PhonePe Blogs Main Featured Image

Trust & Safety

ಮನಿ ಮ್ಯೂಲ್‌ ಆಗಬೇಡಿ: ಆರ್ಥಿಕ ಹಗರಣದಿಂದ ನಿಮ್ಮನ್ನು ಕಾಪಾಡಲು ಇಲ್ಲಿದೆ ಮಾರ್ಗದರ್ಶಿ

PhonePe Regional|3 min read|28 February, 2025

URL copied to clipboard

ಸುಮ್ಮನೇ ಊಹೆ ಮಾಡಿಕೊಳ್ಳಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಸ್ವೀಕರಿಸಿ ಆ ಪಾವತಿಯನ್ನು ನಿಮ್ಮ ಖಾತೆಯ ಮೂಲಕ ಫಾರ್ವರ್ಡ್‌ ಮಾಡುವುದಕ್ಕೆ ನೀವು ಪ್ರತಿ ವಾರ ₹500 ಪಡೆಯಲು ಪ್ರಾರಂಭಿಸಿದರೆ ನಿಮಗೆ ಹೇಗನಿಸುತ್ತದೆ? ಇದನ್ನು ಕೇಳಲು ತುಂಬ ಚೆನ್ನಾಗಿದೆ ಎಂದು ಅನಿಸುತ್ತದೆ ಅಲ್ಲವೇ? ಆದರೆ ವಾಸ್ತವದಲ್ಲಿ ಅದು ಹಾಗಲ್ಲ – ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಹಣಕಾಸಿನ ಹಗರಣಗಳಿಗೆ ಬಲಿಯಾಗುತ್ತಿರುವ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ವಂಚಕರು ಮ್ಯೂಲ್ ಖಾತೆಗಳನ್ನು ಬಳಸಿಕೊಂಡು ಹಣವನ್ನು ಅಕ್ರಮವಾಗಿ ವರ್ಗಾಯಿಸುತ್ತಾರೆ ಅಥವಾ ಅಪರಾಧಿಗಳು ವೈಯಕ್ತಿಕವಾಗಿ ತೊಡಗಿಕೊಳ್ಳದೇ ಇತರ ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಮುಂದುವರೆಯುತ್ತಾರೆ. ಮ್ಯೂಲ್ ಖಾತೆಗಳು ಯಾವುವು, ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವು ಜನರಿಗೆ ಮತ್ತು ಕಂಪನಿಗಳಿಗೆ ಏಕೆ ಅಪಾಯವನ್ನುಂಟುಮಾಡುತ್ತವೆ ಎಂಬುದನ್ನು ಈ ಬ್ಲಾಗ್‌ನ ಮೂಲಕ ನಾವು ತಿಳಿಯೋಣ.

ಮನಿ ಮ್ಯೂಲ್ ಎಂದರೇನು?

ಮನಿ ಮ್ಯೂಲ್‌ಗಳು ಎಂದರೆ ವಂಚನೆ ಅಥವಾ ಕೆಲವು ಕಾನೂನುಬಾಹಿರ ಚಟುವಟಿಕೆಯ ಭಾಗವಾಗಿ ಇತರರ ಆದೇಶದ ಮೇರೆಗೆ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸುವ ಜನರು ಎಂದರ್ಥ. ಮನಿ ಮ್ಯೂಲ್‌ಗಳು ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಸ್ವೀಕರಿಸುತ್ತಾರೆ ಮತ್ತು ನಂತರ ಅದನ್ನು ಮತ್ತೊಂದು ಖಾತೆಗೆ ವರ್ಗಾಯಿಸುತ್ತಾರೆ. ಸಾಮಾನ್ಯವಾಗಿ ಇಲ್ಲಿ ಕಮಿಷನ್ ಅಥವಾ ಬಹುಮಾನವನ್ನು ನೀಡುತ್ತೇವೆ ಎಂಬ ಸುಳ್ಳು ಭರವಸೆಯನ್ನು ನೀಡಲಾಗುತ್ತದೆ. ಕೆಲವು ಜನರು ಉದ್ದೇಶಪೂರ್ವಕವಾಗಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಅನೇಕ ಬಾರಿ ಜನರು ಮೋಸ ಹೋಗಿ ಈ ಅಪರಾಧದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಊಹಿಸಿ: ನೀವು ಹಣಕಾಸು ಸಹಾಯಕರಾಗಿ ಆಯ್ಕೆಯಾಗಿದ್ದೀರಿ ಎಂದು ಹೇಳುವ ಉದ್ಯೋಗದ ಆಫರ್‌ ಅನ್ನು ನೀವು ಸ್ವೀಕರಿಸುತ್ತೀರಿ. ಅದು ವಿಶ್ವಾಸಾರ್ಹ ಆಫರ್‌ನಂತೆಯೇ ಕಾಣುತ್ತದೆ. ನಿಮ್ಮ ಕೆಲಸ, ಕಂಪನಿಯು ಅಂತಾರಾಷ್ಟ್ರೀಯ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಹಾಯ ಮಾಡುವುದು ಎಂದು ನಿಮಗೆ ಹೇಳಲಾಗುತ್ತದೆ – ಈ ಕೆಲಸ ಸುಲಭ ಎಂದು ನೀವು ಭಾವಿಸುವಂತೆ ಮಾಡಲಾಗುತ್ತದೆ. ಆದರೆ ನೀವು ಆ ಕೆಲಸವನ್ನು ಒಪ್ಪಿಕೊಂಡರೆ ಮನಿ ಮ್ಯೂಲ್‌ ಆಗುತ್ತೀರಿ ಎಂಬುದನ್ನು ಇಲ್ಲಿ ನಿಮಗೆ ಮರೆಮಾಚಲಾಗುತ್ತಿದೆ. ಜೊತೆಗೆ ನೀವು ಸಂಕೀರ್ಣವಾದ ಹಣ ವರ್ಗಾವಣೆ ಕಾರ್ಯಾಚರಣೆಯ ಭಾಗವಾಗುತ್ತೀರಿ.

ಮ್ಯೂಲ್ ಖಾತೆಗಳನ್ನು ಸಾಮಾನ್ಯವಾಗಿ ಮನಿ ಲಾಂಡರಿಂಗ್‌ ಯೋಜನೆಗಳಲ್ಲಿ ಬಳಸಲಾಗುತ್ತದೆ. ಅಲ್ಲಿ ಕದ್ದ ಹಣವನ್ನು ಅದರ ನಿಜವಾದ ಮೂಲವನ್ನು ಮರೆಮಾಡಲು ಹಲವು ಖಾತೆಗಳ ಮೂಲಕ ರವಾನಿಸಲಾಗುತ್ತದೆ. ಇದರಿಂದ ತನಿಖಾ ಸಂಸ್ಥೆಗಳಿಗೆ ಅಪರಾಧಿಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಈ ಖಾತೆಗಳನ್ನು ಫಿಶಿಂಗ್ ಸ್ಕೀಮ್‌ಗಳು, ಲಾಟರಿ ವಂಚನೆ ಅಥವಾ ನಕಲಿ ಹೂಡಿಕೆ ಸ್ಕೀಮ್‌ಗಳಲ್ಲಿಯೂ ಬಳಸಲಾಗುತ್ತದೆ. ಅಲ್ಲಿ ಜನರು ಈ ಖಾತೆಗಳಿಗೆ ಹಣವನ್ನು ಕಳುಹಿಸುವಂತೆ ಮಾಡಿ ಮೋಸಗೊಳಿಸಲಾಗುತ್ತದೆ.

ವಂಚಕರು ತಮ್ಮ ನೆಟ್‌ವರ್ಕ್ ಅನ್ನು ನಿರ್ಮಿಸುವ ಬಗೆ

ಮನಿ ಮ್ಯೂಲ್ ನೆಟ್‌ವರ್ಕ್‌ಗಳು ಒಂದು ಜಾಲವಾಗಿದ್ದು, ಅಪರಾಧಿಗಳು ತಮ್ಮ ಗುರುತನ್ನು ಮರೆಮಾಚುವ ಮೂಲಕ ಅಪರಿಚಿತ ಜನರು ಮತ್ತು ಮನಿ ಮ್ಯೂಲ್‌ ನಡುವಿನ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಬಹು ಕುಶಲತೆಯಿಂದ ನಿರ್ವಹಿಸುತ್ತಾರೆ. ಈ ಇಡೀ ಪ್ರಕ್ರಿಯೆಯ ಹಿಂದೆ, ಈ ದಂಧೆಯನ್ನು ನಡೆಸಿ ಜನರನ್ನು ಬಲೆಗೆ ಬೀಳಿಸುವ “ಮ್ಯೂಲ್ ಕಂಟ್ರೋಲರ್‌ಗಳು” ಅಥವಾ “ರೆಕ್ರೂಟರ್ಸ್‌” ಇರುತ್ತಾರೆ.

ಮ್ಯೂಲ್ ಕಂಟ್ರೋಲರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ?

  1. ನೇಮಕಾತಿ: ವಂಚಕರು ತಾವು ನೇರ ಸಂಪರ್ಕ ಹೊಂದಿರುವ ಜನರೊಂದಿಗೆ ಮಾತನಾಡುತ್ತಾರೆ ಮತ್ತು “ಸುಲಭವಾಗಿ ಹಣ ಸಂಪಾದಿಸಿ” ಎಂಬಂತಹ ಅಥವಾ ನಕಲಿ ಉದ್ಯೋಗಾವಕಾಶಗಳು ಅಥವಾ ಸಾಮಾಜಿಕ ಮಾಧ್ಯಮಗಳಂತಹ ಜಾಹೀರಾತುಗಳ ಮೂಲಕ ಮ್ಯೂಲ್‌ ಆಗಲು ಸಿದ್ಧರಿರುವವರನ್ನು ಗುರುತಿಸುತ್ತಾರೆ. ನೀವು ಮೊದಲು ಇವುಗಳ ಬಗ್ಗೆ ತಿಳಿದುಕೊಳ್ಳುವಾಗ ಅಥವಾ ಕೇಳುವಾಗ ಇವು ಕಾನೂನುಬದ್ಧ ಅವಕಾಶಗಳಂತೆ ಕಂಡುಬಂದರೂ, ಅವುಗಳ ನಿಜವಾದ ಗುರಿ ಜನರನ್ನು ಮ್ಯೂಲ್‌ಗಳನ್ನಾಗಿ ಮಾಡುವುದಾಗಿರುತ್ತದೆ.
  2. ಹಣದ ಸಂಗ್ರಹಣೆ: ಮ್ಯೂಲ್‌ ಖಾತೆಯನ್ನು ಒಮ್ಮೆ ಸೆಟಪ್‌ ಮಾಡಿದ ನಂತರ, ಅದಕ್ಕೆ ಹಣವನ್ನು ಲೋಡ್ ಮಾಡಲಾಗುತ್ತದೆ – ಬಹುತೇಕವಾಗಿ ಹಗರಣಗಳು, ವಂಚನೆ ಅಥವಾ ಕದ್ದ ಕ್ರೆಡಿಟ್ ಕಾರ್ಡ್‌ಗಳಿಂದ ಹಣ ಲೋಡ್‌ ಮಾಡಲಾಗುತ್ತದೆ. ಈ ಮೊತ್ತವನ್ನು ವೈರ್ ಟ್ರಾನ್ಸ್‌ಫರ್‌ ಅಥವಾ ಆನ್‌ಲೈನ್ ಪಾವತಿಯ ಮೂಲಕ ಕಳುಹಿಸಲಾಗುತ್ತದೆ.
  3. ಹಣದ ಚಲನೆ: ವಂಚಕರು ಬೇರೆ ಖಾತೆ ಅಥವಾ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸಲು ಮ್ಯೂಲ್‌ ಅನ್ನು ಕೇಳುತ್ತಾರೆ. ಇದು ಹೆಚ್ಚಾಗಿ ವಿದೇಶಗಳಲ್ಲಿ ಕಂಡುಬರುತ್ತದೆ. ಅನೇಕ ಬಾರಿ ಮ್ಯೂಲ್‌, ಹಣವನ್ನು ಬೇರೆ ಕರೆನ್ಸಿಗೆ ವಿನಿಮಯ ಮಾಡಿಕೊಳ್ಳುತ್ತಾರೆ ಅಥವಾ ಕೆಲವು ಸರಕುಗಳನ್ನು ಖರೀದಿಸಿ ಬೇರೆ ಸ್ಥಳಕ್ಕೆ ಕಳುಹಿಸುತ್ತಾರೆ.
  4. ಟ್ರ್ಯಾಕ್‌ಗಳನ್ನು ಮರೆಮಾಚುವುದು: ಅಪರಾಧಿಗಳು ಸತತವಾಗಿ ಅನೇಕ ಬಾರಿ ವಿಭಿನ್ನ ಮ್ಯೂಲ್ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸುತ್ತಾರೆ. ಇದರಿಂದಾಗಿ ತನಿಖಾಧಿಕಾರಿಗಳಿಗೆ ಅಕ್ರಮ ಹಣವನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ. ಕ್ರಿಮಿನಲ್‌ಗಳ ಗುರಿ, ಹಣಕಾಸು ವಹಿವಾಟಿನ ಹರಿವಿನಲ್ಲಿ ಗೊಂದಲ ಸೃಷ್ಟಿಸುವುದಾಗಿರುತ್ತದೆ. ಇದರಿಂದ ಯಾರು ಮೊದಲು ಹಣವನ್ನು ಕಳುಹಿಸಿದರು ಮತ್ತು ಅದು ಅಂತಿಮವಾಗಿ ಯಾರನ್ನು ತಲುಪಿತು ಎಂಬುದನ್ನು ಗುರುತಿಸುವುದು ಕಷ್ಟಕರವಾಗುತ್ತದೆ.

ವಂಚಕರು ಮ್ಯೂಲ್‌ಗಳನ್ನು ಹೇಗೆ ನೇಮಿಸಿಕೊಳ್ಳುತ್ತಾರೆ?

ವಂಚಕರು ಸಾಮಾನ್ಯವಾಗಿ ಆರ್ಥಿಕವಾಗಿ ದುರ್ಬಲರಾಗಿರುವ ಅಥವಾ ಹಣ ಗಳಿಸುವ ಸುಲಭ ಮಾರ್ಗಗಳನ್ನು ಹುಡುಕುತ್ತಿರುವ ಜನರನ್ನು ಗುರಿಯಾಗಿಸಿಕೊಳ್ಳುತ್ತಾರೆ. ಹಾಗೆ ನೇಮಕ ಮಾಡಿಕೊಳ್ಳುವ ಸಾಮಾನ್ಯ ತಂತ್ರಗಳು ಈ ಮುಂದಿನಂತಿವೆ.

  • ಉದ್ಯೋಗದ ನಕಲಿ ಆಫರ್‌ಗಳು: ವಂಚಕರು ಸಾಮಾನ್ಯವಾಗಿ ನಕಲಿ ಉದ್ಯೋಗಗಳನ್ನು, ಅದರಲ್ಲೂ ರಿಮೋಟ್‌ ಆಗಿ ಕಾರ್ಯನಿರ್ವಹಿಸುವ ಅಥವಾ ಮನೆಯಿಂದ ಕೆಲಸ ಮಾಡುವ ಉದ್ಯೋಗಗಳನ್ನು ಪ್ರಚಾರ ಮಾಡುತ್ತಾರೆ. ನೀವು ಈ ಕೆಲಸಗಳಿಗೆ ಸೇರಿದರೆ, ನಿಮಗೆ ಸುಲಭ ಹಣ ಅಥವಾ ಕಡಿಮೆ ಶ್ರಮದಿಂದ ಕಮಿಷನ್ ದೊರೆಯುತ್ತದೆ ಎಂಬ ಭರವಸೆ ನೀಡಲಾಗುತ್ತದೆ. ಯಾರಾದರೂ ಅವರ ಬಲೆಗೆ ಬಿದ್ದ ಕೂಡಲೇ, ಹಣವನ್ನು ಜಮಾ ಮಾಡಲು ಮತ್ತು ವರ್ಗಾಯಿಸಲು ಬ್ಯಾಂಕ್ ಖಾತೆಯನ್ನು ತೆರೆಯವುದಕ್ಕೆ ತಿಳಿಸಲಾಗುತ್ತದೆ.
  • ಹೂಡಿಕೆ ಮತ್ತು ಲಾಟರಿ ವಂಚನೆಗಳು: ಈ ವಂಚನೆಗೆ ಬಲಿಯಾದವರನ್ನು ಲಾಟರಿ ಗೆದ್ದಿದ್ದಾರೆ ಅಥವಾ ಉತ್ತಮ ಹೂಡಿಕೆ ಅವಕಾಶವನ್ನು ಪಡೆದಿದ್ದಾರೆ ಎಂದು ವಂಚಕರು ನಂಬಿಸುತ್ತಾರೆ. ನಂತರ ಹಣ ಸ್ವೀಕರಿಸಲು ಖಾತೆಯನ್ನು ತೆರೆಯಬೇಕೆಂದು ತಿಳಿಸಲಾಗುತ್ತದೆ. ಆದರೆ ವಾಸ್ತವವಾಗಿ ಖಾತೆಯನ್ನು ವಂಚನೆಗಾಗಿ ಬಳಸಲಾಗುತ್ತದೆ.
  • ತುರ್ತು ಸನ್ನಿವೇಶಗಳು: ಕೆಲವು ವಂಚಕರು ಭಯ ಮತ್ತು ಆತುರದ ಲಾಭವನ್ನು ಪಡೆದುಕೊಳ್ಳುತ್ತಾರೆ. ನೀವು ಹಣವನ್ನು ನೀಡಬೇಕು ಮತ್ತು ಹಣವನ್ನು ವರ್ಗಾಯಿಸಲು ನೀವು ಸಹಾಯ ಮಾಡದಿದ್ದರೆ, ದೊಡ್ಡ ತೊಂದರೆಗೆ ಸಿಲುಕುತ್ತೀರಿ ಎಂದು ಬೆದರಿಕೆ ಹಾಕುತ್ತಾರೆ.

ಮ್ಯೂಲ್‌ ಆಗುವುದರಿಂದ ಉಂಟಾಗುವ ಅಪಾಯಗಳು ಮತ್ತು ಪರಿಣಾಮಗಳು 

ಕೆಲವು ಜನರು ಮನಿ ಮ್ಯೂಲ್‌ಗಳಾಗಲು ಸ್ವಯಂ ಮುಂದಾದರೆ, ಇನ್ನು ಹಲವರು ತಿಳಿಯದೆಯೇ ಇದರಲ್ಲಿ ಭಾಗಿಯಾಗುತ್ತಾರೆ. ಉದ್ದೇಶ ಏನೇ ಇರಲಿ, ಮ್ಯೂಲ್‌ ಖಾತೆಗಳೊಂದಿಗೆ ಸಂಬಂಧ ಹೊಂದುವುದರಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು:

1. ಕಾನೂನು ಪರಿಣಾಮಗಳು

  • ಮನಿ ಲಾಂಡರಿಂಗ್‌ ಮತ್ತು ವಂಚನೆಗಾಗಿ ಕ್ರಿಮಿನಲ್ ಮೊಕದ್ದಮೆಗಳು
  • ಸಂಭಾವ್ಯ ಜೈಲು ಶಿಕ್ಷೆ
  • ಬ್ಯಾಂಕ್ ಖಾತೆ ಮುಚ್ಚುವಿಕೆ ಮತ್ತು ಹಣಕಾಸು ಸೇವೆಗಳ ಮೇಲೆ ನಿರ್ಬಂಧಗಳು

2. ಆರ್ಥಿಕ ನಷ್ಟ

  • ವೈಯಕ್ತಿಕ ಹಣದ ನಷ್ಟ
  • ಕಾನೂನು ರಕ್ಷಣಾ ವೆಚ್ಚಗಳು
  • ಸಂಭಾವ್ಯ ದಂಡಗಳು ಮತ್ತು ಪೆನಾಲ್ಟಿಗಳು
  • ಕ್ರೆಡಿಟ್ ರೇಟಿಂಗ್‌ ಮೇಲೆ ದೀರ್ಘಾವಧಿಯ ಹಾನಿ

ಮನಿ ಮ್ಯೂಲ್ ಹಗರಣಗಳನ್ನು ತಪ್ಪಿಸುವುದು ಹೇಗೆ

  • ಆನ್‌ಲೈನ್‌ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸಿ.
  • ಬೇರೆಯವರ ಪರವಾಗಿ ಬ್ಯಾಂಕ್ ಖಾತೆ ತೆರೆಯಬೇಡಿ.
  • ನಿಮ್ಮ ಡೆಬಿಟ್ ಕಾರ್ಡ್, ಪಾಸ್‌ಬುಕ್ ಅಥವಾ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ನಿಮ್ಮ ಮೊಬೈಲ್ ಬ್ಯಾಂಕಿಂಗ್ ಪಾಸ್‌ವರ್ಡ್ ಅನ್ನು ಆಗಾಗ್ಗೆ ಬದಲಾಯಿಸಿ
  • ಅಪರಿಚಿತ ಖಾತೆಗಳಿಗೆ ಹಣವನ್ನು ವರ್ಗಾಯಿಸುವ ಉದ್ಯೋಗದ ಆಫರ್‌ಗಳು ಬಂದರೆ, ಅವುಗಳನ್ನು ಸ್ವೀಕರಿಸಬೇಡಿ.
  • ಹಣವನ್ನು ಸ್ವೀಕರಿಸಲು ಅಥವಾ ವರ್ಗಾಯಿಸಲು ಇತರರು ನಿಮ್ಮ ಖಾತೆಯನ್ನು ಬಳಸಲು ಅನುಮತಿಸಬೇಡಿ.
  • ಬೇರೆಡೆಗೆ ಒಂದು ಭಾಗವನ್ನು ವರ್ಗಾಯಿಸಬೇಕು ಎಂದು ಹೇಳುವ ಯಾವುದೇ ಇನಾಮು ಹಣವನ್ನು ಸ್ವೀಕರಿಸಬೇಡಿ. 
  • OTP ಅಥವಾ CVV, ಪಾಸ್‌ವರ್ಡ್ ಮುಂತಾದ ಲಾಗಿನ್ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ನಂಬಲಾಗದ ಆಫರ್‌ಗಳು, ಅಗ್ಗದ ಡೀಲ್‌ಗಳು ಮತ್ತು ರಿಯಾಯಿತಿಗಳ ಬಗ್ಗೆ ಎಚ್ಚರದಿಂದಿರಿ. 
  • ನಿಮ್ಮ ಖಾತೆಯ ವಹಿವಾಟುಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಯಾವುದೇ ಅಸಹಜ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಬ್ಯಾಂಕ್‌ಗಳಿಗೆ ವರದಿ ಮಾಡಿ.
  • SMS/ಇಮೇಲ್/IVR ಮೂಲಕ ಬ್ಯಾಂಕ್‌ಗಳು ಕಳುಹಿಸಿದ ಇತ್ತೀಚಿನ ಅಪ್‌ಡೇಟ್‌ಗಳನ್ನು ಅನುಸರಿಸಿ.

ಮನಿ ಮ್ಯೂಲ್ ಹಗರಣದ ಭಾಗವಾಗಿದ್ದೀರಿ ಎಂದು ನೀವು ಅನುಮಾನಿಸಿದರೆ PhonePe ನಲ್ಲಿ ಸಮಸ್ಯೆಯನ್ನು ತಿಳಿಸುವುದು ಹೇಗೆ

PhonePe ನಲ್ಲಿ ಉದ್ಯೋಗ ವಂಚಕರಿಂದ ನೀವು ಮೋಸ ಹೋಗಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ಸಮಸ್ಯೆಯನ್ನು ತಿಳಿಸಬಹುದು:

  1. PhonePe ಆ್ಯಪ್‌: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ತಿಳಿಸಿ.
  2. PhonePe ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ತಿಳಿಸಲು ನೀವು PhonePe ಗ್ರಾಹಕ ಸೇವಾ ಸಂಖ್ಯೆ 80–68727374 / 022–68727374 ಗೆ ಕರೆ ಮಾಡಬಹುದು, ನಂತರ ಗ್ರಾಹಕ ಸೇವಾ ಏಜೆಂಟ್ ನಿಮ್ಮ ಸಮಸ್ಯೆಗೆ ಟಿಕೆಟ್ ರಚಿಸಿ ಸಹಾಯ ಮಾಡುತ್ತಾರೆ.
  3. ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ವೆಬ್‌ಫಾರ್ಮ್ https://support.phonepe.com/ ಬಳಸಿಕೊಂಡು ಟಿಕೆಟ್ ರಚಿಸಬಹುದು.
  4. ಸಾಮಾಜಿಕ ಮಾಧ್ಯಮ: ನೀವು ವಂಚನೆಯ ಘಟನೆಗಳನ್ನು PhonePe ಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ವರದಿ ಮಾಡಬಹುದು.

ಟ್ವಿಟ್ಟರ್— https://twitter.com/PhonePeSupport

ಫೇಸ್‌ಬುಕ್— https://www.facebook.com/OfficialPhonePe

5. ದೂರು: ಅಸ್ತಿತ್ವದಲ್ಲಿರುವ ದೂರಿನ ಕುರಿತು ಹೆಚ್ಚಿನ ಮಾಹಿತಿ ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಆಗಬಹುದು ಮತ್ತು ಈ ಹಿಂದೆ ಸಲ್ಲಿಸಲಾದ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.

6. ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು 1930 ಮೂಲಕ ಸಂಪರ್ಕಿಸಬಹುದು.

7. DOT: ಡಿಜಿಟಲ್ ಅಪರಾಧ ಸಂಭವಿಸಿಲ್ಲದಿದ್ದರೆ, ಆದರೆ ನಿಮಗೆ ಅದರ ಕುರಿತು ಅನುಮಾನವಿದ್ದರೆ, ಅದನ್ನು ತಪ್ಪದೇ ವರದಿ ಮಾಡಿ. ದೂರಸಂಪರ್ಕ ಇಲಾಖೆಯು ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ (sancharsaathi.gov.in) ಚಕ್ಷು ಸೌಲಭ್ಯವನ್ನು ಪ್ರಾರಂಭಿಸಿದೆ. ಅಲ್ಲಿ ಅನುಮಾನಾಸ್ಪದ ಸಂದೇಶಗಳು, ಕರೆಗಳು ಮತ್ತು ಮೋಸದ WhatsApp ಖಾತೆಗಳನ್ನು ವರದಿ ಮಾಡಬಹುದು.

ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಂದಿರದ, PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading