PhonePe Blogs Main Featured Image

Trust & Safety

ಸೋಶಿಯಲ್ ಇಂಜಿನೀಯರಿಂಗ್ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?

PhonePe Regional|2 min read|10 May, 2021

URL copied to clipboard

ಸಾಮಾಜಿಕ ಮಾಧ್ಯಮವು ಗ್ರಾಹಕ ಬೆಂಬಲವನ್ನು ನಿಮಗೆ ಒಂದು ಹಂತ ಹತ್ತಿರಕ್ಕೆ ತಂದಿದೆ. ಇದರಿಂದಾಗಿ, ನಿಮಗೆ ಯಾವುದೇ ಸಮಸ್ಯೆಗೆ ಪರಿಹಾರ ಬೇಕಾದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ಲಾಗಿನ್ ಆಗಿ ಗ್ರಾಹಕ ಸೇವಾ ಪ್ರತಿನಿಧಿಗಳೊಂದಿಗೆ ನೀವು ನೇರವಾಗಿ ಸಂವಹಿಸಬಹುದಾಗಿದೆ.

ಆದರೆ, ಕೆಲವೊಮ್ಮೆ ಈ ಸಂವಹನಗಳ ಸಮಯದಲ್ಲಿ, ನಿಮ್ಮ ವೈಯಕ್ತಿಕ ವಿವರಗಳನ್ನು ಒಂದು ಸುರಕ್ಷಿತ ಮಾಧ್ಯಮದ ಮೂಲಕ ನೀಡುವ ಬದಲು ನೀವು ಸಾಮಾಜಿಕ ಮಾಧ್ಯಮಗಳ ಫೋರಂಗಳಲ್ಲಿ ಹಂಚಿಕೊಂಡುಬಿಡಬಹುದು. ಇಂತಹ ವಿವರಗಳನ್ನು ವಂಚಕರು ದುರ್ಬಳಕೆ ಮಾಡಿಕೊಂಡು ಸುಲಭದಲ್ಲಿ ನಿಮಗೆ ಮೋಸ ಮಾಡಿಬಿಡಬಹುದು.

ಪ್ರಮುಖ ಸೂಚನೆ: PhonePe ಯಾವತ್ತೂ ನಿಮ್ಮ ವೈಯಕ್ತಿಕ ವಿವರಗಳಿಗಾಗಿ ಕೇಳುವುದಿಲ್ಲ. Phonepe.com ಡೊಮೇನ್ ಹೊರತುಪಡಿಸಿ PhonePe ಹೆಸರಿನಲ್ಲಿ ಬರುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ಒಂದು ವೇಳೆ ಇದು ವಂಚಕರಿಂದ ಬಂದದ್ದು ಎಂದು ಅನುಮಾನ ಬಂದಲ್ಲಿ, ದಯವಿಟ್ಟು ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

ಸೋಶಿಯಲ್ ಎಂಜಿನಿಯರಿಂಗ್ ಎಂದರೇನು?

ಸೋಶಿಯಲ್ ಎಂಜಿನಿಯರಿಂಗ್ ಎಂದರೆ ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಬಳಸಿಕೊಂಡು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುವುದು. ಇಂತಹ ವಂಚಕರು ನಿಮಗೆ ಯಾವುದೋ ಒಂದು ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ನಿಮ್ಮ ವಿಶ್ವಾಸವನ್ನು ಗಳಿಸುತ್ತಾರೆ. ಆದರೆ, ಅವರು ನಿಜಕ್ಕೂ ನಿಮ್ಮ ವೈಯಕ್ತಿಕ ವಿವರಗಳನ್ನು ನಿಮ್ಮಿಂದ ಹಣ ಕದಿಯಲು ಬಳಸುತ್ತಿರುತ್ತಾರೆ.

ಸೋಶಿಯಲ್ ಎಂಜಿನಿಯರಿಂಗ್ ಹೇಗೆ ಕೆಲಸ ಮಾಡುತ್ತದೆ?

  • ವಂಚಕರು ನಿಮ್ಮ ಬ್ಯಾಂಕ್ ಗ್ರಾಹಕ ಬೆಂಬಲ ಪ್ರತಿನಿಧಿಗಳು ಎಂದು ಹೇಳಿಕೊಂಡು ನಿಮಗೆ ಕರೆ ಮಾಡುತ್ತಾರೆ. ನೀವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿವರಗಳನ್ನು ನಿಮಗೆ ತಿಳಿಸಿ, ಅವರು ನಿಜವಾಗಿಯೂ ಬ್ಯಾಂಕ್ ಪ್ರತಿನಿಧಿಗಳೇ ಹೌದು ಎಂಬಂತೆ ನಿಮ್ಮನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಅನಂತರ ನಿಮ್ಮನ್ನು ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಲು ಕೇಳುತ್ತಾರೆ.
  • ವಂಚಕರು ನಿಮ್ಮ ವ್ಯವಹಾರವನ್ನು ಪೂರ್ಣಗೊಳಿಸಲು OTP ಒದಗಿಸುವಂತೆ ಕೇಳುತ್ತಾರೆ ಮತ್ತು ನಿಮ್ಮ ಡೆಬಿಟ್ ಕಾರ್ಡ್ ಬಳಸಿ ತಮ್ಮ ವಾಲೆಟ್ ಟಾಪ್ ಅಪ್ ಮಾಡಿಕೊಳ್ಳುತ್ತಾರೆ.
  • ವಹಿವಾಟು ಪೂರ್ಣಗೊಂಡ ನಂತರ, ಅವರು ತಮ್ಮ ವಾಲೆಟ್‌ನಿಂದ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕಳಿಸಿಕೊಳ್ಳುತ್ತಾರೆ.

ದಯವಿಟ್ಟು ನೆನಪಿಡಿ: ನಿಜವಾದ ಗ್ರಾಹಕರ ಪ್ರತಿನಿಧಿಗಳು ಎಂದಿಗೂ ನಿಮ್ಮ ಪೂರ್ಣ ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳನ್ನು ಅಥವಾ OTP ಸಂಖ್ಯೆಯನ್ನು ಹಂಚಿಕೊಳ್ಳಲು ಕೇಳುವುದಿಲ್ಲ. ಜೊತೆಗೆ, ಅವರು ಅಧಿಕೃತ ಲ್ಯಾಂಡ್‌ಲೈನ್ ​​ಸಂಖ್ಯೆಗಳಿಂದ ಮಾತ್ರ ನಿಮಗೆ ಕರೆ ಮಾಡುತ್ತಾರೆ, ಮೊಬೈಲ್ ಸಂಖ್ಯೆಯಿಂದ ಅಲ್ಲ. ಇನ್ನು, ನಿಮ್ಮ ಬ್ಯಾಂಕ್‌ನ ಅಧಿಕೃತ ಡೊಮೇನ್ ಮೂಲಕ ಅಲ್ಲದೇ ಬೇರೆ ಕಡೆಯಿಂದ ಇಮೇಲ್ ಬಂದ ಸಂದರ್ಭದಲ್ಲಿ, ಅಂತಹವುಗಳನ್ನು ಪೂರ್ತಿಯಾಗಿ ನಿರ್ಲಕ್ಷಿಸಿ.

ನಿಮ್ಮ ಸುರಕ್ಷೆಗೆ ಸೂಚನೆಗಳು ಇಲ್ಲಿವೆ:

  • SMS ಅಥವಾ ಇನ್ಯಾವುದೇ ಪ್ರಕಾರದಲ್ಲಿ ನಿಮಗೆ ಬರುವ OTPಗಳು, ಪಿನ್ ನಂಬರ್‌ಗಳು ಅಥವಾ ಬೇರೆ ಯಾವುದೇ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
  • ಸಾಮಾಜಿಕ ಮಾಧ್ಯಮಗಳು ಅಥವಾ ವೇದಿಕೆಗಳಲ್ಲಿ ನಿಮ್ಮ ಖಾತೆ ಸಂಖ್ಯೆ ಅಥವಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
  • ಬ್ಯಾಂಕಿನ ಹೆಸರಿನಲ್ಲಿ ಅಜ್ಞಾತ ಸಂಖ್ಯೆಯಿಂದ ಕರೆ ಬಂದಾಗ, ನಿಮ್ಮ ವೈಯುಕ್ತಿಕ ವಿವರಗಳಿಗಾಗಿ ಕೇಳಿದಲ್ಲಿ, ಆಗ ಅಂತಹ ಕರೆಗಳಿಗೆ ಹೆಚ್ಚು ಉತ್ತರ ನೀಡಬೇಡಿ. ಬದಲಿಗೆ ಕರೆಯನ್ನು ಕಡಿತಗೊಳಿಸಿ.
  • ಇಮೇಲ್ ಕಳುಹಿಸುವವರ ಡೊಮೇನ್ ಪರಿಶೀಲಿಸಿ. ಅದು [XYZ] @ gmail.com ಅಥವಾ ಯಾವುದೇ ಇಮೇಲ್ ಸೇವಾದಾರರ ಡೊಮೇನ್ ಆಗಿದ್ದರೆ, ಅಂತಹ ಮೇಲ್ ಅನ್ನು ನಿರ್ಲಕ್ಷಿಸಿ. ನಿಮಗೆ ಬಂದ ಇಮೇಲ್ ಡೊಮೇನ್ ಬ್ಯಾಂಕಿನ ನಿಜವಾದ ಡೊಮೇನ್ ಹೌದೇ ಎಂದು ಖಚಿತಪಡಿಸಿಕೊಳ್ಳಿ. ಎಲ್ಲಾ ಬ್ಯಾಂಕ್ ಇಮೇಲ್‌ಗಳು ಸುರಕ್ಷಿತ https ಡೊಮೇನ್ ಮೂಲಕ ಮಾತ್ರ ಬರುತ್ತವೆ.

ಸುರಕ್ಷಿತವಾಗಿ ವಹಿವಾಟು ನಡೆಸುವ ಬಗ್ಗೆ ವೀಡಿಯೋ ನೋಡಿ: https://youtu.be/rHZ57O9X8kk

Keep Reading