Investments
ರಿಸ್ಕ್ ಮತ್ತು ರಿಟರ್ನ್ಸ್ — ಒಂದ್ ನಾಣ್ಯದ ಎರಡು ಮುಖಗಳು
PhonePe Regional|2 min read|27 May, 2021
ನಿಮ್ಮ ಹೂಡಿಕೆಗಳ ಮೇಲೆ ನೀವು ಲೆಕ್ಕ ಹಾಕಿ ತೆಗೆದುಕೊಳ್ಳುವ ರಿಸ್ಕ್ ನಿಮಗೆ ಸಂಪತ್ತು ಸೃಷ್ಟಿಸುವಲ್ಲಿ ಅನುಕೂಲವಾಗುತ್ತದೆ
ಚಲನಚಿತ್ರಗಳು ಮತ್ತು ಪುಸ್ತಕಗಳಂತಹ ಸಾಕಷ್ಟು ಜನಪ್ರಿಯ ಸಾಂಸ್ಕೃತಿಕ ಉಲ್ಲೇಖಗಳು ಜೀವನದಲ್ಲಿ ರಿಸ್ಕ್ ಅನ್ನು ನಾಟಕೀಯವಾಗಿ ತೋರಿಸುತ್ತದೆ. ನಿಮ್ಮ ಹೂಡಿಕೆಗಳ ಮೇಲೆ ನೀವು ಲೆಕ್ಕ ಹಾಕಿ ತೆಗೆದುಕೊಳ್ಳುವ ರಿಸ್ಕ್ ನಿಮಗೆ ಸಂಪತ್ತು ಸೃಷ್ಟಿಸುವಲ್ಲಿ ಅನುಕೂಲವಾಗುತ್ತದೆ. ವಾಸ್ತವವಾಗಿ, “ಸುರಕ್ಷಿತ” ಉತ್ಪನ್ನಗಳಲ್ಲಿ ಮಾತ್ರ ಹೂಡಿಕೆ ಮಾಡುವುದು ದೀರ್ಘಕಾಲೀನ ದೃಷ್ಟಿಕೋನದಿಂದ ಅತ್ಯಂತ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ. ಹೆಚ್ಚಿನದನ್ನು ಕಂಡುಹಿಡಿಯಲು ಮುಂದೆ ಓದಿ.
ಹೂಡಿಕೆಯ ಆಯ್ಕೆಗಳು ನಿಜವಾಗಿಯೂ ಸುರಕ್ಷಿತವೇ?
ಬಹಳಷ್ಟು ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಉಳಿತಾಯ ಖಾತೆಗಳಲ್ಲಿ ಅಥವಾ ಸ್ಥಿರ ಠೇವಣಿಗಳಲ್ಲಿ ಇಡುತ್ತಾರೆ. ಏಕೆಂದರೆ ಅವುಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಮತ್ತು ಸ್ಥಿರ ಆದಾಯವನ್ನು ನೀಡುತ್ತದೆ. ಆದಾಗ್ಯೂ, ಈ ಸುರಕ್ಷಿತ ಹೂಡಿಕೆಗಳಲ್ಲಿ ಹೂಡಿಕೆ ಮಾಡುವಲ್ಲಿ ಒಂದು ಅಪಾಯವಿದೆ: ಹಣದುಬ್ಬರ ಅಪಾಯ.
ಹಣದುಬ್ಬರ ರಿಸ್ಕ್ ಸರಿಯಾಗಿ ಅರ್ಥಮಾಡಿಕೊಳ್ಳಲು ಇಲ್ಲಿ ಒಂದು ಸುಲಭ ಉದಾಹರಣೆ ಇದೆ: 5 ವರ್ಷಗಳ ಹಿಂದೆ, ನೀವು ಮಸಾಲೆ ದೋಸೆಗೆ ಕೇವಲ ₹ 30 ಪಾವತಿಸಿದ್ದೀರಿ. ಆದರೆ ಈಗ ನೀವು ಅದೇ ಮಸಾಲೆ ದೋಸೆಗೆ ₹ 45 ಪಾವತಿಸುತ್ತೀರಿ. ಇದರರ್ಥ 5 ವರ್ಷಗಳಲ್ಲಿ, ಮಸಾಲೆ ದೋಸೆಯ ಬೆಲೆ ಪ್ರತಿವರ್ಷ 8% ಕ್ಕಿಂತ ಹೆಚ್ಚಾಗಿದೆ. ಇದನ್ನು ಹಣದುಬ್ಬರ ಅಥವಾ ಕಾಲಾನಂತರದಲ್ಲಿ ಬೆಲೆ ಹೆಚ್ಚಳ ಎನ್ನಲಾಗುತ್ತದೆ.
ಹೂಡಿಕೆ ಹೋಲಿಕೆಯನ್ನೇ ಬಳಸಿಕೊಂಡು ಇದನ್ನು ವಿವರಿಸುವುದಾದರೆ, ನೀವು 5 ವರ್ಷದ ಹಿಂದೆ ₹30 ಅನ್ನು ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆಯಲ್ಲಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ.ಅದು ನಿಮಗೆ 6% ಲಾಭವನ್ನು ನೀಡಿತು,ಇಂದು ಅದರ ಮೌಲ್ಯ ₹40 ಆಗಿದೆ. ಅಂದರೆ ನೀವು ₹10 ಲಾಭ ಗಳಿಸಿದ್ದೀರಿ. ಆದರೂ ನೀವು ಗಳಿಸಿದ್ದು ₹5 ಕಡಿಮೆಯೇ. ಅದು ನಿಮ್ಮ ಹೂಡಿಕೆಗೆ ಹಣದುಬ್ಬರದ ರಿಸ್ಕ್ ಆಗಿದೆ.
ಪ್ರತಿಯೊಬ್ಬ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಉತ್ಪನ್ನಗಳಲ್ಲಿ ಕೆಲವು ಹೂಡಿಕೆಗಳನ್ನು ಮಾಡಬೇಕು ಎನ್ನುವುದು ನಿಜವಾದರೂ, ನಿಮ್ಮ ಸಂಪೂರ್ಣ ಹೂಡಿಕೆಗಳನ್ನು ಅಂತಹ ಉತ್ಪನ್ನಗಳಲ್ಲಿ ಇಡುವುದರಿಂದ ಹೂಡಿಕೆ ಮಾಡಿದ ಹಣದ ನೈಜ ಮೌಲ್ಯ ಕಡಿಮೆ ಆಗುತ್ತದೆ. ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ, ಲೆಕ್ಕ ಹಾಕಿದ ರಿಸ್ಕ್ ತೆಗೆದುಕೊಳ್ಳುವುದು ಮುಖ್ಯ ಅಥವಾ ಭವಿಷ್ಯದಲ್ಲಿ ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸುವ ಅಗತ್ಯಕ್ಕಿಂತ ಕಡಿಮೆ ಹಣವನ್ನು ನೀವು ಹೊಂದಿರಬಹುದು. “ಸುರಕ್ಷಿತ” ಉತ್ಪನ್ನಗಳಲ್ಲಿ ಮಾತ್ರ ಹೂಡಿಕೆ ಮಾಡುವ ಮೂಲಕ ನಿಮ್ಮ ದೀರ್ಘಕಾಲೀನ ಹಣಕಾಸಿನ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವುದು ಬಹುತೇಕ ಬೌಂಡರಿ ಅಥವಾ ಸಿಕ್ಸರ್ ಅನ್ನು ಹೊಡೆಯುವುದರಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಶತಕವನ್ನು ಗಳಿಸಬೇಕೆಂಬ ಬ್ಯಾಟ್ಸ್‌ಮನ್‌ನಂತಿದೆ.
ಹೆಚ್ಚಿನ ರಿಸ್ಕ್ ಮತ್ತು ಹೆಚ್ಚಿನ ಆದಾಯದ ಹೂಡಿಕೆಗಳಿಗೆ ಸ್ವಲ್ಪ ಹಣವನ್ನು ನಿಗದಿಪಡಿಸುವ ಮೂಲಕ ಹೂಡಿಕೆದಾರರು ಹೇಗೆ ಲಾಭ ಪಡೆಯುತ್ತಾರೆ ಎಂಬುದನ್ನು ನೋಡೋಣ.
ರಿಸ್ಕ್ ವರ್ಸಸ್ ರಿಟರ್ನ್ಸ್: ಸರಿಯಾದ ಸಮತೋಲನ ಕಾಪಾಡುವುದು
ರಿಸ್ಕ್ ಮತ್ತು ರಿಟರ್ನ್ ಅನೇಕ ವೇಳೆ ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ, ಅಂದರೆ ಹೆಚ್ಚಿನ ರಿಸ್ಕ್ ಇದ್ದಲ್ಲಿ, ಹೆಚ್ಚಿನ ಸಂಭಾವ್ಯ ಲಾಭವೂ ಇರುತ್ತದೆ. ಆದರೆ ನಾವು ಮಾತನಾಡುತ್ತಿರುವ ಈ ರಿಸ್ಕ್ ಎಂದರೇನು? ರಿಸ್ಕ್ ಎಂದರೆ ಮಾರುಕಟ್ಟೆ ಚಲನೆಗಳ ಆಧಾರದ ಮೇಲೆ ನಿಮ್ಮ ಹೂಡಿಕೆಯಲ್ಲಾಗುವ ಏರಿಳಿತ. ಅಲ್ಪಾವಧಿಯಲ್ಲಿ, ಈ ಏರಿಳಿತಗಳು ಹೆಚ್ಚು ಆಗುತ್ತಲೇ ಇರಬಹುದು. ಆದರೆ ದೀರ್ಘಾವಧಿಯಲ್ಲಿ, ನಿಮ್ಮ ಹೂಡಿಕೆಗಳು ಹೆಚ್ಚಿನ ದರದಲ್ಲಿ ಏರುವ ಸಾಮರ್ಥ್ಯವನ್ನು ಹೊಂದಿವೆ.
ನಿಮ್ಮ ರಿಸ್ಕ್ ಸಹಿಸುವ ಸಾಮರ್ಥ್ಯ, ಗುರಿಗಳು ಮತ್ತು ಹೂಡಿಕೆಯ ಅವಧಿಯನ್ನು ಆಧರಿಸಿ ಲೆಕ್ಕಹಾಕಿ ರಿಸ್ಕ್ ತೆಗೆದುಕೊಳ್ಳುವುದು ಬಹಳ ಮುಖ್ಯ. ಈ ಅಂಶಗಳನ್ನು ಬಳಸಿಕೊಂಡು ನೀವು ರಿಸ್ಕ್ ಮತ್ತು ಆದಾಯದ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
ಸುರಕ್ಷಿತ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯದ ಸಾಮರ್ಥ್ಯವನ್ನು ಹೊಂದಿರುವ ಹೂಡಿಕೆಯು ಸಂಪತ್ತನ್ನು ಸಂಪಾದಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ಇಲ್ಲಿದೆ:
ನೀವು 25 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ 50 ನೇ ವಯಸ್ಸಿಗೆ 1 ಕೋಟಿ ಸಂಪಾದಿಸಲು ಬಯಸುತ್ತೀರಿ. ನೀವು ಈ ಗುರಿಯನ್ನು ಹಲವು ವಿಧಗಳಲ್ಲಿ ತಲುಪಬಹುದು: ಉದಾಹರಣೆಗೆ: ನೀವು 6% ನಷ್ಟು ಲಾಭವನ್ನು ನೀಡುವ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದು ಅಥವಾ ನೀವು 12% ಹೆಚ್ಚಿನ ಲಾಭದ ಸಾಮರ್ಥ್ಯವನ್ನು ಹೊಂದಿರುವ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು (ಇದು ಅಲ್ಪಾವಧಿಯಲ್ಲಿ ಹೆಚ್ಚು ಏರಿಳಿತಗಳನ್ನು ಹೊಂದಿರುತ್ತದೆ). ಎರಡೂ ಸಂದರ್ಭಗಳಲ್ಲಿ ನೀವು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ ಎಂಬುದು ಇಲ್ಲಿದೆ:
ಅವಲೋಕನಗಳು:
- ನೀವು ವರ್ಷಕ್ಕೆ 6% ಲಾಭವನ್ನು ಗಳಿಸುವ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಮಾತ್ರ ಹೂಡಿಕೆ ಮಾಡಿದರೆ, 50 ವರ್ಷ ವಯಸ್ಸಿನೊಳಗೆ ₹1 ಕೋಟಿ ಸಂಗ್ರಹಿಸಲು ನೀವು ಪ್ರತಿ ತಿಂಗಳು ₹ 15,000 ಹೂಡಿಕೆ ಮಾಡಬೇಕಾಗುತ್ತದೆ ಎಂದು ಇದು ತೋರಿಸುತ್ತದೆ.
- ನೀವು ಈಕ್ವಿಟಿ ಮ್ಯುಚ್ಯುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಮತ್ತು ವರ್ಷಕ್ಕೆ 12% ಲಾಭವನ್ನು ಗಳಿಸಿದರೆ ನೀವು ₹1 ಕೋಟಿ ಗುರಿಯನ್ನು ತಲುಪಲು ತಿಂಗಳಿಗೆ ₹6,000 ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ಇದು ನೀವು ಸುರಕ್ಷಿತವಾದ ಆಯ್ಕೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಗಮನಾರ್ಹ ಕಡಿಮೆಯಾಗಿದೆ.
ನಿಮ್ಮ ಹೂಡಿಕೆಯಲ್ಲಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳುವುದು ದೀರ್ಘಾವಧಿಯಲ್ಲಿ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಈಗ ನಿಮಗೆ ತಿಳಿದಿದೆ, ನಿಮ್ಮ ಹೂಡಿಕೆಯೊಂದಿಗೆ ನೀವು ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ:
- ದೀರ್ಘಾವಧಿಯವರೆಗೆ ಹೂಡಿಕೆ ಮಾಡಿ — ದೀರ್ಘಕಾಲದವರೆಗೆ, ಈಕ್ವಿಟಿ ಫಂಡ್‌ಗಳಂತಹ ಕೆಲವು ರಿಸ್ಕ್ ಮಾನ್ಯತೆಗಳನ್ನು ಹೊಂದಿರುವ ಹೂಡಿಕೆಗಳು ಸಂಪೂರ್ಣವಾಗಿ ಸುರಕ್ಷಿತ ಹೂಡಿಕೆ ಆಯ್ಕೆಗಳಿಗಿಂತ ಉತ್ತಮ ಲಾಭವನ್ನು ನೀಡುತ್ತವೆ. ಆದ್ದರಿಂದ, ನೀವು ಹೆಚ್ಚು ಸಮಯ ಹೂಡಿಕೆಯನ್ನು ಇಟ್ಟಷ್ಟೂ ಒಳ್ಳೆಯದು.
- ಸ್ಥಿರತೆ ಮುಖ್ಯ — ಮಾಸಿಕ ಎಸ್‌ಐಪಿಗಳ ಮೂಲಕ ನಿಯಮಿತವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸಿ, ಏಕೆಂದರೆ ಇದು ಕಾಲಾನಂತರದಲ್ಲಿ ಸಂಪತ್ತನ್ನು ಸಂಗ್ರಹಿಸಲು ಅನುಕೂಲಕರ ಮಾತ್ರವಲ್ಲದೇ, ಅಲ್ಪಾವಧಿಯ ಮಾರುಕಟ್ಟೆ ಏರಿಳಿತದ ರಿಸ್ಕ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ನಿಮ್ಮ ಹೂಡಿಕೆಯಲ್ಲಿ ವೈವಿಧ್ಯತೆ ಇರಲಿ — ನಿಮ್ಮ ಹೂಡಿಕೆಗಳನ್ನು ವಿವಿಧ ರೀತಿಯ ಫಂಡ್ ಗಳಲ್ಲಿ ಇಡುವುದರ ಮೂಲಕ ನಿಮ್ಮ ಹೂಡಿಕೆಯನ್ನು ನಿಮ್ಮ ರಿಸ್ಕ್ ಕಂಫರ್ಟ್ ಆಗಿಸಬಹುದು. ಅಂದರೆ ಇಕ್ವಿಟಿ ಫಂಡ್‌ಗಳು, ಡೆಟ್ ಫಂಡ್ ಮುಂತಾದವು. ಇದರ ಬಗ್ಗೆ ಇನ್ನಷ್ಟು ಇಲ್ಲಿ ಓದಿ.
ಅಳೆದ ಹೂಡಿಕೆ ರಿಸ್ಕ್ ತೆಗೆದುಕೊಳ್ಳುವುದರಿಂದ ಹಿಂಜರಿಯದಿರಿ ಏಕೆಂದರೆ ಅವುಗಳು ನಿಮ್ಮ ಸಂಪತ್ತನ್ನು ದೀರ್ಘಾವಧಿಯಲ್ಲಿ ಬೆಳೆಸಲು ಸಹಾಯ ಮಾಡುತ್ತದೆ.
ಮ್ಯೂಚುಯಲ್ ಫಂಡ್‌ಗಳು ಮಾರುಕಟ್ಟೆಯ ರಿಸ್ಕ್‌ಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಯೋಜನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.