Trust & Safety
QR ಕೋಡ್ ವಂಚನೆಯಿಂದ ಸುರಕ್ಷಿತವಾಗಿರಿ!
PhonePe Regional|1 min read|12 May, 2021
ಡಿಜಿಟಲ್ ಪಾವತಿಗಳು ಲಕ್ಷಾಂತರ ಭಾರತೀಯರ ಜೀವನವನ್ನು ಸುಲಭಗೊಳಿಸಿವೆ. ಆದರೆ, ಅದರ ಜೊತೆಗೆ ಪಾವತಿ ಸಂಬಂಧಿತ ವಂಚನೆಗಳ ನಿದರ್ಶನಗಳು ಸಹ ಹೆಚ್ಚುತ್ತಿವೆ. ವಂಚಕರ ಬಳಿ ನಿಮ್ಮ ಕಾರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳು ಇಲ್ಲದಿದ್ದರೂ, ಅವರು ನಿಮಗೆ ವಂಚನೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೆಚ್ಚಾಗುತ್ತಿರುವ ಅಂತಹ ವಂಚನೆಗಳಲ್ಲಿ ಒಂದು QR ಕೋಡ್ ವಂಚನೆ.
QR ಕೋಡ್ ವಂಚನೆ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಉದಾಹರಣೆ:
ವಂಚಕರು ನಿಮಗೆ WhatsApp ಅಥವಾ ಇನ್ನಾವುದೇ ಚಿತ್ರಗಳನ್ನು ಕಳಿಸಬಹುದಾದ ಆ್ಯಪ್ ಮೂಲಕ QR ಕೋಡ್‌ನ ಚಿತ್ರವನ್ನು ಕಳುಹಿಸುತ್ತಾರೆ. ಅದರೊಂದಿಗೆ ಒಂದು ಸಂದೇಶವಿದ್ದು, ಅದು ನಿಮಗೆ ನಿಮ್ಮ ಬ್ಯಾಂಕ್ ಖಾತೆಗೆ ಉಚಿತ ನಗದು ಬಹುಮಾನಗಳನ್ನು ಪಡೆಯಲು ಆ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಮೊತ್ತವನ್ನು ನಮೂದಿಸಿ, ನಿಮ್ಮ UPI PIN ಅನ್ನು ನಮೂದಿಸಲು ತಿಳಿಸುತ್ತದೆ. ಕೆಲವೊಮ್ಮೆ, ವಂಚಕರು ಕೆಲವು ಆ್ಯಪ್‌ಗಳಲ್ಲಿ ಇರುವ ಸೌಲಭ್ಯವನ್ನು ಬಳಸಿ, ಮೊದಲೇ ಮೊತ್ತವನ್ನು ನಮೂದಿಸಿ ನಿಮಗೆ QR ಕೋಡ್ ಕಳುಹಿಸುತ್ತಾರೆ. ಅದರಲ್ಲಿ ನಿಮಗೆ ಕೇವಲ UPI PIN ಅನ್ನು ನಮೂದಿಸಲು ತಿಳಿಸಲಾಗುತ್ತದೆ. ನೀವು ಅದರಂತೆ ಮಾಡಿದ ತಕ್ಷಣ, ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗುತ್ತದೆ.
ಮೋಸದ ಸಂದೇಶಕ್ಕೊಂದು ಉದಾಹರಣೆ ಇಲ್ಲಿದೆ:
ದಯವಿಟ್ಟು ನೆನಪಿಡಿ: PhonePe ಯಲ್ಲಿ ನೀವು ಬೇರೆಯವರಿಂದ ಹಣ ಸ್ವೀಕರಿಸಲು ‘ಪಾವತಿ’ ಮಾಡುವ ಅಥವಾ ನಿಮ್ಮ UPI ಪಿನ್ ನಮೂದಿಸುವ ಅಗತ್ಯವಿಲ್ಲ. ನಿಜವಾಗಿ ಹಣ ಕಳುಹಿಸುವವರಿಗೆ ನಿಮಗೆ ಹಣ ಕಳುಹಿಸಲು ನಿಮ್ಮ ಫೋನ್ ಸಂಖ್ಯೆ ಮಾತ್ರ ಬೇಕಾಗುತ್ತದೆ. ನಿಮಗೆ ಯಾರಿಂದಲಾದರೂ ‘ಪಾವತಿ’ ಮಾಡಲು, ಅಥವಾ UPI ಪಿನ್ ನಮೂದಿಸಲು ಹೇಳುವ ಸಂದೇಶ ಬಂದರೆ, ಅದಕ್ಕೆ ಪ್ರತಿಕ್ರಿಯಿಸಬೇಡಿ. ಬದಲಾಗಿ, ಆ ವಂಚಕರ ಫೋನ್ ನಂಬರ್ ಮತ್ತು ಇತರ ವಿವರಗಳೊಂದಿಗೆ PhonePe ಬೆಂಬಲಕ್ಕೆ ವರದಿ ಮಾಡಿ.
ವಂಚನೆಗಳಿಂದ ಸುರಕ್ಷಿತವಾಗಿರಲು, ಈ ಕೆಳಗಿನ ಸಂಗತಿಯನ್ನು ನೆನಪಿಟ್ಟುಕೊಳ್ಳಿ:
PhonePe ಎಂದಿಗೂ ಗೌಪ್ಯ ವಿವರಗಳನ್ನು ಕೇಳುವುದಿಲ್ಲ. PhonePe ಪ್ರತಿನಿಧಿಯಂತೆ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಮತ್ತು @phonepe.com ಡೊಮೇನ್‌ನಿಂದ ಬರುವ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.
- Google, Twitter, FB ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ PhonePe ಗ್ರಾಹಕ ಬೆಂಬಲ ನಂಬರ್‌ಗಳಿಗಾಗಿ ಹುಡುಕಬೇಡಿ. PhonePe ಗ್ರಾಹಕ ಬೆಂಬಲವನ್ನು ಸಂಪರ್ಕಿಸುವ ಅಧಿಕೃತ ಮಾರ್ಗವೆಂದರೆ support.phonepe.com ಮೂಲಕ ಸಂಪರ್ಕಿಸುವುದು ಮಾತ್ರ.
- PhonePe ಬೆಂಬಲ ಎಂದು ಹೇಳಿಕೊಳ್ಳುವ ಪರಿಶೀಲಿಸದ ಮೊಬೈಲ್ ನಂಬರ್‌ಗಳಿಗೆ ಎಂದಿಗೂ ಕರೆ ಮಾಡಬೇಡಿ / ಅವುಗಳ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.
- ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿರುವ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮೊಂದಿಗೆ ಸಂಪರ್ಕ ಸಾಧಿಸಿ.
Twitter ಹ್ಯಾಂಡಲ್‌ಗಳು: https://twitter.com/PhonePe
https://twitter.com/PhonePeSupport
– Facebook ಖಾತೆ: https://www.facebook.com/OfficialPhonePe/ - ಒಂದು ವೇಳೆ ನಿಮ್ಮ ಕಾರ್ಡ್ ಅಥವಾ ಖಾತೆ ವಿವರಗಳು ಕಳೆದುಹೋದರೆ:
– support.phonepe.com ಗೆ ವರದಿ ಮಾಡಿ
– ನಿಮ್ಮ ಹತ್ತಿರದ ಸೈಬರ್ ಸೆಲ್ ಅನ್ನು ಸಂಪರ್ಕಿಸಿ ಮತ್ತು ಪೊಲೀಸರಿಗೆ ದೂರು ನೀಡಿ.