Trust & Safety
ಥರ್ಡ್-ಪಾರ್ಟಿ ಆ್ಯಪ್‌ಗಳ ಮೂಲಕ ಮಾಡಲಾಗುವ ಪಾವತಿ ವಂಚನೆಗಳ ಬಗ್ಗೆ ಎಚ್ಚರವಹಿಸಿ
PhonePe Regional|2 min read|22 April, 2021
ನಾವು ನಿರಂತರವಾಗಿ, ವಂಚಕರು ಸಾಮಾನ್ಯ ಜನರಿಂದ ಅವರ ಬ್ಯಾಂಕ್ ಖಾತೆ ಸಂಖ್ಯೆಗಳು, ಕ್ರೆಡಿಟ್ / ಡೆಬಿಟ್ ಕಾರ್ಡ್ ವಿವರಗಳು, UPI ಪಿನ್ ಅಥವಾ OTP ಮುಂತಾದ ವೈಯಕ್ತಿಕ ವಿವರಗಳನ್ನು ಪಡೆದು, ನಂತರ ಅವರ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡ ಬಗ್ಗೆ ಅಸಂಖ್ಯಾತ ಲೇಖನಗಳು ಮತ್ತು ಸಂಗತಿಗಳನ್ನು ಓದುತ್ತಿರುತ್ತೇವೆ.
ಮೇಲೆ ತಿಳಿಸಿದಂತಹ ವೈಯಕ್ತಿಕ ವಿವರಗಳನ್ನು ವಂಚನೆ ಮಾಡುವವರಿಗೆ ನೀಡದಿದ್ದರೂ ಕೂಡಾ ಅವರಿಗೆ ವಂಚನೆ ಮಾಡಲು ಇನ್ನೂ ಇತರ ಮಾರ್ಗಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಥರ್ಡ್-ಪಾರ್ಟಿ ಆ್ಯಪ್‌ಗಳ ಮೂಲಕವೂ ಅವರು ನಿಮಗೆ ವಂಚನೆ ಮಾಡಬಹುದು!
ಥರ್ಡ್-ಪಾರ್ಟಿ ಆ್ಯಪ್‌ಗಳು ಎಂದರೇನು ಮತ್ತು ಅವುಗಳನ್ನು ವಂಚಕರು ಹೇಗ್ ಬಳಸುತ್ತಾರೆ?
ಪ್ರಸ್ತುತ, Anydesk, TeamViewer ಅಥವಾ Screenshare ಮುಂತಾದ ನೂರಾರು ಉಚಿತ ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳು ಬಳಕೆಯಲ್ಲಿವೆ. ಮೂಲತಃ ಎಂಜಿನಿಯರ್‌ಗಳು ಫೋನ್‌ನಲ್ಲಿರುವ ಸಮಸ್ಯೆಗಳನ್ನು ದೂರ ಸ್ಥಳದಿಂದ ಬಗೆಹರಿಸಲು ಈ ಆ್ಯಪ್‌ಗಳನ್ನು ಬಳಸುತ್ತಿದ್ದರು. ಈ ಆ್ಯಪ್‌ಗಳ ಮೂಲಕ ಯಾರು ಬೇಕಾದರೂ ದೂರದಿಂದಲೇ ಬಳಕೆದಾರರ ಫೋನ್‌ಗೆ ಪೂರ್ಣ ಪ್ರವೇಶ ಮತ್ತು ನಿಯಂತ್ರಣವನ್ನು ಹೊಂದಬಹುದಾಗಿದೆ.
ವಂಚಕರು ಇಂತಹ ಥರ್ಡ್-ಪಾರ್ಟಿ ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳನ್ನು ಬಳಸಿ ದುರುದ್ದೇಶಕ್ಕಾಗಿ ನಿಮ್ಮ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ!
ನೆನಪಿಡಿ: ಯಾವುದೇ ಥರ್ಡ್-ಪಾರ್ಟಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು PhonePe ನಿಮ್ಮನ್ನು ಎಂದಿಗೂ ಕೇಳುವುದಿಲ್ಲ. ಯಾರೊಬ್ಬರ ಕೋರಿಕೆಯ ಮೇರೆಗೂ ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ. ವಂಚಕರು ತಾವಿರುವ ಜಾಗದಿಂದಲೇ ನಿಮ್ಮ ಫೋನ್ ಅನ್ನು ನಿಯಂತ್ರಿಸಲು ಮತ್ತು ನಿಮ್ಮ ಸೇವ್ ಮಾಡಿದ ಕಾರ್ಡ್ / ಖಾತೆ ವಿವರಗಳನ್ನು ವೀಕ್ಷಿಸಲು, Anydesk / TeamViewer ಮುಂತಾದ ಆ್ಯಪ್‌ಗಳನ್ನು ಬಳಸಿಕೊಳ್ಳುತ್ತಾರೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ಅದನ್ನು support.phonepe.com ಮೂಲಕ ವರದಿ ಮಾಡಿ.
ಥರ್ಡ್-ಪಾರ್ಟಿ ಆ್ಯಪ್‌ಗಳ ಮೂಲಕ ಈ ಕೆಳಗಿನಂತೆ ವಂಚನೆ ನಡೆಯುತ್ತದೆ:
- ವಂಚಕರು ಬಳಕೆದಾರರನ್ನು ಸಂಪರ್ಕಿಸುತ್ತಾರೆ ಮತ್ತು PhonePe ಆ್ಯಪ್‌ನಲ್ಲಿ ಅಥವಾ PhonePe ವಹಿವಾಟಿನಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ನಟಿಸುತ್ತಾರೆ.
- ಅವರು ಸಮಸ್ಯೆಯನ್ನು ತಕ್ಷಣ ಪರಿಹರಿಸಲು Anydesk, TeamViewer ಅಥವಾ Screenshare ಮುಂತಾದ ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ತಿಳಿಸುತ್ತಾರೆ.
- ಈ ಸಮಯದಲ್ಲಿ, ವಂಚಕರು ಬಳಕೆದಾರರಿಗೆ ತಮ್ಮ ಕಾರ್ಡ್, ಬ್ಯಾಂಕ್ ವಿವರಗಳು, UPI PIN ಅಥವಾ OTP ಹಂಚಿಕೊಳ್ಳಲು ಕೇಳುವುದಿಲ್ಲ. ಅದರ ಬದಲು, PhonePe ಪರಿಶೀಲನಾ ವ್ಯವಸ್ಥೆಯು ಕಾರ್ಡ್ ವಿವರಗಳನ್ನು ಸ್ಕ್ಯಾನ್ ಮಾಡುವುದಕ್ಕಾಗಿ ತಮ್ಮ ಡೆಬಿಟ್ / ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಫೋನ್‌ನ ಕ್ಯಾಮೆರಾದ ಮುಂದೆ ಹಿಡಿಯಬೇಕೆಂದು ಹೇಳುತ್ತಾರೆ.
- ಈ ಸಮಯದಲ್ಲಿ ಅವರು ತಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಬಳಕೆದಾರರು ಭಾವಿಸುತ್ತಾರೆ, ಆದರೆ ವಂಚಕರು ಬಳಕೆದಾರರ ಕಾರ್ಡ್ ಸಂಖ್ಯೆ, CVV ಕೋಡ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ ಮತ್ತು SMS ಮೂಲಕ ಬಳಕೆದಾರರ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು OTP ಕೂಡಾ ಕಳಿಸುತ್ತಾರೆ.
- ನೆನಪಿಡಿ, ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳು ಬೇರೆಯವರಿಗೆ ನಿಮ್ಮ ಫೋನ್‌ಗೆ ಪ್ರವೇಶ ಹೊಂದಲು ಅನುಮತಿ ನೀಡುತ್ತವೆ. ವಂಚಕರು ಬಳಕೆದಾರರ ಫೋನ್‌ಗೆ ಕಳಿಸಲಾದ OTP ಯನ್ನು ವೀಕ್ಷಿಸುತ್ತಾರೆ ಮತ್ತು ಅದನ್ನು ತಮ್ಮ ಸ್ವಂತ ಖಾತೆಗೆ ಹಣ ವರ್ಗಾಯಿಸಿಕೊಳ್ಳಲು ಬಳಸುತ್ತಾರೆ.
ಸುರಕ್ಷಿತವಾಗಿರಿ ಮತ್ತು ಪಾವತಿ ವಂಚನೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ.
PhonePe ಎಂದಿಗೂ ಯಾವುದೇ ಗ್ರಾಹಕರಿಗೆ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. PhonePe ಪ್ರತಿನಿಧಿಯಾಗಿ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಜೊತೆಗೆ, @phonepe.com ಡೊಮೇನ್‌ನ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.
Google, Twitter, FB ಇತ್ಯಾದಿಗಳಲ್ಲಿ PhonePe ಗ್ರಾಹಕ ಸಹಾಯವಾಣಿಯ ಸಂಖ್ಯೆಗಳಿಗಾಗಿ ಯಾವತ್ತೂ ಹುಡುಕಬೇಡಿ. PhonePe ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸುವ ಏಕೈಕ ಅಧಿಕೃತ ಮಾರ್ಗವೆಂದರೆ support.phonepe.com ಮೂಲಕ ಸಂಪರ್ಕಿಸುವುದು. PhonePe ಬೆಂಬಲ ಎಂದು ಹೇಳಿಕೊಳ್ಳುವ ದೃಢೀಕರಿಸದ ಮೊಬೈಲ್ ಸಂಖ್ಯೆಗಳಿಗೆ ಎಂದಿಗೂ ಕರೆ ಮಾಡಬೇಡಿ / ಅಥವಾ ಕರೆಗಳಿಗೆ ಪ್ರತಿಕ್ರಿಯಿಸಬೇಡಿ