Trust & Safety
ಸಾಮಾಜಿಕ ಮಾಧ್ಯಮ ಸೋಗುಹಾಕುವಿಕೆ ವಂಚನೆ
PhonePe Regional|1 min read|09 December, 2022
ಇಂದು ಸೋಷಿಯಲ್ ಮೀಡಿಯಾ ಪ್ರಪಂಚದಾದ್ಯಂತದ ಜನರನ್ನು ಸಂಪರ್ಕಿಸುವ ವೇದಿಕೆಯಾಗಿ ಹೊರಹೊಮ್ಮಿದೆ. ಇದು ಮಾಹಿತಿ ಮತ್ತು ಸುದ್ದಿಯ ಪ್ರಮುಖ ಮೂಲವಾಗಿದೆ ಮತ್ತು ನಮ್ಮ ದಿನನಿತ್ಯದ ಜೀವನದ ಮೇಲೆ ಪ್ರಭಾವವನ್ನು ಹೊಂದಿದೆ.
ಸಾಮಾಜಿಕ ಮಾಧ್ಯಮದ ಸೋಗು ವಂಚನೆಯು ಡಿಜಿಟಲ್ ಗುರುತಿನ ಕಳ್ಳತನದ ಒಂದು ರೂಪವಾಗಿದೆ ಮತ್ತು ಇದು ಸಾಮಾಜಿಕ ಎಂಜಿನಿಯರಿಂಗ್‌ನ ದೊಡ್ಡ ವರ್ಗಕ್ಕೆ ಸೇರುತ್ತದೆ. ಇದು ನಿಮ್ಮ ಅಥವಾ ನಿಮಗೆ ತಿಳಿದಿರುವ ಯಾರೊಬ್ಬರ ನಕಲಿ ಪ್ರೊಫೈಲ್ ಅನ್ನು ರಚಿಸುವ ಪ್ರಕ್ರಿಯೆಯಾಗಿದೆ ಮತ್ತು ನಂತರ ಅದನ್ನು ಬಳಸಿಕೊಂಡು ಇತರರಿಂದ ಹಣ ಅಥವಾ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಲಾಗುತ್ತದೆ.
ಸಾಮಾಜಿಕ ಮಾಧ್ಯಮ ಸೋಗು ಹಾಕುವಿಕೆ ಹೇಗೆ ನಡೆಯುತ್ತದೆ :
- ವಂಚಕರು ಕದ್ದ ಮಾಹಿತಿಯನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಪ್ರೊಫೈಲ್ ಅನ್ನು ರಚಿಸುತ್ತಾರೆ, ಅದಕ್ಕಾಗಿ ಅವರು ಬಲಿಪಶುವಿನ ಹೆಸರು ಮತ್ತು ಫೋಟೋಗಳನ್ನು ಹೊಂದಿರುತ್ತಾರೆ. ವಂಚಕನು ಬಲಿಪಶುವನ್ನು ನಂಬುವಂತೆ ಮಾಡಲು ಕೆಲವು ವಿಶ್ವಾಸಾರ್ಹ ವ್ಯಾಪಾರದ ಹೆಸರುಗಳೊಂದಿಗೆ ಪ್ರೊಫೈಲ್‌ಗಳನ್ನು ರಚಿಸುವುದು ಸಾಮಾನ್ಯವಾಗಿದೆ.
- ಗ್ರಾಹಕರನ್ನು ಗುರಿಯಾಗಿಸಿಕೊಂಡು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ನಕಲಿ ಖಾತೆಯನ್ನು ಬಳಸಿಕೊಂಡು ವಿನಂತಿಯನ್ನು ಕಳುಹಿಸಲಾಗುತ್ತದೆ.
- ವಂಚಕರು ಯಾವಾಗಲೂ ತುರ್ತು ಉದ್ದೇಶಗಳಿಗಾಗಿ ಹಣವನ್ನು ಕೇಳುವ ಮೂಲಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ ಮತ್ತು ಕ್ಷಣಾರ್ಧದಲ್ಲಿ ಹಣವನ್ನು ವರ್ಗಾಯಿಸುವ ಮೂಲಕ ಗ್ರಾಹಕರು ಬಲೆಗೆ ಬೀಳುತ್ತಾರೆ.
- ಕೆಲವೊಮ್ಮೆ, ವಂಚಕರು ನಿಮ್ಮ ಸ್ವಂತ ಖಾತೆಯನ್ನು (ಉದಾ. Instagram ಅಥವಾ Facebook) ಹ್ಯಾಕ್ ಮಾಡಬಹುದು ಮತ್ತು ನಿಮ್ಮ ಫಾಲೋವರ್ಸ್ ಲಿಸ್ಟ್ ನಿಂದ ಹಣವನ್ನು ಕೇಳುವ ವಿನಂತಿಗಳನ್ನು ಕಳುಹಿಸಬಹುದು, ಇದನ್ನು ಮಾಡುವುದರಿಂದ ಬಲಿಪಶುವು ಅಸಲಿ ಖಾತೆಯಿಂದ ವಿನಂತಿ ಬರುತ್ತಿದೆ ಎಂದು ಭಾವಿಸುತ್ತಾರೆ ಮತ್ತು ಹಣವನ್ನು ಕಳೆದುಕೊಳ್ಳುತ್ತಾರೆ. ಇದನ್ನು ಮಾಡುವುದರಿಂದ ಅವರ ಅಕೌಂಟಿಗೆ ಪ್ರವೇಶವು ಕಳೆದುಹೋಗುತ್ತದೆ ಮತ್ತು ಅನೇಕ ದುರ್ಬಲ ಗ್ರಾಹಕರು ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ.
ಸಾಮಾಜಿಕ ಮಾಧ್ಯಮ ವಂಚನೆಗೆ ಒಳಗಾಗದೇ ಇರುವುದು ಹೇಗೆ:
- ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗೆ ಪ್ರವೇಶವನ್ನು ಕಳೆದುಕೊಳ್ಳುತ್ತೀರಿ.
- ಪ್ರೊಫೈಲ್ ವಿವರಗಳು ನಕಲಿಯಾಗಿ ಕಾಣುವ ಯಾವುದೇ ಖಾತೆಯೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.
- ನಿಮ್ಮ ಕಾರ್ಡ್ ವಿವರಗಳನ್ನು ಅಥವಾ OTP ಅನ್ನು ಯಾರೊಂದಿಗೂ ಫೋನ್, ಇಮೇಲ್ ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಹಂಚಿಕೊಳ್ಳಬೇಡಿ.
- ಅಧಿಕೃತ ಮೂಲಗಳು ಮತ್ತು ಕಂಪನಿಯ ವೆಬ್‌ಸೈಟ್‌ನೊಂದಿಗೆ ಯಾವಾಗಲೂ ಮಾಹಿತಿಯ ದೃಢೀಕರಣವನ್ನು ಪರಿಶೀಲಿಸಿ. ವ್ಯಾಪಾರ ಸೈಟ್‌ನಿಂದ ವಿನಂತಿಯಿರುವಾಗ ಅವರ ಅಧಿಕೃತ ಸೈಟ್‌ನಲ್ಲಿ ವ್ಯಾಪಾರದ ಹೆಸರು ಮತ್ತು ವೆಬ್‌ಸೈಟ್ ಅನ್ನು ಪರಿಶೀಲಿಸಿ, ಏಕೆಂದರೆ ನಕಲಿ ವ್ಯಾಪಾರ ಪ್ರೊಫೈಲ್‌ನ ಹೆಸರು ಅಥವಾ ವೆಬ್‌ಸೈಟ್‌ನಲ್ಲಿ ಅತ್ಯಲ್ಪ ಬದಲಾವಣೆ ಇರುತ್ತದೆ.(www.facebook.com ಮತ್ತು www.facebooks.com )
ಪ್ರಮುಖ ಜ್ಞಾಪನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಹೊರತುಪಡಿಸಿ ಬೇರೆ ಯಾವುದೇ, PhonePe ನಿಂದ ಎಂದು ಹೇಳಿಕೊಳ್ಳುವ ಎಲ್ಲಾ ಮೇಲ್‌ಗಳನ್ನು ನಿರ್ಲಕ್ಷಿಸಿ. ನೀವು ವಂಚನೆಯನ್ನು ಅನುಮಾನಿಸಿದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.