Life @ PhonePe
PhonePe ನಲ್ಲಿ ಕಂಪೆನ್ಸೇಶನ್ ಫಿಲಾಸಫಿ
PhonePe Regional|2 min read|28 April, 2021
ಜನವರಿ 2021 ರಲ್ಲಿ, PhonePe ಸ್ಟಾಕ್ ಆಪ್ಷನ್ ಪ್ಲಾನ್ ಅನ್ನು ಆರಂಭಿಸಲಾಗಿದ್ದು, ಈ ಮೂಲಕ ಪ್ರತಿಯೊಬ್ಬ PhonePe ಉದ್ಯೋಗಿಯು ಕಂಪನಿಯ ಒಂದಷ್ಟು ಭಾಗದ ಒಡೆತನ ಹೊಂದುವ ಅವಕಾಶವನ್ನು ಕಲ್ಪಿಸಲಾಗಿದೆ. PhonePe ನ ಎಲ್ಲಾ 2200 ಉದ್ಯೋಗಿಗಳಿಗೆ USD 200 ಮಿಲಿಯನ್ ಸ್ಟಾಕ್ ಆಪ್ಷನ್ ಅನ್ನು ಒದಗಿಸಲಾಗಿದ್ದು, ಈ ಮೂಲಕ ಸಂಸ್ಥೆಯ ಯಶಸ್ಸಿನ ಲಾಭವನ್ನು ಸಂಸ್ಥೆಯಲ್ಲಿರುವ ಎಲ್ಲರೂ ಪಡೆಯುವಂತೆ ಮಾಡಲಾಗಿದೆ.
PhonePe ಸ್ಟಾಕ್ ಆಪ್ಷನ್ ಪ್ಲಾನ್ ಎಂಬುದು ನಮ್ಮ ಕಂಪೆನ್ಸೇಶನ್ ಫಿಲಾಸಫಿಯ ಮೂಲ ಧ್ಯೇಯವಾಗಿದ್ದು, ಈ ಮೂಲಕ ಸಹಯೋಗ, ದೀರ್ಘಾವಧಿಯ ದೃಷ್ಟಿ ಮತ್ತು ಸಂಸ್ಥೆಯೇ ಮೊದಲ ಆದ್ಯತೆ ಎಂಬ ವಿಚಾರವನ್ನು ಬಲಪಡಿಸಲು ರೂಪಿಸಲಾಗಿದೆ. ತಂತ್ರಜ್ಞಾನವನ್ನು ಬದಲಾವಣೆಯ ಶಕ್ತಿಯಾಗಿ ಬಳಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಪ್ರತಿಯೊಬ್ಬ ಭಾರತೀಯನಿಗೆ ಹಣಕಾಸು ಸೇರ್ಪಡೆಯನ್ನು ನಿಜವಾಗಿಸುವ ಗುರಿಯನ್ನು ಹೊಂದಲಾಗಿದೆ. ಯಾವಾಗ ಹಣ ಮತ್ತು ಸೇವೆಯು ಮುಕ್ತವಾಗಿ ಹರಿದಾಡುತ್ತದೆಯೋ ಎಲ್ಲರೂ ಪ್ರಗತಿ ಹೊಂದುತ್ತಾರೆ ಎಂಬುದು ನಮ್ಮ ನಂಬಿಕೆಯಾಗಿದೆ. ಈ ಸೇರ್ಪಡೆಯನ್ನು ಸಬಲಗೊಳಿಸುವ ಇನ್ನೊಂದು ಮೌಲ್ಯವೇ ಪಾಸಿಟಿವ್ ಡಿಸ್ರಪ್ಶನ್ — ಈ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸುವುದು, ಎಲ್ಲರಿಗೂ ಅವಕಾಶಗಳನ್ನು ದೊರೆಯುವಂತೆ ಮಾಡುವುದು, ಯಶಸ್ಸಿನ ಧನಾತ್ಮಕ ಮಾಧ್ಯಮವನ್ನು ಎಲ್ಲರಿಗೂ ರಚಿಸಲಾಗುತ್ತದೆ. ಈ ಧ್ಯೇಯವೇ ನಮ್ಮನ್ನು ಆಂತರಿಕವಾಗಿ ಮುನ್ನಡೆಸುತ್ತದೆ.
ಸೇರ್ಪಡೆ ಮತ್ತು ಸಮೃದ್ಧತೆಯ ಮನಸ್ಥಿತಿಯ ಆಧಾರದ ಮೇಲೆ ಆಂತರಿಕ ಸಂಸ್ಕೃತಿಯನ್ನು ನಿರ್ಮಿಸಲು ನಾವು ಕಟಿಬದ್ಧರಾಗಿದ್ದೇವೆ, ಈ ಮೂಲಕ ಇಲ್ಲಿ ಪ್ರತಿ ಸಂವಹನವನ್ನು ಸಕಾರಾತ್ಮಕವಾಗಿಸುತ್ತೇವೆ. ಕಂಪನಿಯಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯ ಯಶಸ್ಸಿನ ಮೇಲೆ ಸಂಸ್ಥೆಯ ಯಶಸ್ಸು ನಿಂತಿದೆ. ಉದ್ಯೋಗಿಗಳು ಬೆಳೆದು ಹೆಚ್ಚಿನ ಪ್ರಭಾವವನ್ನು ಬೀರಿದಂತೆ, ಸಂಸ್ಥೆಯೂ ಹೆಚ್ಚಿನ ಮೌಲ್ಯವನ್ನು ಪಡೆಯುತ್ತದೆ. ಸಂಸ್ಥೆಯು ಹೆಚ್ಚೆಚ್ಚು ಮೌಲ್ಯವನ್ನು ರಚಿಸುವುದರಿಂದ, ಪ್ರತಿ ಉದ್ಯೋಗಿಗೆ ಹೆಚ್ಚಿನ ಪ್ರಯೋಜನಗಳು ದೊರೆಯುವಂತಾಗುತ್ತವೆ. ಆಂತರಿಕ ಸ್ಪರ್ಧೆಯನ್ನು ತೆಗೆದುಹಾಕುವುದಷ್ಟೇ ಅಲ್ಲದೆ, ಇನ್ನೂ ಹೆಚ್ಚಿನ ಆಗತ್ಯ ಧ್ಯೇಯಗಳನ್ನು ಹೊಂದಲಾಗಿದೆ.
ಬಹುತೇಕ ಹುದ್ದೆಗಳಿಗೆ ಅವರ ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವೇರಿಯಬಲ್ ಪೇಯನ್ನು ನೀಡುವ ಪದ್ಧತಿಗೆ ನಮ್ಮ ಕಂಪೆನ್ಸೇಶನ್ ವ್ಯವಸ್ಥೆಯು ಹೊಂದಿಕೆಯಾಗುತ್ತದೆ. ಬದಲಾಗಿ, ಪ್ರತಿಯೊಬ್ಬರೂ ದೀರ್ಘಕಾಲೀನ ಸಾಂಸ್ಥಿಕ ಬೆಳವಣಿಗೆಗಾಗಿ ಹೂಡಿಕೆ ಮಾಡಲು ಪ್ರೋತ್ಸಾಹದ ರೂಪದಲ್ಲಿ ನಾವು ESOP ಗಳನ್ನು ಬಳಸುತ್ತೇವೆ. ಎಲ್ಲಾ ಹಂತಗಳಿಗೂ ಕನಿಷ್ಠ 5000 ಡಾಲರ್ಗಳಷ್ಟು ESOP ಗಳನ್ನು ಹೊಂದುವ ಮೂಲಕ, ನಮ್ಮ ಸಂಸ್ಥೆಯಲ್ಲಿನ ಎಲ್ಲಾ ಉದ್ಯೋಗಳಿಗೆ “- ಮಾಡುತ್ತಾ ಹೋಗಿ, ಬೆಳೆಯುತ್ತಾ ಹೋಗಿ” ಎಂಬ ಧ್ಯೇಯದಂತೆ ತಾವು ದುಡಿದು ರಚಿಸಿರುವ ಸಂಪತ್ತು ನಿರ್ಮಾಣದ ಅವಕಾಶದಲ್ಲಿ ಭಾಗವಹಿಸಲು ಸಮರ್ಥಗೊಳಿಸುತ್ತೇವೆ. ಉದ್ಯೋಗಿಗಳು ಮೇಲಿನ ಹುದ್ದೆಗಳಿಗೆ ಪ್ರಗತಿಯಾದಂತೆ, ESOP ಗಳು ನೌಕರರಿಗೆ ವಾರ್ಷಿಕ ಕಂಪೆನ್ಸೇಶನ್ ಭಾಗವಾಗಿ, ಸಂಸ್ಥೆಯ ಯಶಸ್ಸಿನ ಭಾಗವನ್ನು ಅವರಿಗೂ ನೀಡಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲರೂ ಸಂಸ್ಥೆಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸುವಂತಾಗುತ್ತದೆ. ಸಂಸ್ಥೆಯ ಯಶಸ್ಸೇ ಅವರ ಯಶಸ್ಸು.
ನಮ್ಮ ಜನರಿಗೆ ನಮ್ಮ ಮೌಲ್ಯದ ಪ್ರಸ್ತಾಪವು ಅವರನ್ನು ಕಲಿಯಲು, ಬೆಳೆಯಲು ಮತ್ತು ಪ್ರಭಾವಿಸುವ ಅವಕಾಶವನ್ನು ಒದಗಿಸುತ್ತದೆ. ಜನರು ತಮ್ಮ ಸಾಮರ್ಥ್ಯದ ಬಗ್ಗೆ ಆಸಕ್ತಿ ಹೊಂದಿರುವಂತಹ ಮತ್ತು ಈ ಸಮಯದ ಕೆಲವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಪಾಲುದಾರರಾಗುವಂತಹ ಸ್ಮಾರ್ಟ್ ಜನರೊಂದಿಗೆ ನಿಕಟವಾಗಿ ಕೆಲಸ ಮಾಡುವ ಅವಕಾಶವನ್ನು ನಾವು ನೀಡುತ್ತೇವೆ. ನಾವು ಅನೌಪಚಾರಿಕ ವಾತಾವರಣವನ್ನು, ಪಾರದರ್ಶಕತೆ ಮತ್ತು ಸಮಾನ ಸಂಘಟನೆಯ ರಚನೆಯನ್ನು ಒದಗಿಸುತ್ತೇವೆ, ಅದು ಎಲ್ಲರಿಗೂ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಮತ್ತು ಕಲಿಕೆಯ ಕಡೆಗೆ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಸ್ಟಾಕ್ ಆಪ್ಷನ್ ಪ್ಲಾನ್ ಮೂಲಕ ಸಂಪತ್ತನ್ನು ಸೃಷ್ಟಿಸಲು ಮತ್ತು PhonePe ನ ಬೆಳವಣಿಗೆಯಲ್ಲಿ ಭಾಗವಾಗಲು ಸಹ ಅವಕಾಶವಿದೆ ಎಂದು ಈ ಮೂಲಕ ಖಚಿತಪಡಿಸಲಾಗುತ್ತದೆ!
ಇವರಿಂದ — ಮನ್ಮೀತ್ ಸಂಧು, ಎಚ್.ಆರ್ ಮುಖ್ಯಸ್ಥರು