Investments
ನಿಮ್ಮ ಹೂಡಿಕೆಯನ್ನು ಅರ್ಥ ಮಾಡಿಕೊಳ್ಳಿ: ಇದು 20–20, ಏಕದಿನ ಪಂದ್ಯ ಅಥವಾ ಟೆಸ್ಟ್?
PhonePe Regional|1 min read|21 June, 2021
ನೀವು ಕ್ರಿಕೆಟ್ ಪ್ರೇಮಿಯಾಗಿದ್ದರೆ, ವಿವಿಧ ರೀತಿಯ ಕ್ರಿಕೆಟ್ ಪಂದ್ಯಗಳಿಗೆ ವಿಭಿನ್ನ ಆಟದ ತಂತ್ರ ಇರಬೇಕು ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ. ನಿಮ್ಮ ಹೂಡಿಕೆ ತಂತ್ರದಲ್ಲೂ ಇದೇ ರೀತಿಯ ವಿಧಾನವನ್ನು ಅನುಸರಿಸಬೇಕಾಗಿದೆ.
ನೀವು ನಿಮ್ಮ ತಂಡದ ನಾಯಕ ಎಂದಿಟ್ಟುಕೊಳ್ಳಿ, ನೀವು ಟಾಸ್ ಗೆಲ್ಲುವ ಮೂಲಕ ಮ್ಯಾಚ್ ಆರಂಭಿಸುತ್ತೀರಿ ಮತ್ತು ಬ್ಯಾಟಿಂಗ್ ಅನ್ನು ಮೊದಲು ಮಾಡಲು ನಿರ್ಧರಿಸುತ್ತೀರಿ. ನೀವು ಆಟವಾಡುವ ಪ್ರತೀ ವಿಧದ ಮ್ಯಾಚ್‌ಗೂ, ಇತರರಿಗಿಂತ ಮುಖ್ಯವಾದ ಕೆಲವು ಅಂಶಗಳಿವೆ.
ಇಲ್ಲಿ ಸ್ನಾಪ್‌ಶಾಟ್ ಇದೆ,
ನೀವು ಆಡುತ್ತಿರುವ ಪಂದ್ಯದ ಪ್ರಕಾರವನ್ನು ಅವಲಂಬಿಸಿ ನಿಮ್ಮ ಬ್ಯಾಟಿಂಗ್ ತಂತ್ರವನ್ನು ನೀವು ಮಾಪನಾಂಕ ಮಾಡುತ್ತೀರಿ. 20–20 ಪಂದ್ಯಕ್ಕೆ ಬ್ಯಾಟಿಂಗ್ ಮಾಡುವಾಗ, ವಿಕೆಟ್ ಕಳೆದುಕೊಳ್ಳುವ ಬಗ್ಗೆ ಚಿಂತಿಸದೆ ಹೆಚ್ಚಿನ ರನ್ ದರವನ್ನು ಸಾಧಿಸುವುದು ನಿಮ್ಮ ಆದ್ಯತೆಯಾಗಿದೆ. ಆದರೆ ಏಕದಿನ ಪಂದ್ಯದ ಸಮಯದಲ್ಲಿ, ನೀವು ರನ್ ದರ ಮತ್ತು ವಿಕೆಟ್‌ಗಳ ನಡುವೆ ಬ್ಯಾಲೆನ್ಸ್ ಮಾಡಲು ಬಯಸುತ್ತೀರಿ, ಮತ್ತು ಟೆಸ್ಟ್ ಪಂದ್ಯದ ಸಮಯದಲ್ಲಿ ನೀವು ವಿಕೆಟ್‌ಗಳನ್ನು ಕಾಪಾಡುವತ್ತ ಹೆಚ್ಚು ಗಮನ ಹರಿಸುತ್ತೀರಿ ಹೊರತು ಹೆಚ್ಚಿನ ರನ್ ದರದ ಮೇಲೆ ಅಲ್ಲ.
ಆದರೆ ಇದೆಲ್ಲಾ ನಿಮಗೆ ಈಗಾಗಲೇ ಗೊತ್ತಿದೆ. ಇವೆಲ್ಲವೂ ನಿಮ್ಮ ಹೂಡಿಕೆ ಶೈಲಿಗೆ ಹೇಗೆ ಸಂಬಂಧಿಸಿದೆ?
ಒಳ್ಳೆಯದು, ನಿಮಗೆ ಮ್ಯೂಚುವಲ್ ಫಂಡ್ ಹೊಸದಾಗಿದ್ದರೆ, ನಿಮ್ಮ ಹೂಡಿಕೆಗಾಗಿ ಸರಿಯಾದ ರೀತಿಯ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿ ಹೋಲುತ್ತದೆ. ನೀವು ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ನಿಮ್ಮ ಹೂಡಿಕೆಯ ಅಗತ್ಯಗಳನ್ನು ಅವಲಂಬಿಸಿರುತ್ತದೆ.
ಉದಾಹರಣೆಗೆ, ನೀವು ಕಡಿಮೆ ಅವಧಿಗೆ ಹೂಡಿಕೆ ಮಾಡುತ್ತೀರೆಂದಾದರೆ, ನಿಮ್ಮ ಗಮನವು ಕಡಿಮೆ ರಿಸ್ಕ್ ಇರುವ ಸ್ಥಿರವಾದ ಆದಾಯವನ್ನು ನೀಡುವ ಫಂಡ್‌ಗಳ ಮೇಲೆ ಇರಬೇಕು. ಆದಾಗ್ಯೂ, ದೀರ್ಘಾವಧಿಗೆ ಹೂಡಿಕೆ ಮಾಡುವಾಗ, ಹೆಚ್ಚಿನ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಆದರೆ ಅಲ್ಪಾವಧಿಯಲ್ಲಿ ಕೆಲವು ಏರಿಳಿತಗಳಿರುವ ಮ್ಯೂಚುವಲ್ ಫಂಡ್‌ಗೆ ನೀವು ಹೂಡಿಕೆ ಮಾಡಬಹುದು. ಸರಳವಾಗಿ ಹೇಳುವುದಾದರೆ, ಬ್ಯಾಟ್ಸ್‌ಮನ್‌ನಂತೆ ನೀವು ಆಡುತ್ತಿರುವ ಪಂದ್ಯದ ಪ್ರಕಾರವನ್ನು ಆಧರಿಸಿ ನಿಮ್ಮ ಬ್ಯಾಟಿಂಗ್ ತಂತ್ರವನ್ನು ನೀವು ಬದಲಾಯಿಸುತ್ತೀರಿ. ಅಂತೆಯೇ, ನಿಮ್ಮ ಹೂಡಿಕೆಯ ಅಗತ್ಯಗಳನ್ನು ಆಧರಿಸಿ ನಿಮ್ಮ ಹೂಡಿಕೆ ಆಯ್ಕೆಗಳನ್ನು ಮಾಡಿ.
ಇಲ್ಯುಸ್ಟ್ರೇಷನ್‌ಗಾಗಿ ಒಂದು ಚಿಕ್ಕ ಮಾರ್ಗದರ್ಶಿ ಇಲ್ಲಿದೆ:
ನೀವು ನೋಡುತ್ತಿರುವಂತೆ, ನಿಮ್ಮ ಹೂಡಿಕೆಯ ಅವಧಿ ಹೆಚ್ಚಾದಂತೆ ಅಥವಾ ರಿಸ್ಕ್ ಆದ್ಯತೆಗಳು ಕಡಿಮೆ ಮಟ್ಟದಿಂದ ಹೆಚ್ಚಾದಂತೆ, ಸಂಭಾವ್ಯ ಲಾಭವೂ ಹೆಚ್ಚಾಗುತ್ತದೆ. ಫಂಡ್ ಕಾರ್ಯಕ್ಷಮತೆಯಲ್ಲಿ ಹೆಚ್ಚಿನ ಅಲ್ಪಾವಧಿಯ ಏರಿಳಿತಗಳಿದ್ದರೂ ನಿಮಗೆ ಓಕೆ ಎಂದಾದರೆ, ದೀರ್ಘಾವಧಿಯಲ್ಲಿ ಆದಾಯವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಇದು ತೋರಿಸುತ್ತದೆ. ಸಂಕ್ಷಿಪ್ತವಾಗಿ, ಹೆಚ್ಚಿನ ರಿಸ್ಕ್, ಸಂಭಾವ್ಯ ಆದಾಯವನ್ನು ಹೆಚ್ಚಿಸುತ್ತದೆ.
ಆದ್ದರಿಂದ, ನಿಮ್ಮ ಮೊದಲ ಹೂಡಿಕೆಯನ್ನು ನೀವು ಮಾಡುವಾಗ ನಿಮ್ಮ ಹೂಡಿಕೆಯ ಗುರಿಯ ಪ್ರಕಾರ ಹೂಡಿಕೆ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಿ.
ಡಿಸ್ಕ್ಲೇಮರ್: ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ರಿಸ್ಕ್‌ಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಸ್ಕೀಮ್ ಮಾಹಿತಿ ದಾಖಲೆಯನ್ನು ಗಮನವಿಟ್ಟುಓದಿ.