಸಿ.
  • ಉದ್ಯೋಗಕ್ಕಾಗಿ ಎಂದಿಗೂ ಹಣ ಪಾವತಿಸಬೇಡಿ: ಪ್ರತಿಷ್ಠಿತ ಉದ್ಯೋಗದಾತರು ಉದ್ಯೋಗ ಅಥವಾ ಸಂಬಳ ಪ್ರಕ್ರಿಯೆಗೆ ಬದಲಾಗಿ ಹಣವನ್ನು ಕೇಳುವುದಿಲ್ಲ. ನಿಮ್ಮಿಂದ ಹಣ ಕೇಳಿದರೆ, ಅದು ಹಗರಣದ ಸ್ಪಷ್ಟ ಸೂಚನೆಯಾಗಿದೆ.
  • ವಿಶ್ವಾಸಾರ್ಹ ವೇದಿಕೆಗಳನ್ನು ಬಳಸಿ: ಕಂಪನಿಗಳು ನಿಜವಾದ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡುವ ಪ್ರಸಿದ್ಧ ಉದ್ಯೋಗ ಮಂಡಳಿಗಳು ಮತ್ತು ವೃತ್ತಿ ವೇದಿಕೆಗಳನ್ನು ಮಾತ್ರ ಬಳಸಿ. ಕಾನೂನುಬದ್ಧತೆಯನ್ನು ಪರಿಶೀಲಿಸುವುದು ಕಷ್ಟವಾಗಿರುವುದರಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೀಡಲಾಗುವ ಕೊಡುಗೆಗಳ ಬಗ್ಗೆ ಜಾಗರೂಕರಾಗಿರಿ.
  • ಇಮೇಲ್ ಡೊಮೇನ್ ಪರಿಶೀಲಿಸಿ: ಪೂರ್ಣ ಇಮೇಲ್ ವಿಳಾಸವನ್ನು ನೋಡಿ ಮತ್ತು ಅದು ಕಂಪನಿಯ ಅಧಿಕೃತ ಡೊಮೇನ್‌ನಿಂದ ಬಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಮನದ ಮಾತನ್ನು ಕೇಳಿರಿ: ಉದ್ಯೋಗದ ಪ್ರಸ್ತಾಪದ ಬಗ್ಗೆ ಏನಾದರೂ ಅಸಮಾಧಾನವಿದ್ದರೆ, ಎಚ್ಚರಿಕೆಯಿಂದಿರುವುದು ಉತ್ತಮ. ಯಾವುದೇ ಕಾನೂನುಬದ್ಧ ಉದ್ಯೋಗಕ್ಕೆ ನೀವು ಮುಂಗಡವಾಗಿ ಹಣವನ್ನು ಕಳುಹಿಸುವ ಅಗತ್ಯವಿಲ್ಲ.

ಕೊನೆಯ ಮಾತು

ಉದ್ಯೋಗ ವಂಚನೆಗಳ ಸ್ವರೂಪ ದಿನೇ ದಿನೇ ಬದಲಾಗುತ್ತಿವೆ ಮತ್ತು ವಂಚಕರು ಜಟಿಲ ತಂತ್ರಗಳನ್ನು ಬಳಸುತ್ತಿದ್ದಾರೆ. ಅಧಿಕೃತ ಕಂಪನಿ ಡೊಮೇನ್‌ಗಳನ್ನು ಅನುಕರಿಸುವ ನಕಲಿ ಇಮೇಲ್ ವಿಳಾಸಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಉದ್ಯೋಗ ಪಟ್ಟಿಗಳು ಯಾರು ಕೂಡ ಅವುಗಳನ್ನು ನಂಬುವಂತಿರುತ್ತವೆ. ಉದ್ಯೋಗಾಕಾಂಕ್ಷಿಗಳು ವಿಶೇಷವಾಗಿ ತುಂಬಾ ಒಳ್ಳೆಯ ಆಫರ್‌ಗಳು ತೋರಿದಾಗ ಅಥವಾ ಮುಂಗಡ ಪಾವತಿ ಅಗತ್ಯವಿರುವಾಗ ಜಾಗರೂಕರಾಗಿರಬೇಕು ಮತ್ತು ಸಂಶಯದಿಂದಿರಬೇಕು. ಯಾವುದೇ ಉದ್ಯೋಗದ ಪ್ರಸ್ತಾಪದ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ಯಾವಾಗಲೂ ಸಮಯ ತೆಗೆದುಕೊಳ್ಳಿ ಮತ್ತು ಈ ಯೋಜನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ನಿಮ್ಮ ಹಣಕಾಸಿನ ಮಾಹಿತಿಯನ್ನು ರಕ್ಷಿಸಿ. ಜಾಗೃತ ಮತ್ತು ಜಾಗರೂಕರಾಗಿರುವುದರ ಮೂಲಕ, ನೀವು ಸುರಕ್ಷಿತ ಉದ್ಯೋಗ ಹುಡುಕಾಟದ ಅನುಭವವನ್ನು ಖಚಿತಪಡಿಸಿಕೊಳ್ಳಬಹುದು ಮತ್ತು ನಿಮ್ಮ ಕೆಲಸದ ಅವಶ್ಯಕತೆಯನ್ನು ಬಳಸಿಕೊಳ್ಳಲು ನೋಡುತ್ತಿರುವ ವಂಚಕರಿಂದ ದೂರವಿರಬಹುದು.

ನೀವು ಉದ್ಯೋಗ ಹಗರಣದ ಬಲಿಪಶುವಾಗಿದ್ದರೆ ಏನು ಮಾಡಬೇಕು

PhonePe ನಲ್ಲಿ ಉದ್ಯೋಗ ವಂಚಕರಿಂದ ನೀವು ಮೋಸ ಹೋಗಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ಸಮಸ್ಯೆಯನ್ನು ತಿಳಿಸಬಹುದು:

  1. PhonePe ಆ್ಯಪ್‌: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ತಿಳಿಸಿ.
  2. PhonePe ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ತಿಳಿಸಲು ನೀವು PhonePe ಗ್ರಾಹಕ ಸೇವಾ ಸಂಖ್ಯೆ 80–68727374 / 022–68727374 ಗೆ ಕರೆ ಮಾಡಬಹುದು, ನಂತರ ಗ್ರಾಹಕ ಸೇವಾ ಏಜೆಂಟ್ ನಿಮ್ಮ ಸಮಸ್ಯೆಗೆ ಟಿಕೆಟ್ ರಚಿಸಿ ಸಹಾಯ ಮಾಡುತ್ತಾರೆ.
  3. ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ವೆಬ್‌ಫಾರ್ಮ್ https://support.phonepe.com/ ಬಳಸಿಕೊಂಡು ಟಿಕೆಟ್ ರಚಿಸಬಹುದು.
  4. ಸಾಮಾಜಿಕ ಮಾಧ್ಯಮ: ನೀವು ವಂಚನೆಯ ಘಟನೆಗಳನ್ನು PhonePe ಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ವರದಿ ಮಾಡಬಹುದು.

ಟ್ವಿಟ್ಟರ್— https://twitter.com/PhonePeSupport

ಫೇಸ್‌ಬುಕ್— https://www.facebook.com/OfficialPhonePe

5. ದೂರು: ಅಸ್ತಿತ್ವದಲ್ಲಿರುವ ದೂರಿನ ಕುರಿತು ಹೆಚ್ಚಿನ ಮಾಹಿತಿ ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಆಗಬಹುದು ಮತ್ತು ಈ ಹಿಂದೆ ಸಲ್ಲಿಸಲಾದ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.

6. ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು 1930 ಮೂಲಕ ಸಂಪರ್ಕಿಸಬಹುದು.

ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಂದಿರದ, PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading