Trust & Safety
ಪೊಲೀಸ್ ಕರೆಯೇ? ಹುಷಾರಾಗಿರಿ! ಡಿಜಿಟಲ್ ಬಂಧನದ ವಂಚನೆಯನ್ನು ಗುರುತಿಸುವುದು ಹೇಗೆ ಎಂಬುದು ಇಲ್ಲಿದೆ
PhonePe Regional|3 min read|05 December, 2024
ಅಮಾಯಕರನ್ನು ವಂಚಿಸಲು ತಾವು ಗುರಿಯಾಗಿಸಿಕೊಂಡವರ ಮನದಲ್ಲಿ ಭಯವನ್ನು ಹುಟ್ಟುಹಾಕುವ ವಂಚಕರ ಮೇಲೆ ಸೈಬರ್‌ಕ್ರೈಮ್ ಕೇಂದ್ರೀಕರಿಸುತ್ತದೆ. ಮುಗ್ಧ ಜನರನ್ನು ಮೋಸಗೊಳಿಸುವ ಇತ್ತೀಚಿನ ತಂತ್ರವೆಂದರೆ ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳಂತಹ ಕಾನೂನು ಜಾರಿ ಪ್ರಾಧಿಕಾರಗಳ ಕಡೆಗೆ ಇರುವ ಭಯವನ್ನು ಉಪಯೋಗಿಸಿಕೊಳ್ಳುವುದಾಗಿದೆ. “ಡಿಜಿಟಲ್ ಬಂಧನ”ದ ವಂಚನೆ ಎಂದು ಕರೆಯಲ್ಪಡುವ ಈ ತಂತ್ರವು ಕಾನೂನಿನ ತೊಡಕುಗಳ ಬಗ್ಗೆ ಜನರಿಗೆ ಇರುವ ಭಯದ ಜೊತೆ ಆಟ ಆಡುತ್ತದೆ ಮತ್ತು ಎಚ್ಚರಿಕೆ ನೀಡುವ ಸೂಚನೆಗಳ ಬಗ್ಗೆ ಅರಿವಿಲ್ಲದಿದ್ದಾಗ ಜನರು ವಂಚಕರ ಬಲೆಗೆ ಬೀಳುವಂತೆ ಮನವೊಲಿಸುತ್ತದೆ.
ಈ ಬ್ಲಾಗ್‌ನಲ್ಲಿ, ಈ ವಂಚನೆಯ ಕುರಿತು ಅಂದರೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಂತಹ ಸನ್ನಿವೇಷಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳ ಬಗ್ಗೆ ನಾವು ಚರ್ಚಿಸುತ್ತೇವೆ.
ಡಿಜಿಟಲ್ ಬಂಧನದ ವಂಚನೆ ಎಂದರೇನು?
ಡಿಜಿಟಲ್ ಬಂಧನದ ವಂಚನೆಯು ಒಂದು ರೀತಿಯ ಸೋಗು ಹಾಕುವ ವಂಚನೆಯಾಗಿದ್ದು, ಅಲ್ಲಿ ವಂಚಕರು ಇಮೇಲ್, ಟೆಕ್ಸ್ಟ್ ಮೆಸೇಜ್‌ಗಳು ಅಥವಾ ಫೋನ್ ಚಾನಲ್‌ಗಳ ಮೂಲಕ ಕಾರ್ಯನಿರ್ವಹಿಸುವ ಕಾನೂನು ಜಾರಿಗೊಳಿಸುವ ಪ್ರಾಧಿಕಾರ ಅಥವಾ ಅಧಿಕಾರಿಗಳಂತೆ ನಟಿಸುತ್ತಾರೆ. ಸಾಮಾನ್ಯವಾಗಿ ಸಂಭವಿಸುವ ಆನ್‌ಲೈನ್ ಅಪರಾಧಗಳು ಅಥವಾ ಸೈಬರ್ ಅಪರಾಧಗಳಲ್ಲಿ ನಿಮ್ಮ ಬಂಧನಕ್ಕೆ ವಾರಂಟ್ ಜಾರಿಯಾಗಿದೆ ಅಥವಾ ನಿಮ್ಮನ್ನು ತನಿಖೆಗೊಳಪಡಿಸಬೇಕು ಎಂದು ಅವರು ಹೇಳುತ್ತಾರೆ. ಸಮಸ್ಯೆಯನ್ನು ಪರಿಹರಿಸಲು, ಅವರು ತಕ್ಷಣದ ಹಣ ನೀಡುವಂತೆ ಅಥವಾ ವೈಯಕ್ತಿಕ ಮಾಹಿತಿ ನೀಡುವಂತೆ ಕೇಳುತ್ತಾರೆ, ನೀವು ಒಪ್ಪದಿದ್ದರೆ ಬಂಧನದ ಬೆದರಿಕೆ ಹಾಕುತ್ತಾರೆ.
ಡಿಜಿಟಲ್ ಬಂಧನದ ವಂಚನೆ ಹೇಗೆ ಕೆಲಸ ಮಾಡುತ್ತದೆ?
ಡಿಜಿಟಲ್ ಬಂಧನದ ವಂಚನೆಯಲ್ಲಿ ಅವರ ಗುರಿಯು ಹಣ ನೀಡಲು ಅಥವಾ ಸೂಕ್ಷ್ಮ ಮಾಹಿತಿಯನ್ನು ಬಿಟ್ಟುಕೊಡುವಂತೆ ನಿಮ್ಮನ್ನು ಹೆದರಿಸುವುದಾಗಿರಬಹುದು. ಈ ವಂಚನೆ ತಂತ್ರದಲ್ಲಿ ಬಲೆ ಹೆಣೆಯುವ ರೀತಿಯನ್ನು ಇಲ್ಲಿ ನೀಡಲಾಗಿದೆ:
- ಮೊದಲ ಸಂಪರ್ಕ: ನೀವು ಮೊದಲು ಕಾಲ್, ಇಮೇಲ್ ಅಥವಾ ಟೆಕ್ಸ್ಟ್ ಮೆಸೇಜನ್ನು ಸರ್ಕಾರದಿಂದ ಅಥವಾ ಕಾನೂನು ಜಾರಿ ಸಂಸ್ಥೆಯಿಂದ ಸ್ವೀಕರಿಸುತ್ತೀರಿ. ಮೆಸೇಜ್ ನಕಲಿ ಸರ್ಕಾರಿ ಮುದ್ರೆಗಳು ಅಥವಾ ಲೋಗೋಗಳನ್ನು ಹೊಂದಿರಬಹುದು ಮತ್ತು ಕಾನೂನುಬದ್ಧ ಫೋನ್ ಸಂಖ್ಯೆಯಿಂದ ಬಂದಂತೆ ಕಾಣಿಸಬಹುದು.
- ಟೆಕ್ಸ್ಟ್ ಮೆಸೇಜ್ಗಳು (SMS): ತಕ್ಷಣದ ಗಮನ ಅಗತ್ಯವಿರುವ ಕಾನೂನು ಸಮಸ್ಯೆಗಳಿವೆ ಎಂದು ಹೇಳುವ ಟೆಕ್ಸ್ಟ್ ಮೆಸೇಜ್‌ಗಳು.
- ಫೋನ್ ಕರೆಗಳು: ಸ್ವಯಂಚಾಲಿತ ಕರೆಗಳು ಅಥವಾ ಪೊಲೀಸ್ ಅಧಿಕಾರಿಗಳು ಅಥವಾ ಕಾನೂನು ಪ್ರತಿನಿಧಿಗಳಂತೆ ಕಾಣುವ ಲೈವ್ ಕರೆಗಳ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಬಹುದು.
- ಸೋಶಿಯಲ್ ಮೀಡಿಯಾ & ಮೆಸೇಜಿಂಗ್ ಆ್ಯಪ್ಗಳು: ವಂಚಕರು ಜನರನ್ನು ತಲುಪಲು Facebook, WhatsApp ಅಥವಾ ಇತರ ಮೆಸೇಜಿಂಗ್ ಸೇವೆಗಳಂತಹ ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಸಬಹುದು
- ವೀಡಿಯೊ ಕರೆಗಳು: ವಂಚಕರು ಸಮವಸ್ತ್ರದಲ್ಲಿ ಇರುವ ವೀಡಿಯೊ ಕರೆಗಳನ್ನು ಮಾಡುವ ಮೂಲಕ ಕಾನೂನು ಜಾರಿಗೊಳಿಸುವ ಅಧಿಕಾರಿಗಳಂತೆ ಕಾಣುತ್ತಾರೆ. ಅವರು ಸಾಮಾನ್ಯವಾಗಿ ಅಮಾಯಕರನ್ನು ಬೆದರಿಸಲು ಈ ತಂತ್ರವನ್ನು ಬಳಸುತ್ತಾರೆ. ಅಪರಾಧ ಚಟುವಟಿಕೆಗಳಲ್ಲಿ ನೀವು ಸೇರಿರುವುದರ ಬಗ್ಗೆ ಸುಳ್ಳು ಹೇಳಿ, ಬಂಧನವನ್ನು ತಪ್ಪಿಸಲು ತಕ್ಷಣ ಹಣ ಅಥವಾ ಸೂಕ್ಷ್ಮ ಮಾಹಿತಿಯನ್ನು ನೀಡುವಂತೆ ಒತ್ತಾಯಿಸುತ್ತಾರೆ.
- ಆರೋಪ: “ಅನುಮಾನಾಸ್ಪದ ಇಂಟರ್ನೆಟ್ ಚಟುವಟಿಕೆ” ಅಥವಾ “ಮೋಸದ ವಹಿವಾಟುಗಳ” ರೀತಿಯ ಗಂಭೀರವಾದ ಅಪರಾಧಕ್ಕಾಗಿ ನೀವು ತನಿಖೆಗೊಳಗಾಗುತ್ತಿದ್ದೀರಿ ಎಂದು ವಂಚಕರು ಆಗಾಗ್ಗೆ ಅಸ್ಪಷ್ಟ ಆದರೆ ಆತಂಕಕಾರಿಯಾಗಿ ಏನಾದರೂ ಹೇಳುತ್ತಿರುತ್ತಾರೆ. ಅವರು ಕಾಲ್ಪನಿಕ ಕೇಸ್ ಸಂಖ್ಯೆಯನ್ನು ಉಲ್ಲೇಖಿಸಬಹುದು ಅಥವಾ ಅದು ವಿಶ್ವಾಸಾರ್ಹವಾಗಿ ತೋರಲು ಕಾನೂನು ಪರಿಭಾಷೆಯನ್ನು ಸಹ ಬಳಸಬಹುದು.
- ತಕ್ಷಣದ ಕ್ರಮ: ಬಂಧನವನ್ನು ತಪ್ಪಿಸಲು, ದಂಡವನ್ನು ಪಾವತಿಸುವ ಮೂಲಕ ಅಥವಾ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಮೂಲಕ ನೀವು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ನಿಮಗೆ ತಿಳಿಸುತ್ತಾರೆ. ಅವರು ಕ್ರಿಪ್ಟೋಕರೆನ್ಸಿ, ಗಿಫ್ಟ್ ಕಾರ್ಡ್‌ಗಳು ಅಥವಾ ತಂತಿ ವರ್ಗಾವಣೆಯ ಮೂಲಕ ಹಣ ಕೇಳಬಹುದು, ಏಕೆಂದರೆ ಈ ವಿಧಾನಗಳನ್ನು ಪತ್ತೆಹಚ್ಚಲು ಮತ್ತು ಕೊಟ್ಟ ಹಣ ವಾಪಸ್ ಪಡೆಯಲು ಕಷ್ಟವಾಗುತ್ತದೆ.
- ಶಿಸ್ತುಕ್ರಮದ ಬೆದರಿಕೆಗಳು ನೀವು ಕರೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದರೆ ಅಥವಾ ಅನುಸರಿಸಲು ಹಿಂಜರಿಯುತ್ತಿದ್ದರೆ, ವಂಚಕ ಆಗಾಗ್ಗೆ ಆಕ್ರಮಣಕಾರಿಯಾಗುತ್ತಾನೆ, ಮುಂದಿನ ಕಾನೂನು ಕ್ರಮ, ಹೆಚ್ಚಿದ ದಂಡ ಅಥವಾ ತಕ್ಷಣದ ಬಂಧನಕ್ಕೆ ಬೆದರಿಕೆ ಹಾಕುತ್ತಾನೆ.
ನೀವು ಗುರಿಯಾಗಿದ್ದರೆ ಏನು ಮಾಡಬೇಕು?
ನೀವು ಡಿಜಿಟಲ್ ಅರೆಸ್ಟ್ ವಂಚನೆಕ್ಕೆ ಗುರಿಯಾಗಿದ್ದೀರಿ ಎಂದು ನೀವು ಅನುಮಾನಿಸಿದರೆ, ನಿಮ್ಮನ್ನು ರಕ್ಷಿಸಿಕೊಳ್ಳಲು ಈ ಹಂತಗಳನ್ನು ಅನುಸರಿಸಿ:
- ತಕ್ಷಣ ಪ್ರತಿಕ್ರಿಯಿಸಬೇಡಿ: ಪರಿಸ್ಥಿತಿಯ ಬಗ್ಗೆ ಯೋಚಿಸಲು ಮತ್ತು ಶಾಂತಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ವಂಚಕರು ತಮ್ಮ ಬಲಿಪಶುಗಳನ್ನು ಮೋಸಗೊಳಿಸಲು ಆತಂಕ ಸೃಷ್ಟಿಸುತ್ತಾರೆ
- ಸಂಪರ್ಕ ಸಂಖ್ಯೆಯನ್ನು ಪರಿಶೀಲಿಸಿ: ಸಂವಹನವು ನ್ಯಾಯಸಮ್ಮತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ವಿಧಾನಗಳ ಮೂಲಕ ನೇರವಾಗಿ ಆಪಾದಿಸಿರುವ ಏಜೆನ್ಸಿಯನ್ನು ಸಂಪರ್ಕಿಸಿ (ವಂಚಕರು ಕೊಟ್ಟ ಸಂಖ್ಯೆಯನ್ನಲ್ಲ).
- ಘಟನೆಯ ಬಗ್ಗೆ ವರದಿ ಮಾಡಿ: ನೀವು ಅನುಮಾನಾಸ್ಪದ ಮೆಸೇಜ್ ಸ್ವೀಕರಿಸಿದರೆ, ಅದನ್ನು ಸ್ಥಳೀಯ ಅಧಿಕಾರಿಗಳು ಅಥವಾ ಗ್ರಾಹಕ ಸಂರಕ್ಷಣಾ ಏಜೆನ್ಸಿಗಳಿಗೆ ವರದಿ ಮಾಡಿ. ವರದಿ ಮಾಡುವುದು ಈ ಏಜೆನ್ಸಿಗಳಿಗೆ ವಂಚನೆಗಳನ್ನು ಪತ್ತೆಹಚ್ಚಲು ಮತ್ತು ಇತರರನ್ನು ಎಚ್ಚರಿಸಲು ಸಹಾಯ ಮಾಡುತ್ತದೆ.
- ನಿಮ್ಮ ಮಾಹಿತಿಯನ್ನು ರಕ್ಷಿಸಿಕೊಳ್ಳಿ: ನೀವು ಅಜಾಗರೂಕತೆಯಿಂದ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದರೆ, ನಿಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ ಪಾಸ್‌ವರ್ಡ್‌ಗಳನ್ನು ಬದಲಾಯಿಸುವುದು ಮತ್ತು ಹಣಕಾಸಿನ ಮಾಹಿತಿಯನ್ನು ನೀಡಿದ್ದರೆ ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡುವುದು.
- ಭದ್ರತಾ ಸಾಫ್ಟ್ವೇರ್ ಬಳಸಿ: ನಿಮ್ಮ ಮಾಹಿತಿಗೆ ಪ್ರವೇಶ ಪಡೆಯಲು ವಂಚಕರು ಬಳಸಬಹುದಾದ ಫಿಶಿಂಗ್ ಪ್ರಯತ್ನಗಳು ಮತ್ತು ಮಾಲ್‌ವೇರ್‌ನಿಂದ ರಕ್ಷಿಸಲು ನಿಮ್ಮ ಸಾಧನಗಳು ನವೀಕೃತ ಭದ್ರತಾ ಸಾಫ್ಟ್‌ವೇರ್ ಅನ್ನು ಹೊಂದಿದ್ದಾವೆಯೇ ಎಂದು ಖಚಿತಪಡಿಸಿಕೊಳ್ಳಿ.
- ಎರಡು ಅಂಶಗಳ ದೃಢೀಕರಣ (2FA): ವಂಚಕರು ಅವುಗಳನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಭದ್ರತೆಯ ಮಟ್ಟವನ್ನು ಹೆಚ್ಚಿಸಲು ನಿಮ್ಮ ಖಾತೆಗಳಲ್ಲಿ 2FA ಅನ್ನು ಸಕ್ರಿಯಗೊಳಿಸಿ.
- ನೀವೂ ಮಾಹಿತಿ ತಿಳಿದು ಇತರರಿಗೂ ತಿಳಿಸಿ: ಸಾಮಾನ್ಯ ವಂಚನೆ ತಂತ್ರಗಳ ಬಗ್ಗೆ ಮಾಹಿತಿ ಇರಲಿ ಜೊತೆಗೆ ಸ್ನೇಹಿತರು ಮತ್ತು ಕುಟುಂಬವನ್ನು ರಕ್ಷಿಸಲು ಈ ಜ್ಞಾನವನ್ನು ಹಂಚಿಕೊಳ್ಳಿ.
ಡಿಜಿಟಲ್ ಬಂಧನದ ವಂಚನೆಯಂತಹ ತಂತ್ರಗಳನ್ನು ಭಯ ಮತ್ತು ತುರ್ತುಸ್ಥಿತಿಯನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಸೂಚನೆಗಳ ಬಗ್ಗೆ ತಿಳಿದಿರುವ ಮೂಲಕ ಮತ್ತು ಒತ್ತಡದಲ್ಲಿ ಶಾಂತವಾಗಿ ವರ್ತಿಸುವ ಮೂಲಕ, ನೀವು ಬಲಿಪಶುವಾಗುವುದನ್ನು ತಪ್ಪಿಸಬಹುದು ಮತ್ತು ಇತರರು ಅದೇ ಬಲೆಗೆ ಬೀಳದಂತೆ ತಡೆಯಲು ಸಹಾಯ ಮಾಡಬಹುದು.
ಒಂದುವೇಳೆ ನೀವು ಡಿಜಿಟಲ್ ಬಂಧನದ ವಂಚನೆಯ ಬಲಿಪಶುವಾಗಿದ್ದರೆ PhonePe ನಲ್ಲಿ ಸಮಸ್ಯೆಯ ಬಗ್ಗೆ ದೂರು ಸಲ್ಲಿಸುವುದು ಹೇಗೆ?
ಒಂದು ವೇಳೆ ನೀವು PhonePe ಮೂಲಕ ವಂಚಿಸಲ್ಪಟ್ಟಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ಸಮಸ್ಯೆಯ ಬಗ್ಗೆ ದೂರು ಸಲ್ಲಿಸಬಹುದು:
- PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವ್ಯವಹಾರದಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯ ಬಗ್ಗೆ ದೂರು ನೀಡಿ.
- PhonePe ಗ್ರಾಹಕ ಸಹಾಯವಾಣಿ ಸಂಖ್ಯೆ: ಸಮಸ್ಯೆಯ ಕುರಿತು ದೂರು ನೀಡಲು ನೀವು PhonePe ಗ್ರಾಹಕರ ಸಹಾಯವಾಣಿ 80–68727374 / 022–68727374 ಕ್ಕೆ ಕರೆ ಮಾಡಬಹುದು, ನಂತರ ಕಸ್ಟಮರ್ ಕೇರ್ ಏಜೆಂಟ್ ಟಿಕೆಟ್ ರಚಿಸಿ, ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ.
- ವೆಬ್ಫಾರ್ಮ್ ಸಲ್ಲಿಕೆ: ನೀವು PhonePe ನ ವೆಬ್ ಫಾರ್ಮ್ https://support.phonepe.com/ ಅನ್ನು ಬಳಸಿ ಸಹ ಟಿಕೆಟ್ ರಚಿಸಬಹುದು.
- ಸೋಶಿಯಲ್ ಮೀಡಿಯಾ: ನೀವು PhonePe ನ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು.
Twitter — https://twitter.com/PhonePeSupport
Facebook — https://www.facebook.com/OfficialPhonePe
- ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ನೀಡಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ 1930 ಮೂಲಕ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.
- DOT : ಡಿಜಿಟಲ್ ಅಪರಾಧ ಸಂಭವಿಸದಿದ್ದರೆ, ಆದರೆ ನೀವು ಅದರ ಬಗ್ಗೆ ಅನುಮಾನಿಸುತ್ತಿದ್ದರೆ, ಅದನ್ನು ಸಹ ವರದಿ ಮಾಡಿ. ದೂರಸಂಪರ್ಕ ಇಲಾಖೆಯು ಸಂಚಾರ ಸಾಥಿ ಪೋರ್ಟಲ್‌ನಲ್ಲಿ (sancharsaathi.gov.in) ಚಕ್ಷು ಸೌಲಭ್ಯವನ್ನು ಪ್ರಾರಂಭಿಸಿದೆ, ಮೆಸೇಜ್‌ಗಳು, ಕರೆಗಳು ಮತ್ತು WhatsApp ಖಾತೆಗಳ ಮೂಲಕ ವಂಚನೆಯಾಗಿದೆ ಎಂದು ಶಂಕಿಸಿದರೆ ಯಾರೇ ಆದರೂ ಅಲ್ಲಿ ವರದಿ ಮಾಡಬಹುದು.