Trust & Safety
ಟಾಪ್ಅಪ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
PhonePe Regional|1 min read|07 May, 2021
ಕೆಲವೊಮ್ಮೆ ಅನಾಮಿಕರೊಬ್ಬರು ಕರೆ ಮಾಡಿ, ತಾವು ಬ್ಯಾಂಕ್, RBI, ಇ-ಕಾಮರ್ಸ್ ಸೈಟ್ ಅಥವಾ ಲಾಟರಿ ಯೋಜನೆಗಳ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತಾರೆ. ನಂತರ ಅವರು ನಿಮ್ಮಿಂದ ಕೆಲವು ವಿವರಗಳನ್ನು ಸಂಗ್ರಹಿಸಿ, ಕೊನೆಯಲ್ಲಿ ನಿಮ್ಮ 16 ಅಂಕಿಯ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ನಂಬರ್ ಕೇಳುತ್ತಾರೆ. ಕೆಲವೊಮ್ಮೆ ನೀವು ಹೀಗೆ ಕರೆ ಮಾಡಿದವರು ನಿಜವಾಗಿಯೂ ಪ್ರತಿನಿಧಿಯೆಂದು ಪರಿಗಣಿಸಿ ಈ ಮಾಹಿತಿಯನ್ನು ಅವರಿಗೆ ನೀಡಿಬಿಡುತ್ತೀರಿ.
ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ಮೊಬೈಲ್‌ಗೆ ಒಂದು ಕೋಡ್ ಇರುವ SMS ಬರುತ್ತದೆ. ಆ ಪ್ರತಿನಿಧಿ ಮತ್ತೆ ಕರೆಮಾಡಿ, ಪರಿಶೀಲನಾ ಉದ್ದೇಶಕ್ಕಾಗಿ ಆ ಕೋಡ್ ಹೇಳಿರೆಂದು ಕೇಳುತ್ತಾನೆ. ಒಂದು ವೇಳೆ ನೀವು ಹೇಳಿದಲ್ಲಿ, ಆಗ ನಿಮ್ಮ ಖಾತೆಯಲ್ಲಿರುವ ಹಣವನ್ನು ತನ್ನ ವಾಲೆಟ್‌ಗೆ ಕಳಿಸಿಕೊಳ್ಳುತ್ತಾನೆ. ಅಂದರೆ, ಆತ ನಿಮ್ಮ ಖಾತೆಯಿಂದ ಹಣವನ್ನು ಕದ್ದಿದ್ದಾನೆ ಎಂದು ಅರ್ಥ.
ಪ್ರಮುಖ ಸೂಚನೆ: PhonePe ಯಾವತ್ತೂ ನಿಮ್ಮ ವೈಯಕ್ತಿಕ ವಿವರಗಳಿಗಾಗಿ ಕೇಳುವುದಿಲ್ಲ. Phonepe.com ಡೊಮೇನ್ ಹೊರತುಪಡಿಸಿ PhonePe ಹೆಸರಿನಲ್ಲಿ ಬರುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ಒಂದು ವೇಳೆ ಇದು ವಂಚಕರಿಂದ ಬಂದದ್ದು ಎಂದು ಅನುಮಾನ ಬಂದಲ್ಲಿ, ದಯವಿಟ್ಟು ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.
(ಯಾರೊಂದಿಗೂ ನಿಮ್ಮ OTP ಹಂಚಿಕೊಳ್ಳಬೇಡಿ)
ಏನು ಸಂಭವಿಸಿತೆಂದು ತಿಳಿಯಿತೇ?
· ನಿಮಗೆ ಕರೆಮಾಡಿದ ’ಬ್ಯಾಂಕ್ ಅಧಿಕಾರಿ’ ಒಬ್ಬ ವಂಚಕ. ನೀವು ನೀಡಿದ ವಿವರಗಳು ನಿಮ್ಮ ಬ್ಯಾಂಕ್ ಖಾತೆಯಿಂದ ಆತನ ವ್ಯಾಲೆಟ್‌ಗೆ ಹಣ ಕಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ.
· ಪಾವತಿಯನ್ನು ಅಧಿಕೃತಗೊಳಿಸಲು ಆತನಿಗೆ ನೀವು ಸ್ವೀಕರಿಸಿದ ಒಟಿಪಿ ಅಗತ್ಯವಾಗಿತ್ತು. ಒಮ್ಮೆ ನೀವು ಅದನ್ನು ಹಂಚಿಕೊಂಡಾಗ, ಆತ ಟಾಪ್‌ಅಪ್ ಮಾಡುವುದು ಸಾಧ್ಯವಾಯಿತು.
· ನಿಮ್ಮ ಖಾತೆಯಿಂದ ಹಣ ಆತನ ವಾಲೆಟ್‌ಗೆ ಸೇರಿತು. ನಂತರ ಅದನ್ನು ಆತ ವ್ಯಾಲೆಟ್‌ನಿಂದ ಅನೇಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಾನೆ.
· ಹೀಗೆ, ಆತ ನಿಮ್ಮ ಹಣವನ್ನು ವಿವಿಧ ಖಾತೆಗಳಿಗೆ ಕಳಿಸುವ ಮೂಲಕ, ಕಳುವಾದ ಹಣವನ್ನು ಬ್ಯಾಂಕ್ ಅಧಿಕಾರಿಗಳು ಹಿಂಪಡೆಯಲು ಕಷ್ಟವಾಗುವಂತೆ ಮಾಡುತ್ತಾನೆ.
(ಈ ಮೇಲಿನಂತೆ ನಿಮ್ಮ ಹಣವನ್ನು ಕದಿಯಲು ಕಳ್ಳರು ಪ್ರಯತ್ನಿಸುತ್ತಾರೆ.)
ನೀವು ಹೇಗೆ ಸುರಕ್ಷಿತವಾಗಿರಬೇಕು ಎಂಬುದು ಇಲ್ಲಿದೆ:
- ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು (ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, ಪಿನ್) ಯಾರೊಂದಿಗೂ ಹಂಚಿಕೊಳ್ಳಬೇಡಿ.
- ನೀವು SMS ಅಥವಾ ಇತರ ಚಾನಲ್‌ಗಳ ಮೂಲಕ ಸ್ವೀಕರಿಸುವ ಒಟಿಪಿ ಅಥವಾ ಇತರೆ ಯಾವುದೇ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.
- ಒಂದು ವೇಳೆ ಬ್ಯಾಂಕಿನಿಂದ ಎಂದು ಹೇಳಿಕೊಂಡು ಅಜ್ಞಾತ ಸಂಖ್ಯೆಯಿಂದ ಕರೆಯೊಂದು ಬಂದು ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳಿದಲ್ಲಿ, ಅಂತಹ ಕರೆಗೆ ಹೆಚ್ಚು ಉತ್ತರ ನೀಡಬೇಡಿ. ತಕ್ಷಣವೇ ಸಂಪರ್ಕ ಕಡಿತಗೊಳಿಸಿ.
- ಯಾವುದೇ ಅಧಿಕಾರಿ ಫೋನ್ ಮೂಲಕ ನಿಮಗೆ ನೀಡಿದ ಸೂಚನೆಗಳನ್ನು ಅನುಸರಿಸಬೇಡಿ. ಬದಲಿಗೆ ಸೂಚನೆಗಳನ್ನು ಇಮೇಲ್ ಮೂಲಕ ಕಳುಹಿಸಲು ಅವರಿಗೆ ಹೇಳಿ.
- ಇಮೇಲ್ ಕಳುಹಿಸುವವರ ಡೊಮೇನ್ ಪರಿಶೀಲಿಸಿ. ಅದು [XYZ] @ gmail.com ಅಥವಾ ಯಾವುದೇ ಇತರೆ ಇಮೇಲ್ ಸೇವಾದಾರರ ಡೊಮೇನ್ ಆಗಿದ್ದರೆ, ಅಂತಹ ಇಮೇಲ್ ಅನ್ನು ನಿರ್ಲಕ್ಷಿಸಿ. ಇಮೇಲ್ ಡೊಮೇನ್ ಬ್ಯಾಂಕಿನ ನಿಜವಾದ ಡೊಮೇನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಎಲ್ಲಾ ಬ್ಯಾಂಕ್ ಇಮೇಲ್‌ಗಳು ರಕ್ಷಿತ https ಡೊಮೇನ್‌ನಿಂದ ಮಾತ್ರ ಬರುತ್ತವೆ.
ಸುರಕ್ಷಿತವಾಗಿ ವಹಿವಾಟು ನಡೆಸುವ ಬಗ್ಗೆ ವೀಡಿಯೋ ನೋಡಿ: https://youtu.be/4mXbF_r5K5A