PhonePe Blogs Main Featured Image

Trust & Safety

Twitter ನಲ್ಲಿನ ವಂಚನೆಗಳಿಂದ ನಿಮ್ಮನ್ನು ಸುರಕ್ಷಿತಗೊಳಿಸಿಕೊಳ್ಳಿ — ನಕಲಿ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಎಚ್ಚರದಿಂದಿರಿ!

PhonePe Regional|1 min read|19 April, 2021

URL copied to clipboard

ಆದರೆ, ಇತ್ತೀಚೆಗೆ ನಕಲಿ Twitter ಖಾತೆಗಳ ಮೂಲಕ ಮಾಡಲಾಗುವ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ.

Twitter ನಲ್ಲಿ ವಂಚನೆಗಳು ಈ ಕೆಳಗಿನಂತಿರುತ್ತವೆ:

– PhonePe ಗ್ರಾಹಕರು ಆಫರ್‌ಗಳನ್ನು ರೀಡೀಮ್ ಮಾಡಿಕೊಳ್ಳುವುದು, ಕ್ಯಾಶ್‌ಬ್ಯಾಕ್ ಪಡೆಯುವುದು, ಹಣ ವರ್ಗಾವಣೆ, ರೀಫಂಡ್‌ಗಳನ್ನು ಪ್ರಾರಂಭಿಸುವುದು, PhonePe ಯಲ್ಲಿ ತಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಮತ್ತಿತರ ವಿಷಯಗಳ ಬಗ್ಗೆ ಸಮಸ್ಯೆಯಿದ್ದಲ್ಲಿ, ಅವುಗಳನ್ನು ಟ್ವೀಟ್ ಮಾಡಲು PhonePe ಸಂಸ್ಥೆಯ ಮೂಲ ಹ್ಯಾಂಡಲ್ ಆದ https://twitter.com/PhonePe ಅನ್ನು ಬಳಸುತ್ತಾರೆ.

– ಏನನ್ನು ಪೋಸ್ಟ್ ಮಾಡಲಾಗುತ್ತಿದೆ ಎಂಬುದರ ಬಗ್ಗೆ ವಂಚಕರು ನಿಗಾ ಇಡುತ್ತಾರೆ ಮತ್ತು ತಕ್ಷಣ ಪ್ರತಿಕ್ರಿಯಿಸುತ್ತಾರೆ. ಬಳಕೆದಾರರ ಖಾತೆಯಿಂದ ಹಣವನ್ನು ಕದಿಯುವ ಒಂದು ಜನಪ್ರಿಯ ಮಾರ್ಗವೆಂದರೆ PhonePe ಸಹಾಯವಾಣಿ ಸಂಖ್ಯೆಗಳು ಎಂದು ಸೂಚಿಸಿ, ನಕಲಿ ಗ್ರಾಹಕ ಸಹಾಯ ಸಂಖ್ಯೆಗಳನ್ನು ಟ್ವೀಟ್ ಮಾಡುವುದು.

– ಇದನ್ನು ಅರಿಯದ ಗ್ರಾಹಕರು, ಆ ವಂಚಕರು ಟ್ವೀಟ್ ಮಾಡಿದ ನಕಲಿ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಾರೆ ಮತ್ತು ತಮಗೆ ಕ್ಯಾಶ್‌ಬ್ಯಾಕ್ ದೊರೆಯಲಿಲ್ಲ ಎಂದು ತಿಳಿಸುತ್ತಾರೆ ಅಥವಾ ಯಾವುದಾದರೂ ವಹಿವಾಟು ವಿಫಲಗೊಂಡಿದ್ದಲ್ಲಿ, ಅದಕ್ಕೆ ರೀಫಂಡ್ ಮಾಡಲು ಕೋರುತ್ತಾರೆ.

– ಅಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ನಟಿಸುತ್ತಾ, ವಂಚಕರು ಗ್ರಾಹಕರಿಗೆ ತಮ್ಮ ಫೋನ್‌ನಲ್ಲಿ ಪಡೆದ ಕಾರ್ಡ್ ವಿವರಗಳು ಮತ್ತು OTP ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ತಮಗೆ ನೀಡಲು ಹೇಳುತ್ತಾರೆ.

– ಗ್ರಾಹಕರ ವಿಶ್ವಾಸವನ್ನು ಗೆಲ್ಲಲು, ಆ ವಂಚಕರು ತಮ್ಮ ಸಂಖ್ಯೆಯಿಂದ ಗ್ರಾಹಕರ ಸಂಖ್ಯೆಗೆ ಕಲೆಕ್ಟ್ ಕಾಲ್ (ಹಣಕ್ಕಾಗಿ ಕೋರಿಕೆ ಸಲ್ಲಿಸುವುದು) ಕೋರಿಕೆ ಸಲ್ಲಿಸುತ್ತಾರೆ ಮತ್ತು ಅವರಿಗೆ ಕ್ಯಾಶ್‌ಬ್ಯಾಕ್ ಪಡೆಯುವ ಭರವಸೆ ನೀಡುತ್ತಾರೆ.

– ಗ್ರಾಹಕರು ತಮ್ಮ ಕಾರ್ಡ್ ವಿವರಗಳು ಮತ್ತು OTP ಯನ್ನು ಅವರಿಗೆ ನೀಡಿದ ಅಥವಾ ಕಲೆಕ್ಟ್ ಕಾಲ್ ಸ್ವೀಕರಿಸಿದ ತಕ್ಷಣ, ಹಣವನ್ನು ಗ್ರಾಹಕರ ಖಾತೆಯಿಂದ ವಂಚಕರ ಖಾತೆಗೆ ವರ್ಗಾಯಿಸಲಾಗುತ್ತದೆ.

ಯಾವತ್ತೂ ನೆನಪಿಡಿ — PhonePe ಎಂದಿಗೂ ಯಾವುದೇ ಗ್ರಾಹಕರಿಗೆ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. PhonePe ಪ್ರತಿನಿಧಿಯಾಗಿ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಜೊತೆಗೆ, @phonepe.com ಡೊಮೇನ್‌ನ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.

ನಿಮ್ಮ ಸುರಕ್ಷತೆಯ ಮಾರ್ಗ ಇಲ್ಲಿದೆ:

ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿರುವ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.

Twitter ಹ್ಯಾಂಡಲ್‌ಗಳು:

  1. https://twitter.com/PhonePe
  2. https://twitter.com/PhonePeSupport

Facebook ಖಾತೆ: https://www.facebook.com/OfficialPhonePe/

ವೆಬ್‌ಸೈಟ್: support.phonepe.com

ನಿಮ್ಮ ಕಾರ್ಡ್ ಅಥವಾ ಖಾತೆ ವಿವರಗಳು ಕಳುವಾದಲ್ಲಿ:

  1. [email protected] ಗೆ ವರದಿ ಮಾಡಿ, ಹಾಗೂ
  2. ನಿಮ್ಮ ಹತ್ತಿರದ ಸೈಬರ್ ಸೆಲ್ ಅನ್ನು ಸಂಪರ್ಕಿಸಿ ಮತ್ತು ಪೊಲೀಸರಿಗೆ ದೂರು ನೀಡಿ

Keep Reading