Trust & Safety
ನಿಮ್ಮ ಗುರುತನ್ನು ಸುರಕ್ಷಿತವಾಗಿರಿಸಿ ಮತ್ತು ಆಧಾರ್ ಕಾರ್ಡ್ ವಂಚನೆಯನ್ನು ತಡೆಯಿರಿ
PhonePe Regional|2 min read|19 August, 2024
ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆಯಾದ ಆಧಾರ್, ಬಯೋಮೆಟ್ರಿಕ್ಸ್ ಮತ್ತು ಡೆಮಾಗ್ರಾಫಿಕ್ ಮಾಹಿತಿಯ ಆಧಾರದಲ್ಲಿ ಭಾರತೀಯರಿಗೆ ಸ್ವಯಂಪ್ರೇರಣೆಯಿಂದ ಅನನ್ಯ 12-ಅಂಕಿಯ ಗುರುತಿನ ಸಂಖ್ಯೆ ಪಡೆಯಲು ಅವಕಾಶ ನೀಡುತ್ತದೆ.
ಬ್ಯಾಂಕ್ ಖಾತೆ ತೆರೆಯುವಾಗ, ಪಾಸ್‌ಪೋರ್ಟ್ ಪಡೆಯುವಾಗ, ಸಬ್ಸಿಡಿಗಳನ್ನು ಪಡೆಯುವಾಗ, ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಗುರುತನ್ನು ದೃಢೀಕರಿಸಲು ಆಧಾರ್ ಸುಲಭ ವಿಧಾನವಾಗಿದೆ. ಆಧಾರ್ ಅನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿದ್ದು ಇದನ್ನು ಹಣಕಾಸು ಸಂಸ್ಥೆಗಳು ಚಿಲ್ಲರೆ ಹೂಡಿಕೆದಾರರ ಗುರುತಿನ ಪುರಾವೆಯಾಗಿ ಸ್ವೀಕರಿಸುತ್ತವೆ.
ಆಧಾರ್‌ನ ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ OTP ಪರಿಶೀಲನೆ, ಇದು ಅಧಾರ್ ಹೊಂದಿರುವವರಿಗೆ ಯಾವುದೇ ಸ್ಥಳದಿಂದ ತಮ್ಮ ಗುರುತನ್ನು ಸುಲಭವಾಗಿ ದೃಢೀಕರಿಸಲು ಅನುವು ಮಾಡಿಕೊಡುತ್ತದೆ.
ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಅನೇಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಸೈಬರ್ ಅಪರಾಧಗಳು ವಿಪರೀತವಾಗಿರುವ ಇಂದಿನ ಕಾಲಮಾನದಲ್ಲಿ ಈ ವಿಧಾನಗಳು ತಮ್ಮ ಗುರುತನ್ನು ಸುರಕ್ಷಿತವಾಗಿರಿಸಿಕೊಳ್ಳುವ ಕುರಿತು ಮಾಹಿತಿ ಹೊಂದಿರದ ವ್ಯಕ್ತಿಗಳ ಡೇಟಾವನ್ನು ಅಸುರಕ್ಷಿತಗೊಳಿಸುವ ಅಪಾಯವಿದೆ.
ಈ ಬ್ಲಾಗ್‌ನಲ್ಲಿ ವಂಚಕರು ಹೇಗೆ ಹಣ ಕದಿಯಲು ಅಥವಾ ಅನಧಿಕೃತ ವಹಿವಾಟುಗಳನ್ನು ನಡೆಸಲು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳ ನಡುವಿನ ಸಂಪರ್ಕವನ್ನು ಬಳಸಿಕೊಳ್ಳುತ್ತಾರೆ ಎಂದು ನಾವು ವಿವರಿಸುತ್ತೇವೆ.
ಆಧಾರ್ ಒಳಗೊಂಡ ಸಾಮಾನ್ಯ UPI ವಂಚನೆಗಳು
- ಫಿಶಿಂಗ್ ದಾಳಿಗಳು: ಬ್ಯಾಂಕ್ ಅಥವಾ ಪಾವತಿ ಆ್ಯಪ್ ಅಧಿಕಾರಿಯ ಹೆಸರಿನಲ್ಲಿ ಜನರನ್ನು ನಂಬಿಸಿ ಅವರ ವೈಯಕ್ತಿಕ ಮಾಹಿತಿ ಪಡೆಯುವ ವಿಧಾನಕ್ಕೆ ಫಿಶಿಂಗ್ ದಾಳಿ ಎನ್ನುತ್ತಾರೆ. ಆಧಾರ್-ಲಿಂಕ್ಡ್ ವಂಚನೆಯಾಗಿದ್ದಲ್ಲಿ, ವಂಚಕರು ಆಧಾರ್ ವಿವರಗಳು ಅಥವಾ UPI ಪಿನ್ ಅನ್ನು ಅಪ್ಡೇಟ್ ಮಾಡುವಂತೆ ವಿನಂತಿಸಿ ಬಳಕೆದಾರರಿಗೆ ಮೆಸೇಜ್ ಅಥವಾ ಇ-ಮೇಲ್ ಕಳುಹಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಕಳುಹಿಸುವ ಸಂದೇಶವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಲು ಬಳಸುವ ನಕಲಿ ಲಿಂಕ್ ಹೊಂದಿರುತ್ತದೆ.
- ವಿಶಿಂಗ್ ಕರೆಗಳು: ವಿಷಿಂಗ್ ಎಂಬುದು ಫಿಶಿಂಗ್‌ಗೆ ಹೋಲುವ ವಂಚನೆ ವಿಧಾನವಾಗಿದೆ, ಈ ವಿಧಾನದಲ್ಲಿ ವಂಚಕರು ಬ್ಯಾಂಕ್ ಅಥವಾ UIDAI ಪ್ರತಿನಿಧಿಯ ಹೆಸರಿನಲ್ಲಿ ಕರೆ ಮಾಡಿ ಖಾತೆ ಪರಿಶೀಲನೆ ಅಥವಾ ಸಮಸ್ಯೆಯ ಪರಿಹಾರದ ನೆಪದಲ್ಲಿ ಆಧಾರ್ ಸಂಖ್ಯೆ, UPI ಪಿನ್‌ಗಳು ಅಥವಾ OTP ಗಳನ್ನು ಕೇಳುತ್ತಾರೆ.
- ಸಿಮ್ ಸ್ವಾಪ್ ವಂಚನೆ: ವಂಚಕರು ಇತರರ ದೂರವಾಣಿ ಸಂಖ್ಯೆಗೆ ನಕಲಿ ಸಿಮ್ ಕಾರ್ಡ್ ಪಡೆದು, UPI ವಹಿವಾಟಿಗೆ ಬಳಸಲಾಗುವ OTP ಗಳನ್ನು ಬಳಸಿ ಅವರ ಬ್ಯಾಂಕ್ ಖಾತೆಗೆ ಪ್ರವೇಶ ಪಡೆಯುತ್ತಾರೆ.
- ನಕಲಿ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು: ವಂಚಕರು ಆಧಾರ್ ಮತ್ತು ಬ್ಯಾಂಕಿಂಗ್ ವಿವರಗಳನ್ನು ಸಂಗ್ರಹಿಸಲು ಕಾನೂನುಬದ್ಧ UPI ಪಾವತಿ ಸೇವೆಗಳನ್ನು ಅನುಕರಿಸುವ ನಕಲಿ ಆ್ಯಪ್ ಅಥವಾ ವೆಬ್‌ಸೈಟ್‌ಗಳನ್ನು ಸೃಷ್ಟಿಸುತ್ತಾರೆ.
ಆಧಾರ್ ವಂಚನೆಯಿಂದ ರಕ್ಷಿಸಿಕೊಳ್ಳುವುದು ಹೇಗೆ
- ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ನಿಮ್ಮ ಆಧಾರ್ ಸಂಖ್ಯೆ, UPI ಪಿನ್, OTP, ಅಥವಾ ಬ್ಯಾಂಕ್ ವಿವರಗಳನ್ನು ಫೋನ್, ಇಮೇಲ್ ಅಥವಾ SMS ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಸತ್ಯಾಸತ್ಯತೆಯನ್ನು ಪರಿಶೀಲಿಸಿ: ನಿಮ್ಮ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರಿಂದ ಎಂದು ಹೇಳಿಕೊಳ್ಳುವ ಯಾವುದೇ ಸಂವಹನದ ಸತ್ಯಾಸತ್ಯತೆಯನ್ನು ಯಾವಾಗಲೂ ಪರಿಶೀಲಿಸಿ. ನೇರವಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಸುರಕ್ಷಿತಗೊಳಿಸಿ: ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಸಿಮ್ ಸ್ವಾಪ್ ವಿನಂತಿಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಕಳೆದುಹೋದ ಸಿಮ್ ಕಾರ್ಡ್‌ಗಳ ಕುರಿತು ತಕ್ಷಣ ವರದಿ ಮಾಡಿ.
- ವಿಶ್ವಾಸಾರ್ಹ ಆ್ಯಪ್‌ಗಳನ್ನು ಬಳಸಿ: ಇಂಡಸ್ ಆಪ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಂತಹ ಪರಿಶೀಲಿಸಿದ ಮೂಲಗಳಿಂದ ಅಧಿಕೃತ ಮತ್ತು ವಿಶ್ವಾಸಾರ್ಹ UPI ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿ.
- ವಹಿವಾಟುಗಳ ಮೇಲೆ ನಿಗಾವಹಿಸಿ: ಯಾವುದೇ ಅನಧಿಕೃತ ಚಟುವಟಿಕೆಗಳನ್ನು ಪರಿಶೀಲಿಸಲು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು UPI ವಹಿವಾಟು ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸಿ. ಯಾವುದೇ ಅನುಮಾನಾಸ್ಪದ ವಹಿವಾಟುಗಳನ್ನು ತಕ್ಷಣವೇ ವರದಿ ಮಾಡಿ.
- ಸೂಚನೆಗಳನ್ನು ಸಕ್ರಿಯಗೊಳಿಸಿ: ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಯಾವುದೇ ಚಟುವಟಿಕೆಯ ಬಗ್ಗೆ ತ್ವರಿತ ಮಾಹಿತಿ ಪಡೆಯಲು SMS ಅಥವಾ ಇಮೇಲ್ ಮೂಲಕ ವಹಿವಾಟಿನ ಸೂಚನೆಗಳನ್ನು ಸಕ್ರಿಯಗೊಳಿಸಿ.
ಆಧಾರ್-ಸಂಬಂಧಿತ UPI ವಂಚನೆಗಳನ್ನು ಹೇಗೆ ವರದಿ ಮಾಡುವುದು
ಆಧಾರ್ ಮತ್ತು UPI ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಮೋಸದ ಕುರಿತು ನಿಮಗೆ ಅನುಮಾನ ಬಂದರೆ:
- ನಿಮ್ಮ ಬ್ಯಾಂಕ್ ಸಂಪರ್ಕಿಸಿ: ಅನಧಿಕೃತ ವಹಿವಾಟುಗಳು ಮುಂದುವರಿಯುವುದನ್ನು ತಡೆಯಲು ನಿಮ್ಮ ಬ್ಯಾಂಕ್‌ಗೆ ಕೂಡಲೇ ನಿಮ್ಮ ಖಾತೆಯನ್ನು ಫ್ರೀಜ್ ಮಾಡಲು ತಿಳಿಸಿ.
- UIDAI ಗೆ ವರದಿ ಮಾಡಿ: ನಿಮ್ಮ ಆಧಾರ್ ಸಂಖ್ಯೆಯ ದುರುಪಯೋಗದ ಬಗ್ಗೆ UIDAI ಗೆ ತಿಳಿಸಿ. ನೀವು ಅಧಿಕೃತ ವೆಬ್‌ಸೈಟ್ ಅಥವಾ ಸಹಾಯವಾಣಿ ಮೂಲಕ ಅವರನ್ನು ಸಂಪರ್ಕಿಸಬಹುದು.
- ದೂರು ನೀಡಿ: ವಂಚನೆಯ ಕುರಿತು ಸ್ಥಳೀಯ ಪೊಲೀಸ್ ಮತ್ತು ಸೈಬರ್ ಕ್ರೈಮ್ ಅಧಿಕಾರಿಗಳಿಗೆ ವರದಿ ಮಾಡಿ. ನೀವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಅಲ್ಲಿ ಕೂಡ ದೂರು ಸಲ್ಲಿಸಬಹುದು.
ನೀವು ಆಧಾರ್ ಕಾರ್ಡ್ ವಂಚನೆಗೆ ಬಲಿಯಾಗಿದ್ದರೆ PhonePe ನಲ್ಲಿ ದೂರು ದಾಖಲಿಸುವುದು ಹೇಗೆ
PhonePe ಮೂಲಕ ವಂಚಕರಿಂದ ವಂಚಿಸಲ್ಪಟ್ಟಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ದೂರು ಸಲ್ಲಿಸಬಹುದು:
- PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವ್ಯವಹಾರದಲ್ಲಿ ಸಮಸ್ಯೆ ಇದೆ” ಎಂಬ ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ಸಲ್ಲಿಸಿ
- PhonePe ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ಸಲ್ಲಿಸಲು ನೀವು PhonePe ಗ್ರಾಹಕ ಸೇವೆಗೆ 80–68727374 / 022–68727374 ಮೂಲಕ ಕರೆ ಮಾಡಬಹುದು, ನಂತರ ಕಸ್ಟಮರ್ ಕೇರ್ ಏಜೆಂಟ್ ಟಿಕೆಟ್ ಸಲ್ಲಿಸುತ್ತಾರೆ ಮತ್ತು ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಸಹಾಯ ಮಾಡುತ್ತಾರೆ.
- ವೆಬ್‌ಫಾರ್ಮ್ ಸಲ್ಲಿಕೆ: PhonePe ನ ವೆಬ್‌ಫಾರ್ಮ್ ಬಳಸಿಕೊಂಡು ನೀವು ಟಿಕೆಟ್ ಸಲ್ಲಿಸಬಹುದು, https://support.phonepe.com/
- ಸಾಮಾಜಿಕ ಮಾಧ್ಯಮ: ನೀವು PhonePe ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು
Twitter — https://twitter.com/PhonePeSupport
Facebook — https://www.facebook.com/OfficialPhonePe
- ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಸಲ್ಲಿಸಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್ ಮೂಲಕ ದೂರು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.