PhonePe Blogs Main Featured Image

Investments

ನಿಮ್ಮ ಹೂಡಿಕೆಯ ಪ್ರಯಾಣ ಮತ್ತು ಅಜಯ್‌, ಶೇರು ಹಾಗೂ ಬಬ್ಬರ್‌ನ ಕತೆ

PhonePe Regional|2 min read|05 July, 2021

URL copied to clipboard

ನಿಮ್ಮ ಹೂಡಿಕೆಯ ಪ್ರಯಾಣ ಮತ್ತು ಅಜಯ್‌, ಶೇರು ಹಾಗೂ ಬಬ್ಬರ್‌ನ ಕತೆ

ಅಜಯ್‌, ಶೇರು ಮತ್ತು ಬಬ್ಬರ್‌ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಕಾಕತಾಳೀಯ ಎಂದರೆ ಈ ಮೂವರಿಗೂ ಪದವಿ ಮುಗಿಸಿದ ಬಳಿಕ ಒಂದೇ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಅವರು ಒಂದೇ ಸಮಯದಲ್ಲಿ, ಒಂದೇ ತರಹದ ಹುದ್ದೆಗೆ ಸೇರಿದ್ದರಿಂದ, ಸಂಬಳವೂ ಸಮಾನವಾಗಿತ್ತು.

ಆಫೀಸಿನಲ್ಲಿ ಮೊದಲ ವಾರ ನಡೆದ ಹಣಕಾಸು ಯೋಜನಾ ಕಾರ್ಯಾಗಾರದಲ್ಲಿ ಈ ಮೂವರೂ ಪಾಲ್ಗೊಂಡರು. ಅಲ್ಲಿ ಹಣಕಾಸು ಸಲಹೆಗಾರರು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಬಗ್ಗೆ, ಕಾಲಾನಂತರದಲ್ಲಿ ಹೇಗೆ ಶ್ರೀಮಂತರಾಗುವುದು, ಚಕ್ರಬಡ್ಡಿಗಿರುವ ಶಕ್ತಿ ಮತ್ತು ಇನ್ನೂ ಕೆಲವು ಪರಿಕಲ್ಪನೆಗಳನ್ನು ಪರಿಚಯಿಸಿದರು.

ಬೇಗ ಆರಂಭಿಸಿ ಮತ್ತು ಸರಿಯಾದ್ದನ್ನು ಆರಂಭಿಸಿ

ಕಾರ್ಯಾಗಾರದಲ್ಲಿ ವಿವರಿಸಿದ ಎಲ್ಲಾ ಪರಿಕಲ್ಪನೆಗಳನ್ನು ಶೇರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದರೆ, ಒಂದಂತೂ ಸ್ಪಷ್ಟವಾಗಿ ಅರ್ಥ ಮಾಡಿಕೊಂಡನು. ಅದೇನೆಂದರೆ ಸಣ್ಣ ವಯಸ್ಸಿನಲ್ಲೇ ಹೂಡಿಕೆ ಪ್ರಾರಂಭಿಸುವುದರಿಂದ ದೀರ್ಘಾವಧಿಯಲ್ಲಿ ಶ್ರೀಮಂತನಾಗಲು ಬಹಳ ವರ್ಷ ಹೂಡಿಕೆ ಮಾಡಬಹುದು ಎಂಬುದು. ಆದ್ದರಿಂದ, ಪ್ರತಿ ತಿಂಗಳು ಒಂದು ಸಣ್ಣ ಮೊತ್ತವಾಗಿದ್ದರೂ ಸಹ, ಅವನು ಅಥವಾ ಅವಳು ಸಾಧ್ಯವಾದಷ್ಟು ಬೇಗ ಹೂಡಿಕೆ ಮಾಡಲು ಪ್ರಾರಂಭಿಸಬೇಕು ಎಂಬುದು ತಿಳಿಯಿತು. ಆದ್ದರಿಂದ ಶೇರು ತಕ್ಷಣ ರೂ.10,000 ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ, ಪ್ರತಿ ತಿಂಗಳು ಅದೇ ಮೊತ್ತವನ್ನು ಎಸ್‌ಐಪಿ ಮೂಲಕ ಹೂಡಿಕೆ ಮಾಡುವುದನ್ನು ಪ್ರಾರಂಭಿಸಿದ.

ಅಜಯ್‌ ಗೆ ಸ್ಪಲ್ಪ ಸಂಶಯ ಇದ್ದಿದ್ದರಿಂದ ತಕ್ಷಣವೇ ಹೂಡಿಕೆ ಆರಂಭಿಸಿಲ್ಲ ಮತ್ತು ನಂತರ ಪ್ರಾರಂಭಿಸೋಣ ಎಂದು ಯೋಚಿಸಿದ. ಆದರೆ ಸರಿಯಾಗಿ ಒಂದು ವರ್ಷದ ಬಳಿಕ ಎಸ್ಐಪಿ ಮೂಲಕ ಉಳಿತಾಯ ಮಾಡುವುದು ಸುಲಭ ಮತ್ತು ಅದು ಹಣವನ್ನು ಕೂಡಿಡಲು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಶೇರು ಅಜಯ್‌ಗೆ ವಿವರಿಸಿದ. ಇದನ್ನು ತನ್ನ ಸ್ನೇಹಿತ ಶೇರುವಿನಿಂದ ಕೇಳಿ ಅಜಯ್‌ ಕೂಡಾ ತಾನು ಕೆಲಸಕ್ಕೆ ಸೇರಿ ಸರಿಯಾಗಿ ಒಂದು ವರ್ಷದ ಬಳಿಕ ರೂ.10,000 ಅನ್ನು ಅದೇ ಫಂಡ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ.

ಮತ್ತೊಂದೆಡೆ ಬಬ್ಬರ್‌ ತಾನು ಚಾಣಾಕ್ಷ ಮತ್ತು ಬುದ್ಧಿವಂತ ಎಂದು ಭಾವಿಸಿದ್ದ. ಬಬ್ಬರ್‌ ಆಗಾಗ ಪಾರ್ಟಿಗಳನ್ನು ಎಂಜಾಯ್‌ ಮಾಡಲು ನಿರ್ಧರಿಸಿದ ಮತ್ತು ಸಾಕಷ್ಟು ಹಣವನ್ನು ಖರ್ಚು ಮಾಡಿದ. ಗ್ಯಾಜೆಟ್‌ಗಳ ಬಗ್ಗೆಯೂ ಒಲವು ಹೊಂದಿದ್ದರಿಂದ, ಸ್ವತಃ ಉತ್ತಮವಾದ ಗ್ಯಾಜೆಟ್‌ಗಳನ್ನು ಖರೀದಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದ. ಇದರರ್ಥ ಹೂಡಿಕೆ ಮಾಡಲು ಸ್ವಲ್ಪ ಹಣ ಮಾತ್ರ ಉಳಿದಿತ್ತು.

ಆದರೆ ಅಂತಹ ಜೀವನಶೈಲಿಯ 5 ವರ್ಷಗಳ ನಂತರ ಮತ್ತು ಬಹುತೇಕ ಹೂಡಿಕೆಗಳಿಲ್ಲದ ನಂತರ, ಬಬ್ಬರ್ ತನ್ನ ತಪ್ಪನ್ನು ಅರಿತುಕೊಂಡು ಶೇರು ಮತ್ತು ಅಜಯ್‌ ಅವರನ್ನು ಅನುಸರಿಸಿ ತಾನೂ ಕೂಡಾ ರೂ.10,000 ಅನ್ನು ಅದೇ ಇಕ್ವಿಟಿ ಫಂಡ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ.

ಹೂಡಿಕೆಗಳು ಕಾಲಾಂತರದಲ್ಲಿ ಬೆಳೆಯುತ್ತದೆ

ಸಮಯ ಕಳೆದಂತೆ, ಈ ಮೂವರು ತಮ್ಮ ಈಕ್ವಿಟಿ ಫಂಡ್‌ನಲ್ಲಿ ಎಸ್‌ಐಪಿ ಹೂಡಿಕೆ ಬೆಳೆಯುವುದನ್ನು ನೋಡುತ್ತಲೇ ಇದ್ದರು. ಪದವಿ ಪಡೆದು 20 ವರ್ಷಗಳ ನಂತರ ಕಾಲೇಜು ಪುನರ್ಮಿಲನ ಕಾರ್ಯಕ್ರಮಕ್ಕೆ ಹಾಜರಾಗಿದ್ದಾಗ (ಅವರು ತಮ್ಮ ವೃತ್ತಿ ಜೀವನದ 20 ವರ್ಷಗಳನ್ನು ಸಹ ಪೂರೈಸಿದ್ದರು), ಅವರು ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ತಮ್ಮ ಎಸ್‌ಐಪಿ ಹೂಡಿಕೆಯ ಬಗ್ಗೆ ಚರ್ಚಿಸಲು ಪ್ರಾರಂಭಿಸಿದರು ಮತ್ತು ತಮ್ಮ ಹೂಡಿಕೆಯ ಮೌಲ್ಯವನ್ನು ಹೋಲಿಸಲು ನಿರ್ಧರಿಸಿದರು.

ಅವರ ಹೂಡಿಕೆಯ ಮೌಲ್ಯವು ಹೇಗೆ ಬೆಳೆದವು ಎಂಬುದನ್ನು ಇಲ್ಲಿ ನೋಡೋಣ:

ಶೇರು ಅಚ್ಚುಕಟ್ಟಾಗಿ ರೂ .1.04 ಕೋಟಿ ಸಂಪತ್ತು ಗಳಿಸಿದ್ದರೆ, ಅಜಯ್‌ ರೂ. 1 ಕೋಟಿ ತಲುಪಿರಲಿಲ್ಲ. ಆದರೂ ರೂ. 91 ಲಕ್ಷ ಗಳಿಸಿದ್ದ ಮತ್ತು ಶೇರು ಅವರೊಂದಿಗಿನ ಸಮಯೋಚಿತ ಚರ್ಚೆಗೆ ಧನ್ಯವಾದಗಳು, ಏಕೆಂದರೆ ಆ ಚರ್ಚೆಯು ಅಜಯ್‌ ಎಸ್‌ಐಪಿ ಪ್ರಾರಂಭಿಸಲು ಕಾರಣವಾಯಿತು. ಮತ್ತೊಂದೆಡೆ ಬಬ್ಬರ್, ಕೇವಲ ರೂ. 52 ಲಕ್ಷ ಮಾತ್ರ ಗಳಿಸಿದ್ದ. ಅಂದರೆ ಅದು ಶೇರು ಸಾಧಿಸಿದ ಅರ್ಧದಷ್ಟು. ಶೇರು ಮತ್ತು ಅಜಯ್‌ಗೆ ಹೋಲಿಸಿದರೆ ಬಬ್ಬರ್ ತಾನು ತುಂಬಾ ಬಡವ ಎಂಬ ಭಾವನೆ ಹೊಂದಿದ್ದರು.

ಕಥೆಯಿಂದ ಪ್ರಮುಖ ಕಲಿಕೆ ಏನೆಂದರೆ: ಸಾಧ್ಯವಾದಷ್ಟು ಬೇಗ ನಿಯಮಿತ ಹೂಡಿಕೆಯನ್ನು ಪ್ರಾರಂಭಿಸಿ. ನೀವು ಇನ್ನೂ ಪ್ರಾರಂಭಿಸದಿದ್ದರೆ, ಈಗಲೇ ಮಾಡಿ. ಇಲ್ಲದಿದ್ದರೆ, ನೀವು ಬಬ್ಬರ್‌ನಂತೆಯೇ ಕಡಿಮೆ ಹಣ ಗಳಿಸಬೇಕಾಗುತ್ತದೆ.

ಡಿಸ್ಕೈಮರ್:

ನಿಫ್ಟಿ 50 ಟಿಆರ್ ಸೂಚ್ಯಂಕದಲ್ಲಿ ಎಸ್‌ಐಪಿ 2001 ರ ಜನವರಿಯಲ್ಲಿ ಪ್ರಾರಂಭವಾಗಿ ಮತ್ತು ಡಿಸೆಂಬರ್ 2020 ರವರೆಗೆ ಮುಂದುವರೆದು 14.64% ನಷ್ಟು ವಾರ್ಷಿಕ ಆದಾಯವನ್ನು (ಎಕ್ಸ್‌ಐಆರ್ಆರ್) ಪಡೆಯಬಹುದಿತ್ತು. ಆದಾಗ್ಯೂ, ಮೇಲಿನ ದತ್ತಾಂಶದಲ್ಲಿ ಪ್ರಕಾರ ನಾವು ವರ್ಷಕ್ಕೆ 13% ಮಾತ್ರ ಪಡೆದೆವು. ಡೇಟಾ ಮೂಲ: ICRA ಅನಾಲಿಟಿಕ್ಸ್. ಹಿಂದಿನ ಕಾರ್ಯಕ್ಷಮತೆಯನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮ್ಯುಚ್ಯುವಲ್‌ ಫಂಡ್‌ಗಳು ಮಾರುಕಟ್ಟೆಯ ರಿಸ್ಕ್‌ ಆಗಿದೆ. ಹೂಡಿಕೆ ಮಾಡುವ ಮೊದಲು ಯೋಜನೆಯ ಮಾಹಿತಿ ದಾಖಲೆಯನ್ನು ದಯವಿಟ್ಟು ಗಮನದಿಂದ ಓದಿ.

Keep Reading