PhonePe Blogs Main Featured Image

Trust & Safety

ವಂಚಕರ ತಡೆ: ವಿದ್ಯುತ್ ವಂಚನೆಗಳನ್ನು ತಪ್ಪಿಸಲು ನಿಮ್ಮ ಮಾರ್ಗದರ್ಶಿ

PhonePe Regional|3 min read|03 July, 2024

URL copied to clipboard

ಡಿಜಿಟಲ್ ಪ್ರಗತಿಯು ಮುಖ್ಯವಾಗಿರುವ ಈ ಸಮಯದಲ್ಲಿ, ಬಿಲ್‌ಗಳು ಮತ್ತು ವೆಚ್ಚಗಳನ್ನು ನಿರ್ವಹಿಸಲು ಆನ್‌ಲೈನ್ ಪಾವತಿಗಳು ಅನುಕೂಲಕರ ವಿಧಾನವಾಗಿವೆ. ಆದರೂ, ತಂತ್ರಜ್ಞಾನವು ವಿಕಸನಗೊಳ್ಳುತ್ತಿದ್ದಂತೆ, ಸೈಬರ್ ಅಪರಾಧಿಗಳ ಕುತಂತ್ರಗಳು ಸಹ ಹೆಚ್ಚಾಗುತ್ತಿವೆ.

ಈ ಬ್ಲಾಗ್ ಭಾರತದಲ್ಲಿ ಈಗೀಗ ಕಂಡು ಬರುತ್ತಿರುವ ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ ವಂಚನೆಯ ಅಪಾಯದ ಬಗ್ಗೆ ಬೆಳಕು ಚೆಲ್ಲುತ್ತದೆ, ಜೊತೆಗೆ ಅದರ ವಿವಿಧ ರೂಪಗಳು, ಸಂಭಾವ್ಯ ಪರಿಣಾಮಗಳು ಮತ್ತು ಡಿಜಿಟಲ್ ಯುಗದಲ್ಲಿ ಸುರಕ್ಷಿತವಾಗಿರಲು ಪೂರ್ವಭಾವಿ ಕ್ರಮಗಳ ಕುರಿತು ಚರ್ಚಿಸುತ್ತದೆ.

ಡಿಜಿಟಲ್ ಪಾವತಿಗಳಲ್ಲಿ ಹೆಚ್ಚಳ:

ಭಾರತದಲ್ಲಿ ಡಿಜಿಟಲ್ ಪರಿವರ್ತನೆಯು ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಆನ್‌ಲೈನ್ ವಹಿವಾಟುಗಳಲ್ಲಿ ತ್ವರಿತ ಹೆಚ್ಚಳವನ್ನು ಕಂಡಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಅನುಕೂಲತೆ, ವೇಗ ಮತ್ತು ದಕ್ಷತೆಯನ್ನು ನೀಡುತ್ತವೆ, ಗ್ರಾಹಕರು ತಮ್ಮ ಮನೆಯಲ್ಲಿ ಕುಳಿತೇ ತಮ್ಮ ಬಿಲ್‌ಗಳನ್ನು ಪಾವತಿ ಮಾಡಲು ದಾರಿ ಮಾಡಿಕೊಡುತ್ತವೆ.

ಆನ್ಲೈನ್ ವಿದ್ಯುತ್ ಬಿಲ್ ಪಾವತಿ ವಂಚನೆಯ ಪರಿಚಯ ಮತ್ತು ಅದರ ರೂಪಗಳು:

ಜನರು ತಮ್ಮ ವಿದ್ಯುತ್ ಬಿಲ್ ಪಾವತಿಸಿಲ್ಲ ಮತ್ತು ಅದನ್ನು ತಕ್ಷಣವೇ ಪಾವತಿಸಬೇಕು ಎಂದು ಹೇಳುವ ಟೆಕ್ಸ್ಟ್ ಮೆಸೇಜ್ ಮೂಲಕ ವಂಚಕರು ಸಾಮಾನ್ಯವಾಗಿ ಅವರ ಫೋನ್‌ಗಳನ್ನು ಹ್ಯಾಕ್ ಮಾಡುತ್ತಾರೆ. ಈ ಮೆಸೇಜ್‌ಗಳು ವಿದ್ಯುತ್ ಇಲಾಖೆಯಿಂದ ಬಂದಿರುವಂತೆ ಕಾಣುತ್ತವೆ ಮತ್ತು ಕಳೆದ ತಿಂಗಳ ಬಿಲ್ ಅನ್ನು ಇನ್ನೂ ಪಾವತಿಸದ ಕಾರಣ ಇಂದು ರಾತ್ರಿ ಅವರ ಮನೆಯ ವಿದ್ಯುತ್ ಕನೆಕ್ಷನ್ ಅನ್ನು ನಿಲ್ಲಿಸಲಾಗುವುದು ಎಂದು ಸ್ವೀಕರಿಸುವವರಿಗೆ ಎಚ್ಚರಿಸುತ್ತದೆ.

ಮಾದರಿ:

ಆತ್ಮೀಯ ಗ್ರಾಹಕರೇ, ನಿಮ್ಮ ಹಿಂದಿನ ತಿಂಗಳ ಬಿಲ್ ಅನ್ನು ನವೀಕರಿಸದ ಕಾರಣಇಂದು ರಾತ್ರಿ 8:30 ಗಂಟೆಗೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ದಯವಿಟ್ಟು ತಕ್ಷಣ ನಮ್ಮ ವಿದ್ಯುತ್ ಅಧಿಕಾರಿ 824*****59 ಅನ್ನು ಸಂಪರ್ಕಿಸಿ ಧನ್ಯವಾದಗಳು.

ವಿವಿಧ ರೂಪಗಳು:

ಫಿಶಿಂಗ್ ವಂಚನೆಗಳು:

ಸೈಬರ್ ಅಪರಾಧಿಗಳು ಬಳಕೆದಾರರಿಗೆ ಮೋಸ ಮಾಡಲು ತಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸುವಂತೆ ವಂಚಿಸುವ ಇಮೇಲ್‌ಗಳು, ಟೆಕ್ಸ್ಟ್ ಮೆಸೇಜ್‌ಗಳು ಅಥವಾ ನಕಲಿ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ. ಸಂದೇಹ ಪಡದಿದ್ದರೆ ವಂಚಕರಿಗೆ ಮೋಸದ ಬಿಲ್‌ಗಳನ್ನು ಪಾವತಿಸುವುದರೊಂದಿಗೆ ಇದು ಕೊನೆಗೊಳ್ಳಬಹುದು.

ಮಾಲ್ವೇರ್ ದಾಳಿಗಳು:

ದುರುದ್ದೇಶಪೂರಿತ ಸಾಫ್ಟ್‌ವೇರ್ ಇಂದ ಡಿವೈಸ್‌ಗಳಿಗೆ ಇನ್ಫೆಕ್ಟ್ ಮಾಡಬಹುದು ಮತ್ತು ಪಾವತಿ ವಿವರಗಳನ್ನು ಒಳಗೊಂಡಂತೆ ಸೂಕ್ಷ್ಮ ಡೇಟಾವನ್ನು ಕದಿಯಬಹುದು. ಹ್ಯಾಕರ್‌ಗಳು ಆನ್‌ಲೈನ್ ವಹಿವಾಟುಗಳನ್ನು ತಡೆಹಿಡಿದು ಪಾವತಿ ಪ್ರಕ್ರಿಯೆಗಳನ್ನು ಕುಶಲತೆಯಿಂದ ನಿರ್ವಹಿಸಬಹುದು.

ನಕಲಿ ಪಾವತಿ ಪೋರ್ಟಲ್ಗಳು:

ಕಾಲ್ಪನಿಕವಾಗಿ ಸೃಷ್ಟಿಸಿದ ವಿದ್ಯುತ್ ಬಿಲ್‌ಗಳಿಗೆ ಪಾವತಿಗಳನ್ನು ಸಂಗ್ರಹಿಸಲು ವಂಚಕರು ಅಧಿಕೃತವಾಗಿರುವಂತೆ ಕಾಣುವ ಪಾವತಿ ಪೋರ್ಟಲ್‌ಗಳನ್ನು ಸೃಷ್ಟಿಸುತ್ತಾರೆ. ಬಳಕೆದಾರರು, ಅವರು ಕಾನೂನುಬದ್ಧ ಪಾವತಿಗಳನ್ನು ಮಾಡುತ್ತಿದ್ದಾರೆ ಎಂದು ಭಾವಿಸಿ, ಈ ವಂಚನೆಗಳಿಗೆ ಬಲಿಯಾಗುತ್ತಾರೆ.

ಸೇವಾ ಪೂರೈಕೆದಾರರ ರೂಪದಲ್ಲಿ ಸೋಗು:

ಬಳಕೆದಾರರು ಬಾಕಿ ಇರುವ ಬಿಲ್‌ಗಳನ್ನು ಹೊಂದಿದ್ದಾರೆ ಎಂದು ತೋರಿಸುವ ಸ್ಕ್ಯಾಮರ್‌ಗಳು ಫೋನ್ ಕರೆಗಳು ಅಥವಾ ಇಮೇಲ್‌ಗಳ ಮೂಲಕ ವಿದ್ಯುತ್ ಪೂರೈಕೆದಾರರ ರೀತಿ ಸೋಗು ಹಾಕಿಕೊಂಡಿರಬಹುದು. ನಂತರ ಅವರು ಮೋಸದ ವಿಧಾನಗಳ ಮೂಲಕ ತಕ್ಷಣದ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ನಿರ್ದೇಶಿಸುತ್ತಾರೆ.

ಆನ್ಲೈನ್ ವಿದ್ಯುತ್ ಬಿಲ್ ಪಾವತಿ ವಂಚನೆಯ ಪರಿಣಾಮಗಳು:

ಆರ್ಥಿಕ ನಷ್ಟ:

ಬಲಿಪಶುಗಳು ಅರಿವಿಲ್ಲದೆ ಹಣವನ್ನು ಸೈಬರ್ ಅಪರಾಧಿಗಳಿಗೆ ವರ್ಗಾಯಿಸುತ್ತಾರೆ, ಇದರಿಂದಾಗಿ ತಕ್ಷಣದ ವಿತ್ತೀಯ ನಷ್ಟವಾಗುತ್ತದೆ.

ಗುರುತಿನ ಕಳ್ಳತನ: ಕದ್ದ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯು ಗುರುತಿನ ಕಳ್ಳತನ ಮತ್ತು ತದನಂತರದ ಆರ್ಥಿಕ ಹಾನಿಗೆ ಕಾರಣವಾಗಬಹುದು.

ಗೌಪ್ಯತೆ ಉಲ್ಲಂಘನೆ:

ದುಷ್ಟರ ಕೈಸೇರುವ ಸೂಕ್ಷ್ಮ ಡೇಟಾವು ಗೌಪ್ಯತೆಯ ರಾಜಿಗೆ ಕಾರಣವಾಗಬಹುದು ಹಾಗೂ ಬಳಕೆದಾರರನ್ನು ಇತರ ರೀತಿಯ ವಂಚನೆಗೆ ಒಡ್ಡಬಹುದು.

ತಡೆಗಟ್ಟುವ ಕ್ರಮಗಳು:

ಮೂಲಗಳನ್ನು ಪರಿಶೀಲಿಸಿ:

ಆನ್‌ಲೈನ್ ಪಾವತಿಗಳಿಗಾಗಿ ಕಾನೂನುಬದ್ಧ ವಿದ್ಯುತ್ ಪೂರೈಕೆದಾರರ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಮಾತ್ರ ಬಳಸಿ.

ಮಾಹಿತಿಪೂರ್ಣರಾಗಿ: ಸೈಬರ್‌ ಸೆಕ್ಯುರಿಟಿಗಳ ಇತ್ತೀಚಿನ ಟ್ರೆಂಡ್‌ಗಳು ಮತ್ತು ಸಾಮಾನ್ಯ ವಂಚನೆಗಳ ಬಗ್ಗೆ ನೀವಾಗಿಯೇ ತಿಳಿದು ಕೊಳ್ಳಿ.

URL ಗಳನ್ನು ಪರಿಶೀಲಿಸಿ:

ವೆಬ್‌ಸೈಟ್‌ನ URL “https://” ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಸುರಕ್ಷಿತ ಕನೆಕ್ಷನ್ನು ಸೂಚಿಸುವ ಪ್ಯಾಡ್‌ಲಾಕ್ ಐಕಾನ್ ಅನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಪಾವತಿ ವಿನಂತಿಗಳನ್ನು ಪರಿಶೀಲಿಸಿ:

ಯಾವುದೇ ವಹಿವಾಟು ಮಾಡುವ ಮೊದಲು ಪಾವತಿ ವಿನಂತಿಗಳ ದೃಢೀಕರಣ ಮತ್ತು ಕಳುಹಿಸುವವರ ಮಾಹಿತಿಯನ್ನು ಯಾವಾಗಲೂ ಎರಡು ಬಾರಿ ಪರಿಶೀಲಿಸಿ.

ಸುರಕ್ಷಿತ ಸಂವಹನ ಮಾರ್ಗಗಳು:

ಯಾವುದೇ ಪಾವತಿ-ಸಂಬಂಧಿತ ಪ್ರಶ್ನೆಗಳು ಅಥವಾ ಕಾಳಜಿಗಳಿಗಾಗಿ ನೀವು ಕಾನೂನುಬದ್ಧ ಗ್ರಾಹಕ ಸಹಾಯವಾಣಿಗಳೊಂದಿಗೆ ಮಾತ್ರ ಸಂವಹನ ನಡೆಸುವಿರಿ ಎಂದು ಖಚಿತಪಡಿಸಿಕೊಳ್ಳಿ.

ಅಧಿಕೃತ ಆ್ಯಪ್ಗಳನ್ನು ಬಳಸಿ

ಅಧಿಕೃತ ಆ್ಯಪ್ ಸ್ಟೋರ್‌ಗಳು ಮತ್ತು ಪರಿಶೀಲಿಸಿದ ಮೂಲಗಳಿಂದ ಮಾತ್ರ UPI ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ.

URL ಗಳನ್ನು ಪರಿಶೀಲಿಸಿ: ಕಾನೂನುಬದ್ಧತೆ ಮತ್ತು ಭದ್ರತೆಗಾಗಿ ವೆಬ್‌ಸೈಟ್ URL ಗಳನ್ನು ಪರಿಶೀಲಿಸಿ (“https” ಮತ್ತು ಪ್ಯಾಡ್‌ಲಾಕ್ ಐಕಾನ್ ಅನ್ನು ನೋಡಿ).

ಎರಡುಅಂಶಗಳ ದೃಢೀಕರಣ (2FA):

ನಿಮ್ಮ ಆನ್‌ಲೈನ್ ಖಾತೆಗಳಿಗೆ ಭದ್ರತೆಯ ಹೆಚ್ಚುವರಿ ಪದರವನ್ನು ಸೇರಿಸಲು ಸಾಧ್ಯವಾದಾಗಲೆಲ್ಲಾ 2FA ಅನ್ನು ಸಕ್ರಿಯಗೊಳಿಸಿ.

ಮಾಹಿತಿ ಹಂಚಿಕೊಳ್ಳುವುದನ್ನು ತಪ್ಪಿಸಿ: ಇಮೇಲ್ ಅಥವಾ ಫೋನ್ ಮೂಲಕ ವೈಯಕ್ತಿಕ, ಹಣಕಾಸು ಅಥವಾ ಪಾಸ್‌ವರ್ಡ್-ಸಂಬಂಧಿತ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.

ವರದಿ ಮಾಡುವ ಘಟನೆಗಳು:

ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ ವಂಚನೆಯನ್ನು ನೀವು ಅನುಮಾನಿಸಿದರೆ, ಅದನ್ನು ತಕ್ಷಣವೇ ನಿಮ್ಮ ವಿದ್ಯುತ್ ಪೂರೈಕೆದಾರರಿಗೆ ಮತ್ತು ಸ್ಥಳೀಯ ಪೊಲೀಸ್ ಅಥವಾ ಸೈಬರ್ ಅಪರಾಧ ಸಹಾಯವಾಣಿಗಳಂತಹ ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಿ.

UPI ಆಧಾರಿತ ವಂಚನೆಯನ್ನು ಎದುರಿಸಲು ಪ್ರಯತ್ನಗಳು:

ಜಾಗೃತಿ ಅಭಿಯಾನಗಳು:

ಸರ್ಕಾರಗಳು, ಹಣಕಾಸು ಸಂಸ್ಥೆಗಳು ಮತ್ತು ಸೈಬರ್‌ ಸೆಕ್ಯುರಿಟಿ ಏಜೆನ್ಸಿಗಳು UPI-ಸಂಬಂಧಿತ ವಂಚನೆ ಮತ್ತು ಸುರಕ್ಷಿತ ಅಭ್ಯಾಸಗಳ ಬಗ್ಗೆ ಬಳಕೆದಾರರಿಗೆ ಶಿಕ್ಷಣ ನೀಡಲು ಪ್ರಚಾರಗಳನ್ನು ನಡೆಸುತ್ತವೆ.

ಆ್ಯಪ್ ಭದ್ರತೆ: ಅನಧಿಕೃತ ಪ್ರವೇಶ ಮತ್ತು ವಂಚನೆಯನ್ನು ತಡೆಗಟ್ಟಲು ಪೇಮೆಂಟ್ ಆ್ಯಪ್‌ಗಳು ತಮ್ಮ ಭದ್ರತಾ ಕ್ರಮಗಳನ್ನು ನಿರಂತರವಾಗಿ ಹೆಚ್ಚಿಸುತ್ತವೆ.

ಸಾರಾಂಶ:

ವಿದ್ಯುತ್ ಬಿಲ್‌ಗಳಿಗೆ ಆನ್‌ಲೈನ್ ಪಾವತಿಯ ಅನುಕೂಲವು ಗ್ರಾಹಕರ ಜೀವನವನ್ನು ಸುಲಭಗೊಳಿಸಿದೆ, ಆದರೆ ಇದು ಹೆಚ್ಚಿನ ಜಾಗರೂಕತೆಯನ್ನು ಬಯಸುತ್ತದೆ. ಸೈಬರ್ ಅಪರಾಧಿಗಳು ಆರ್ಥಿಕ ಲಾಭಕ್ಕಾಗಿ ಡಿಜಿಟಲ್ ಮಾರ್ಗಗಳನ್ನು ಬಳಸಿಕೊಳ್ಳಲು ಬದಲಾಗುತ್ತಿದ್ದಾರೆ. ತಿಳುವಳಿಕೆ ಪಡೆಯುವ ಮೂಲಕ, ಉತ್ತಮ ಅಭ್ಯಾಸಗಳನ್ನು ಅನುಸರಿಸುವ ಮತ್ತು ಎಚ್ಚರಿಕೆಯ ವಿಧಾನವನ್ನು ನಿರ್ವಹಿಸುವ ಮೂಲಕ, ಭಾರತದ ವಿಕಾಸಗೊಳ್ಳುತ್ತಿರುವ ಡಿಜಿಟಲ್ ವ್ಯವಸ್ಥೆಯಲ್ಲಿ ಆನ್‌ಲೈನ್ ವಿದ್ಯುತ್ ಬಿಲ್ ಪಾವತಿ ವಂಚನೆಯ ಹಿಡಿತದಿಂದ ನಿಮ್ಮ ಹಣಕಾಸು ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನೀವು ಸಹಾಯ ಮಾಡಬಹುದು.

ನೀವು ವಿದ್ಯುತ್ ವಂಚನೆಗೆ ಬಲಿಯಾಗಿದ್ದರೆ, ಆಗ ನೀವು ಏನು ಮಾಡಬೇಕು:

ನೀವು ವಿದ್ಯುತ್ ವಂಚನೆ ಅಥವಾ ವಂಚನೆಗೆ ಬಲಿಯಾಗಿದ್ದೀರಿ ಎಂದು ನಿಮಗನಿಸಿದರೆ, ಸಂಭವನೀಯ ಹಾನಿಯನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ನಷ್ಟವನ್ನು ತಡೆಗಟ್ಟಲು ತುರ್ತು ಕ್ರಮವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನೀವು ತೆಗೆದುಕೊಳ್ಳಬೇಕಾದ ಹಂತಗಳು ಹೀಗಿವೆ:

  1. PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ಎತ್ತಬಹುದು.
  2. PhonePe ಗ್ರಾಹಕರ ಸಹಾಯವಾಣಿ ಸಂಖ್ಯೆ: ಸಮಸ್ಯೆಯನ್ನು ಸಲ್ಲಿಸಲು ನೀವು PhonePe ಗ್ರಾಹಕರ ಸಹಾಯವಾಣಿ ಸಂಖ್ಯೆ 80–68727374/022–68727374 ಕ್ಕೆ ಕರೆ ಮಾಡಬಹುದು, ಅದರ ನಂತರ ಗ್ರಾಹಕರ ಸಹಾಯವಾಣಿ ಏಜೆಂಟ್ ಟಿಕೆಟ್ ನೀಡುತ್ತಾರೆ ಮತ್ತು ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ
  3. ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ನ ವೆಬ್‌ಫಾರ್ಮ್ https://support.phonepe.com/ ಅನ್ನು ಬಳಸಿಕೊಂಡು ಟಿಕೆಟ್ ರಚಿಸಬಹುದು.
  4. ಸಾಮಾಜಿಕ ಮಾಧ್ಯಮ: ನೀವು PhonePe ಯ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು
    1. Twitter — https://twitter.com/PhonePeSupport
    2. Facebook — https://www.facebook.com/OfficialPhonePe
  5. ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗ್ ಇನ್ ಮಾಡಬಹುದು ಮತ್ತು ಹಿಂದೆ ಪಡೆದಿರುವ ಟಿಕೆಟ್ ಐ.ಡಿ ಯನ್ನು ಹಂಚಿಕೊಳ್ಳಬಹುದು.
  6. ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ 1930 ಮೂಲಕ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಪ್ರಮುಖ ಸೂಚನೆ – PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬರದಿದ್ದರೆ PhonePe ನಿಂದ ಬಂದಿದೆ ಎಂದು ಕಾಣುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ನೀವು ವಂಚನೆಯಾದ ಬಗ್ಗೆ ಅನುಮಾನ ಬಂದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading