Trust & Safety
ನಕಲಿ ಪಾವತಿ ಸ್ಕ್ರೀನ್‌ಶಾಟ್‌ಗಳಿಗೆ ಬಲಿಯಾಗುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡಲು ಇಲ್ಲಿದೆ ತ್ವರಿತ ಮಾರ್ಗದರ್ಶಿ
PhonePe Regional|2 min read|03 July, 2024
ಸ್ಕ್ರೀನ್‌ಶಾಟ್ ಅಥವಾ ಸ್ಕ್ಯಾಮ್ ಶಾಟ್? ನಕಲಿ ಸ್ಕ್ರೀನ್‌ಶಾಟ್ ವಂಚನೆಗಳು ವ್ಯಾಪಾರಿಗಳಿಗೆ ನಿಜವಾದ ಸಮಸ್ಯೆಯಾಗಿವೆ. ವಿಶೇಷವಾಗಿ ಮಾರಾಟಗಾರರು, ನೂರಾರು ಜನ ಸೇರುವ, ಗಿಜಿಗುಡುವ ಫುಡ್ ಸ್ಟ್ರೀಟ್ ಅಥವಾ ಜನಪ್ರಿಯ ಮಾರುಕಟ್ಟೆಗಳಲ್ಲಿ ಇದು ತೊಂದರೆ ಎನಿಸಿದೆ. ಇಂತಹ ಸಂದರ್ಭಗಳಲ್ಲಿ ಪಾವತಿ ದೃಢೀಕರಣವನ್ನು ಪ್ರಮಾಣೀಕರಿಸುವುದು ಸಾಕಷ್ಟು ಸವಾಲಿನ ಕೆಲಸವೇ ಆಗಿದೆ. ಅಮಾಯಕರನ್ನು ಬಲಿಪಶು ಮಾಡಲು ಯೋಜನೆಯನ್ನು ರೂಪಿಸುವುದಕ್ಕಾಗಿ ವಂಚಕರಿಗೆ ಅವಕಾಶ ದೊರೆತಂತಾಗಿದೆ.
ನಕಲಿ ಸ್ಕ್ರೀನ್‌ಶಾಟ್ ವಂಚನೆ ಎಂದರೆ ವಂಚಕನು ಪಾವತಿಯನ್ನು ಪ್ರಕ್ರಿಯೆಗೊಳಿಸಲಾಗಿದೆ ಮತ್ತು ಅಮಾಯಕರ ಖಾತೆಗೆ ಮೊತ್ತವನ್ನು ಜಮಾ ಮಾಡಲಾಗಿದೆ ಎಂದು ಅವರನ್ನು ಮೋಸಗೊಳಿಸಲು ಪಾವತಿ ದೃಢೀಕರಣದ ನಕಲಿ ಸ್ಕ್ರೀನ್‌ಶಾಟ್ ಅನ್ನು ರಚಿಸುವುದಾಗಿದೆ.
ಆನ್‌ಲೈನ್ ಪಾವತಿಗಳ ಅಳವಡಿಕೆಯು ನಗದು ನಿರ್ವಹಣೆ ಮತ್ತು ಹಣದ ಹರಿವಿಗೆ ಸಂಬಂಧಪಟ್ಟ ಪ್ರಮುಖ ಸಮಸ್ಯೆಗಳನ್ನು ಖಂಡಿತವಾಗಿಯೂ ಪರಿಹರಿಸುತ್ತದೆ. ಆದಾಗ್ಯೂ, ಮೋಸದ ಅಭ್ಯಾಸಗಳು ಅವ್ಯವಸ್ಥೆ ಮತ್ತು ನಷ್ಟವನ್ನು ಉಂಟುಮಾಡಬಹುದು. ಇದನ್ನು ಎದುರಿಸುವ ಮಾರ್ಗವೆಂದರೆ ಹೆಚ್ಚು ಜಾಗೃತರಾಗಿರಬೇಕು ಮತ್ತು ಬಲಿಪಶುವಾಗುವುದನ್ನು ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.
ವಂಚಕರು ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಹೇಗೆ ರಚಿಸುತ್ತಾರೆ?
ಮೂಲ ಪಾವತಿ ದೃಢೀಕರಣ ಸಂದೇಶ/ಆ್ಯಪ್ ಪುಟವನ್ನು ಎಡಿಟ್ ಮಾಡುವ ಮೂಲಕ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ರಚಿಸಲು ವಂಚಕರಿಗೆ ಅವಕಾಶ ನೀಡುವ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಸರಳವಾದ Google ಸರ್ಚ್‌ನಿಂದ ವಂಚಕರಿಗೆ ಇಂತಹ ವಂಚನೆಗಳನ್ನು ನಡೆಸಲು ಸಾಕಷ್ಟು ಆಯ್ಕೆಗಳು ದೊರೆಯುತ್ತವೆ.
ವಂಚನೆಯ ಸನ್ನಿವೇಶಗಳು
ಪಾವತಿ ದೃಢೀಕರಣಕ್ಕಾಗಿ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಬಳಸುವ ಕೆಲವು ಸನ್ನಿವೇಶಗಳು ಈ ಮುಂದಿನಂತಿವೆ. ಅದನ್ನು ಓದಿರಿ. ಇದರಿಂದ ನೀವು ಅಂತಹ ವಂಚನೆಯ ಬಲೆಗೆ ಬೀಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು.
- ಆಫ್‌ಲೈನ್ ವ್ಯಾಪಾರಿಗಳನ್ನು ದಾರಿತಪ್ಪಿಸುವಿಕೆ: ವ್ಯಾಪಾರಿಯು ಬಿಡುವಿಲ್ಲದೆ ಕೆಲಸ ಮಾಡುತ್ತಿರುವಾಗ ಅಥವಾ ಬೇರೆ ಕಡೆಗೆ ಗಮನಹರಿಸಿದ್ದಾಗ ಪಾವತಿ ದೃಢೀಕರಣವನ್ನು ಪರಿಶೀಲಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿಯು ಆಗಾಗ್ಗೆ ಎದುರಾಗುತ್ತದೆ. ವಂಚಕರು ವ್ಯಾಪಾರಿಯಿಂದ ಉತ್ಪನ್ನಗಳು ಅಥವಾ ಸೇವೆಗಳನ್ನು ಪಡೆಯುವುದಕ್ಕಾಗಿ ನಕಲಿ ಸ್ಕ್ರೀನ್‌ಶಾಟ್ ಬಳಸಲು ಈ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಾರೆ.
- ಆನ್‌ಲೈನ್ ವ್ಯವಹಾರಗಳಲ್ಲಿ ವಂಚಿಸುವುದು: ಇತರ ಸಂದರ್ಭಗಳಲ್ಲಿ, ಗ್ರಾಹಕರ ನೆಲೆಯನ್ನು ನಿರ್ಮಿಸಲು ಮತ್ತು ಉತ್ತಮ ಗ್ರಾಹಕ ಅನುಭವವನ್ನು ಕಾಪಾಡಿಕೊಳ್ಳಲು ಪ್ರತಿ ಆರ್ಡರ್ ಕೂಡಾ ಪ್ರಮುಖವಾಗಿರುವ ಹೊಸ instagram ವ್ಯವಹಾರದಲ್ಲಿರುವಂತೆ, ನೋಟಿಫಿಕೇಶನ್ ಅನ್ನು ಸ್ವೀಕರಿಸದಿದ್ದರೂ ಪಾವತಿ ದೃಢೀಕರಣದ ಸ್ಕ್ರೀನ್‌ಶಾಟ್ ಅನ್ನು ಕಳುಹಿಸುವ ವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ನಂಬುವಂತೆ ಮಾಡಲಾಗುತ್ತದೆ. ಅವರು ನಂತರ ಪಾವತಿಯನ್ನು ಸ್ವೀಕರಿಸುತ್ತೇವೆ ಎಂಬ ನಂಬಿಕೆಯೊಂದಿಗೆ ಉತ್ಪನ್ನ ಅಥವಾ ಸೇವೆಯನ್ನು ನೀಡುತ್ತಾರೆ. ವಂಚಕರಿಂದ ಮೋಸ ಹೋಗಿರುವುದಾಗಿ ಆ ಅಮಾಯಕರಿಗೆ ಬಹಳ ಹೊತ್ತಿನ ನಂತರವಷ್ಟೇ ತಿಳಿಯುತ್ತದೆ.
- ಹಣ ವರ್ಗಾವಣೆಗೆ ನಗದು: ತುರ್ತಾಗಿ ನಗದು ಹಣದ ಅಗತ್ಯವಿದೆ ಎಂದು ನಟಿಸುತ್ತಾ, ವಂಚಕರು ಆನ್‌ಲೈನ್ ಪಾವತಿಗೆ ಬದಲಾಗಿ ನಗದನ್ನು ಹಸ್ತಾಂತರಿಸುವಂತೆ ಅಮಾಯಕರನ್ನು ಬೇಡಿಕೊಳ್ಳುತ್ತಾರೆ. ಅವರು ಅಮಾಯಕರ ಖಾತೆ ವಿವರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರಿಂದ ಹಣವನ್ನು ಪಡೆಯಲು ನಕಲಿ ವಹಿವಾಟಿನ ಸ್ಕ್ರೀನ್‌ಶಾಟ್ ಅನ್ನು ತೋರಿಸುತ್ತಾರೆ.
- ವ್ಯಕ್ತಿಯಿಂದ ವ್ಯಕ್ತಿಗೆ ನಕಲಿ ಹಣ ವರ್ಗಾವಣೆ: ತಪ್ಪಾಗಿ ಹಣ ಕಳುಹಿಸಿದ್ದೇವೆ ಎಂಬ ನೆಪದಲ್ಲಿ Whatsapp ನಲ್ಲಿ ಸ್ಕ್ರೀನ್‌ಶಾಟ್ ಕಳುಹಿಸಿ, ನಿರಂತರವಾಗಿ ಕರೆ ಮಾಡುತ್ತಾರೆ. ಹಣವನ್ನು ಕಳುಹಿಸಲು ಒಪ್ಪದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಸಿ ಹಣ ವಾಪಸ್ ಕಳುಹಿಸುವಂತೆ ಅಮಾಯಕರನ್ನು ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಾರೆ.
ನಕಲಿ ಸ್ಕ್ರೀನ್‌ಶಾಟ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ರಮಗಳು
- ಯಾವಾಗಲೂ ಉತ್ಪನ್ನ ಅಥವಾ ಸೇವೆಯನ್ನು ಹಸ್ತಾಂತರಿಸುವ ಮೊದಲು ಪಾವತಿ ದೃಢೀಕರಣ ಸಂದೇಶವನ್ನು ಪರಿಶೀಲಿಸಿ. ನಿಮ್ಮ ವಹಿವಾಟಿನ ಇತಿಹಾಸವನ್ನು ಮತ್ತೊಮ್ಮೆ ಪರೀಕ್ಷಿಸುವ ಮೂಲಕ ನೀವು ಇದನ್ನು ಮಾಡಬಹುದು.
- ಕೇವಲ ಸ್ಕ್ರೀನ್‌ಶಾಟ್‌ಗಳ ಮೇಲೆ ಅವಲಂಬಿತರಾಗಬೇಡಿ. ಪಾವತಿಗಳನ್ನು ಪರಿಶೀಲಿಸಲು ಸ್ಕ್ರೀನ್‌ಶಾಟ್‌ಗಳು ಸಹಾಯಕವಾಗಬಹುದು. ಆದರೆ ಅವುಗಳನ್ನು ಸುಲಭವಾಗಿ ನಕಲು ಮಾಡಬಹುದು. ಅದರ ಬದಲಿಗೆ, ನಿಮ್ಮ ನೋಂದಾಯಿತ ಬ್ಯಾಂಕ್‌ನಿಂದ ಇಮೇಲ್ ಅಥವಾ SMS ನೋಟಿಫಿಕೇಶನ್‌ಗಳಂತಹ ಪಾವತಿ ದೃಢೀಕರಣದ ಇತರ ಸೂಚಕಗಳನ್ನು ಪರಿಶೀಲಿಸಿ.
- ವ್ಯಾಪಾರಿಗಾಗಿ, ಧ್ವನಿ ಸಂದೇಶದ ಮೂಲಕ ಪಾವತಿಗಳನ್ನು ಸೂಚಿಸುವ ಸ್ಮಾರ್ಟ್‌ಸ್ಪೀಕರ್ ಎಂದಿಗೂ ತಪ್ಪಾಗುವುದಿಲ್ಲ
ನೀವು ನಕಲಿ ಸ್ಕ್ರೀನ್‌ಶಾಟ್ ವಂಚನೆಗೆ ಬಲಿಯಾಗಿದ್ದರೆ ನೀವು ಏನು ಮಾಡಬೇಕು
ಒಂದು ವೇಳೆ ನೀವು PhonePe ನಲ್ಲಿ ವಂಚಕರಿಂದ ಮೋಸಗೊಂಡಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ಸಮಸ್ಯೆಯನ್ನು ತಿಳಿಸಬಹುದು:
- PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವ್ಯವಹಾರದಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ತಿಳಿಸಿ.
- PhonePe ಗ್ರಾಹಕ ಸೇವಾ ಸಂಖ್ಯೆ: ನೀವು PhonePe ಗ್ರಾಹಕ ಸೇವೆಯನ್ನು 80–68727374/022–68727374 ಗೆ ಕರೆ ಮಾಡುವುದರ ಮೂಲಕ ಸಂಪರ್ಕಿಸಿ, ಸಮಸ್ಯೆಯನ್ನು ತಿಳಿಸಬಹುದು. ನಂತರ ಈ ಕುರಿತು ಗ್ರಾಹಕ ಸೇವಾ ಏಜೆಂಟ್ ಟಿಕೆಟ್ ಸಲ್ಲಿಸುತ್ತಾರೆ ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತಾರೆ.
- ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ನ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ಟಿಕೆಟ್ ಸಲ್ಲಿಸಬಹುದು, https://support.phonepe.com/
- ಸೋಶಿಯಲ್ ಮೀಡಿಯಾ: ನೀವು PhonePe ನ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ವಂಚನೆಯ ಘಟನೆಗಳನ್ನು ವರದಿ ಮಾಡಬಹುದು.
Twitter — https://twitter.com/PhonePeSupport
Facebook — https://www.facebook.com/OfficialPhonePe - ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಸಲ್ಲಿಸಲಾದ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆಯ ಕುರಿತಾದ ದೂರುಗಳನ್ನು ವರದಿ ಮಾಡಬಹುದು ಅಥವಾ ಆನ್‌ಲೈನ್‌ನಲ್ಲಿ https://www.cybercrime.gov.in/ ನ ಮೂಲಕ ದೂರು ದಾಖಲಿಸಬಹುದು ಅಥವಾ 1930 ಗೆ ಕರೆ ಮಾಡಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಪ್ರಮುಖ ರಿಮೈಂಡರ್ – PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. PhonePe ನಿಂದ ಎಂದು ಹೇಳಿಕೊಳ್ಳುವ ಆದರೆ Phonepe.com ಡೊಮೇನ್‌ನಿಂದ ಅಲ್ಲದ ಎಲ್ಲ ಮೇಲ್‌ಗಳನ್ನು ನಿರ್ಲಕ್ಷಿಸಿ. ನಿಮಗೆ ವಂಚನೆಯ ಕುರಿತು ಅನುಮಾನ ಮೂಡಿದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.