PhonePe Blogs Main Featured Image

Investments

ತುರ್ತು ಫಂಡ್‌ನೊಂದಿಗೆ ಯಾವುದೇ ಹಣಕಾಸಿನ ಅನಿಶ್ಚಿತತೆಗಳಿಗೆ ಯೋಜನೆ ರೂಪಿಸಿ

PhonePe Regional|2 min read|28 June, 2021

URL copied to clipboard

ಕೋವಿಡ್- 19 ಸಾಂಕ್ರಾಮಿಕವು ನಮ್ಮ ಬದುಕಿನ ಮೇಲೆ ಅನೇಕ ಪರಿಣಾಮ ಬೀರಿದೆ. ನಮ್ಮ ವಯಕ್ತಿಕ ಜೀವನದ ಮೇಲೆ ಇದರ ಪರಿಣಾಮ ಅಳೆಯಲು ಅಸಾಧ್ಯವಾದರೂ, ಈ ಅನಿಶ್ಚಿತತೆಯಿಂದ ನಮ್ಮ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಇಂತಹದ್ದು ನಡೆಯುತ್ತದೆ ಎಂಬುದು ನಮಗೆ ಊಹಿಸಲು ಸಾಧ್ಯವಾಗದೇ ಇದ್ದರೂ, ಅದರೊಂದಿಗೆ ಬರಬಹುದಾದ ಆರ್ಥಿಕತೆಯ ಅನಿಶ್ಚಿತತೆಗೆ ಖಂಡಿತವಾಗಿಯೂ ಯೋಜನೆ ರೂಪಿಸಬಹುದು. ಇದನ್ನು ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ತುರ್ತು ಫಂಡ್‌ ಯೋಜನೆಯನ್ನು ರಚಿಸುವುದು.

ತುರ್ತು ಫಂಡ್‌ ಎಂದರೇನು?

ತುರ್ತು ಫಂಡ್‌ ಎಂದರೆ ಭವಿಷ್ಯದಲ್ಲಿ ಆಗಬಹುದಾದ ಅನಿರೀಕ್ಷಿತ ಆರ್ಥಿಕ ಪರಿಣಾಮಗಳಿಗೆ ನಿಮ್ಮ ಆದಾಯದ ಕೆಲವು ಭಾಗವನ್ನು ತೆಗೆದಿಡುವುದು. ಬೈಕ್‌ ಸವಾರಿ ಮಾಡುವಾಗ ಹೆಲ್ಮೆಟ್‌, ಕಾರು ಸವಾರಿ ಮಾಡುವಾಗ ಸೀಟ್‌ ಬೆಲ್ಟ್‌ ಧರಿಸುವುದು ಅವಶ್ಯಕ. ಏಕೆಂದರೆ ಅದು ನಮಗೆ ಗಂಭೀರ ಗಾಯವಾಗದಂತೆ ರಕ್ಷಿಸುತ್ತದೆ. ಅದೇ ರೀತಿ ತುರ್ತು ಫಂಡ್‌ ಕೂಡಾ ನಮಗೆ ಆರ್ಥಿಕವಾಗಿ ಗಾಯವಾಗದಂತೆ ರಕ್ಷಿಸುತ್ತದೆ.

ನೀವು ನಿಮ್ಮ ಭವಿಷ್ಯದ ಗುರಿಗಳಿಗೆ ಅಂದರೆ ಮನೆ ಕೊಳ್ಳಲು, ಮಕ್ಕಳ ಶಿಕ್ಷಣಕ್ಕೆ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳೋಣ. ಅಂತಹ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗದಂತಹ ಪರಿಸ್ಥಿತಿಯನ್ನು ಎದುರಿಸಿದರೆ, ಹಣಕಾಸಿನ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ನಿಮ್ಮ ಭವಿಷ್ಯದ ಗುರಿಗಳೊಂದಿಗೆ ನೀವು ರಾಜಿ ಮಾಡಿಕೊಳ್ಳಬೇಕಾಗಬಹುದು. ಆದರೆ ನೀವು ತುರ್ತು ಫಂಡ್‌ ಅನ್ನು ಹೊಂದಿದ್ದರೆ, ನಿಮ್ಮ ಭವಿಷ್ಯದ ಗುರಿಗಳಿಗೆ ಧಕ್ಕೆಯಾಗದಂತೆ ಅನಿರೀಕ್ಷಿತ ಖರ್ಚುಗಳನ್ನು ಎದುರಿಸಲು ಈ ಫಂಡ್‌ನಿಂದ ಸಾಧ್ಯವಾಗುತ್ತದೆ.

ನಿಮ್ಮ ತುರ್ತು ಫಂಡ್‌ ಹೂಡಿಕೆ ಪ್ರಾರಂಭಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:

  • ನಿಮ್ಮ ಖರ್ಚಿನ ಕನಿಷ್ಠ 6 ತಿಂಗಳುಗಳನ್ನು ತುರ್ತು ಫಂಡ್‌ ಆಗಿ ಇರಿಸಿ. ಉದಾಹರಣೆಗೆ, ನಿಮ್ಮ ಮಾಸಿಕ ವೆಚ್ಚಗಳು ₹ 10,000 ಆಗಿದ್ದರೆ, ತುರ್ತು ಫಂಡ್‌ ಗೆ ಕನಿಷ್ಠ, 60,000 ನಿಗದಿಪಡಿಸಿ.
  • ಬಹುತೇಕ ನಮ್ಮೆಲ್ಲರಿಗೆ ಒಂದೇ ಬಾರಿ ಇಷ್ಟೊಂದು ಹಣವನ್ನು ಹೂಡಿಕೆ ಮಾಡಲು ಸಾಧ್ಯವಾಗದಿರಬಹುದು, ಆದ್ದರಿಂದ ನೀವು ತಿಂಗಳ SIP ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಪ್ರತಿ ತಿಂಗಳು ಹೂಡಿಕೆ ಮಾಡಿ, ನಿಮಗೆ ಬೇಕಾಗಿರುವ ಮೊತ್ತವನ್ನು ಒಟ್ಟುಗೂಡಿಸಬಹುದು.
  • ಯಾವುದೇ ಹಣಕಾಸಿನ ತುರ್ತು ಪರಿಸ್ಥಿತಿಯನ್ನು ಎದುರಿಸಲು ನೀವು ಅದನ್ನು ಬಳಸಿದರೆ ನಿಮ್ಮ ತುರ್ತು ಫಂಡ್‌ ಅನ್ನು ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಖರ್ಚನ್ನು ಪ್ರತಿ ವರ್ಷ ವಿಮರ್ಶಿಸಿ ಮತ್ತು ಖರ್ಚು ಹೆಚ್ಚಾದಂತೆಲ್ಲಾ ತುರ್ತು ಫಂಡ್‌ ಹೆಚ್ಚಿಸಿ.

ತುರ್ತು ಫಂಡ್‌ ಏನೆಂದು ನಾವು ಈಗ ಅರ್ಥಮಾಡಿಕೊಂಡಿದ್ದೇವೆ, ಈ ಮೊತ್ತವನ್ನು ನೀವು ಎಲ್ಲಿ ಹೂಡಿಕೆ ಮಾಡಬಹುದು ಎಂದು ನೋಡೋಣ.

ಲಿಕ್ವಿಡ್‌ ಫಂಡ್‌ — ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಉಳಿಸಲು ಒಂದು ಮಾರ್ಗ

ನಮ್ಮ ಆರ್ಥಿಕ ಅನಿಶ್ಚಿತತೆಗಳಿಗೆ ತುರ್ತು ಫಂಢ್‌ ಹೇಗೆ ಸಹಾಯವಾಗುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಈ ಮೊತ್ತವನ್ನು ನಮ್ಮ ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳದೇ ಪ್ರತ್ಯೇಕವಾಗಿ ಇಡಬೇಕು ಎಂಬುದು ಯಾಕೆ? ಏಕೆಂದರೆ ಉಳಿತಾಯ ಖಾತೆಯಲ್ಲಿ ಹೆಚ್ಚುವರಿ ಹಣವನ್ನು ಇಟ್ಟಾಗ ಅದನ್ನು ಯಾವುದಕ್ಕಾದರೂ ಬಳಸಿ ಖರ್ಚು ಮಾಡುತ್ತೇವೆ. ಆದ್ದರಿಂದ, ತುರ್ತು ಫಂಡ್‌ ಮೊತ್ತವನ್ನು ಪ್ರತ್ಯೇಕವಾಗಿ ಹೂಡಿಕೆ ಮಾಡುವ ಮೂಲಕ, ನೀವು ಹಣಕಾಸಿನ ತುರ್ತು ಪರಿಸ್ಥಿತಿಗಳಿಗೆ ಮಾತ್ರ ಹಣವನ್ನು ಮೀಸಲಿಡಲು ಸಾಧ್ಯವಾಗುತ್ತದೆ ಮತ್ತು ಬೇರೆ ಯಾವುದೇ ಖರ್ಚುಗಳಿಗೆ ಅಲ್ಲ.

ಲಿಕ್ವಿಡ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ತುರ್ತು ಫಂಡ್‌ ಅನ್ನು ಸೃಷ್ಟಿಸಬಹುದು. ಲಿಕ್ವಿಡ್‌ ಫಂಡ್‌ಗಳು ಮ್ಯುಚ್ಯುವಲ್‌ ಫಂಡ್‌ನ ಪ್ರಕಾರವೇ ಆಗಿದ್ದು, ಕಡಿಮೆ ಅವಧಿ ಹೂಡಿಕೆಗೆ ಉದ್ದೇಶಿಸಲಾಗಿದೆ ಮತ್ತು ನಿಮ್ಮ ಉಳಿತಾಯ ಖಾತೆಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಬಹುದು. ಈ ಫಂಡ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಿಲ್ಲ. ನಿಮ್ಮ ಹಣವನ್ನು ಸರ್ಕಾರಿ ಮತ್ತು ಬ್ಯಾಂಕ್ ಸೆಕ್ಯುರಿಟಿಗಳಂತಹ ಸುರಕ್ಷಿತ ಸಾಧನಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

ಲಿಕ್ವಿಡ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಕೆಲವು ಪ್ರಯೋಜನಗಳು ಹೀಗಿವೆ:

  • ಉಳಿತಾಯ ಖಾತೆಗಿಂತ ಉತ್ತಮ ಆದಾಯ
  • ಲಾಕ್‌ ಇನ್‌ ಅವಧಿ ಇರುವುದಿಲ್ಲ ^
  • ಕನಿಷ್ಢ ಬ್ಯಾಲೆನ್ಸ್‌ ಮಿತಿ ಇಲ್ಲ
  • ₹100 ಅನ್ನೂ ಹೂಡಿಕೆ ಮಾಡಬಹುದು
  • ತ್ವರಿತ ವಿಥ್‌ ಡ್ರಾವಲ್‌ ಮಿತಿಯು ₹50,000*ವರೆಗೆ

ಲಿಕ್ವಿಡ್ ಫಂಡ್‌ಗಳಲ್ಲಿನ ನಿಮ್ಮ ಹಣವನ್ನು ಸುಲಭವಾಗಿ ಪಡೆಯಬಹುದು ಮತ್ತು ಉಳಿತಾಯ ಖಾತೆಗಿಂತ ಉತ್ತಮ ಆದಾಯವನ್ನು ಗಳಿಸಬಹುದು, ಇದನ್ನು ತುರ್ತು ಫಂಡ್‌ ರಚಿಸಲು ಬಳಸಬಹುದು.

ಯಾವುದೇ ಹಣಕಾಸಿನ ಅನಿಶ್ಚಿತತೆಗಳಿಂದ ನಿಮ್ಮ ಭವಿಷ್ಯದ ಗುರಿಗಳನ್ನು ರಕ್ಷಿಸಲು ಇಂದು ನಿಮ್ಮ ತುರ್ತು ಫಂಡ್‌ ರಚಿಸಿ.

ಡಿಸ್ಕ್ಲೇಮರ್ಸ್:‌

^ ಲಿಕ್ವಿಡ್‌ ಫಂಡ್‌ ಯಾವುದೇ ಲಾಕ್‌ ಹೊಂದಿಲ್ಲ. ಆದರೆ ನೀವು ಕ್ರಮವಾಗಿ 1 ದಿನ, 2 ದಿನಗಳು, 3 ದಿನಗಳು, 4 ದಿನಗಳು, 5 ದಿನಗಳು ಮತ್ತು 6 ದಿನಗಳಲ್ಲಿ ನಿಮ್ಮ ಹಣವನ್ನು ವಿಥ್‌ ಡ್ರಾವಲ್‌ ಮಾಡಿಕೊಂಡರೆ 0.007%, 0.0065%, 0.006%, 0.0055%, 0.005% ಮತ್ತು 0.0045% ನಷ್ಟು ಸಣ್ಣ ಎಕ್ಸಿಡ್‌ ಲೋಡ್ ಅನ್ವಯಿಸುತ್ತದೆ.

*ನಿಮ್ಮ ಹೂಡಿಕೆಯ 90% ವರೆಗಿನ ಮೊತ್ತವನ್ನು ಅಥವಾ ದಿನಕ್ಕೆ ₹ 50,000 ಮೊತ್ತವನ್ನು ಯಾವುದು ಕಡಿಮೆಯೋ ಅದನ್ನು ನೀವು ವಿಥ್‌ ಡ್ರಾ ಮಾಡಿಕೊಳ್ಳಬಹುದು.

ಮ್ಯುಚ್ಯುವಲ್‌ ಫಂಡ್ ಹೂಡಿಕೆಯು ಮಾರುಕಟ್ಟೆ ರಿಸ್ಕ್‌ ವಿಷಯವಾಗಿದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮೊದಲು ಯೋಜನೆಯ ಮಾಹಿತಿಯನ್ನು ದಯವಿಟ್ಟು ಗಮನದಿಂದ ಓದಿ.

Keep Reading