Investments
ದೀರ್ಘಕಾಲದ ಹೂಡಿಕೆಯನ್ನು ಬಲವಾಗಿ ನಿರ್ಮಿಸುವುದು
PhonePe Regional|2 min read|12 July, 2021
ವ್ಯಾಯಾಮ ಮತ್ತು ಹೂಡಿಕೆಯಲ್ಲಿರುವ ಸಾಮಾನ್ಯವಾದ ವಿಷಯಗಳು ಯಾವವು? ನೀವು ಹತ್ತಿರದಿಂದ ನೋಡಿದರೆ ಬಹಳಷ್ಟು!
2021 ಇಸವಿಯ ಆರಂಭದಲ್ಲಿ ಹೆಚ್ಚು ಚಟುವಟಿಕೆಯಿಂದ ವ್ಯಾಯಾಮ ಮಾಡಬೇಕೆಂಬ ಸಂಕಲ್ಪ ಇಟ್ಟುಕೊಂಡು ಆರಂಭಿಸಿದ್ದೀರಾ? ಒಳ್ಳೆಯದು, ನಮ್ಮದೂ ಹಾಗೇ ಆಗಿತ್ತು! ಆದರೆ ನಾವು ಆ ಸಂಕಲ್ಪವನ್ನು ಮಾಡುವಾಗ ವ್ಯಾಯಾಮ ಮತ್ತು ಹೂಡಿಕೆಯಲ್ಲಿ ಸಾಮ್ಯತೆ ಇದೆ ಎಂಬುದನ್ನು ಅರಿತುಕೊಂಡಿದ್ದೇವೆ, ಕನಸಿನ ದೇಹದ ಮೈಕಟ್ಟನ್ನು ಬೆಳೆಸುವುದು ಒಬ್ಬರು ಹೇಗೆ ಯಶಸ್ವಿ ಹೂಡಿಕೆದಾರರು ಆಗಬಹುದೆಂದು ತಿಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅದರ ಬಗ್ಗೆ ಚರ್ಚಿಸೋಣವೇ?
ಮೊದಲು ಪ್ರಾರಂಭವನ್ನು ಮಾಡಿ
ಪ್ರತಿ ಹೊಸ ವರ್ಷದಲ್ಲಿ ವ್ಯಾಯಾಮ ಮಾಡುವುದು ಯಾವಾಗಲೂ ಬಹಳಷ್ಟು ಜನರಿಗೆ ಹೆಚ್ಚು ಬೇಡಿಕೆಯ ಸಂಕಲ್ಪ ಏಕೆ ಎಂದು ನಿಮಗೆ ತಿಳಿದಿದೆಯೇ? ಪ್ರತಿಯೊಬ್ಬರೂ ಇದನ್ನು ಮಾಡಲು ಬಯಸುತ್ತಿರುತ್ತಾರೆ, ಆದರೆ ಕೆಲವೇ ಜನರು ಇದನ್ನು ಪ್ರಾರಂಭಿಸುತ್ತಾರೆ. ಹೂಡಿಕೆಯ ವಿಷಯದಲ್ಲೂ ಇದೇ ಆಗಿದೆ. ಭವಿಷ್ಯಕ್ಕೆ ಅದನ್ನು ಮುಂದೂಡುವುದು ಒಳ್ಳೆಯದಲ್ಲ. ಆದ್ದರಿಂದ, ನಾಳೆ ಅಲ್ಲ, ಇಂದೇ ಹೂಡಿಕೆ ಮತ್ತು ವ್ಯಾಯಾಮವನ್ನು ಪ್ರಾರಂಭಿಸಿ.
ಸ್ಥಿರತೆಯ ವಿಷಯಗಳು
ಜನವರಿ 1 ರಂದು ಜಿಮ್‌ಗೆ ಹೋಗಿ ಮತ್ತು ಅದರ ನಂತರ ನಿಲ್ಲಿಸುವುದರಿಂದ ನಿಮ್ಮ ಆರೋಗ್ಯ ಗುರಿಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ನಿಮ್ಮ ವ್ಯಾಯಾಮವನ್ನು ನಿಯಮಿತವಾಗಿ ಮುಂದುವರಿಸುವುದು, ನಿಮ್ಮ ಗುರಿಯನ್ನು ತಲುಪುವ ಏಕೈಕ ಮಾರ್ಗವಾಗಿದೆ. ಅಂತೆಯೇ, ನಿಯಮಿತವಾಗಿ SIP ಗಳ ಮೂಲಕ ಹೂಡಿಕೆ ಮಾಡುವುದು ಮತ್ತು ಅದರೊಂದಿಗೆ ಸ್ಥಿರವಾಗಿರುವುದು ದೀರ್ಘಾವಧಿಯಲ್ಲಿ ಗಣನೀಯ ಪ್ರಮಾಣದ ಸಂಪತ್ತನ್ನು ಸೃಷ್ಟಿಸಲು ನಿಮಗೆ ಸಹಾಯ ಮಾಡುತ್ತದೆ.
ಸ್ಥಿರತೆಯು ಏಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡಿ
ನೀವು ತಿಂಗಳ SIP ಆಗಿ 5,000 ವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಾ ಮತ್ತು ಮುಂದಿನ 20 ವರ್ಷಗಳ ಕಾಲ ಹೂಡಿಕೆ ಮುಂದುವರೆಸುತ್ತೀರಾ ಎಂದಿಟ್ಟುಕೊಳ್ಳೋಣ . ಈ ಹೂಡಿಕೆಯ ಮೇಲೆ ನೀವು 12% ಬಡ್ಡಿ ಪಡೆಯುತ್ತೀರಾ. 20 ವರ್ಷಗಳ ಬಳಿಕ ನೀವು ಸರಿಸುಮಾರು, 50 ಲಕ್ಷಗಳಷ್ಟು ಸಂಪತ್ತನ್ನು ಸೃಷ್ಟಿಸುತ್ತೀರಿ. ಇದರ ಅರ್ಥ ಏನೆಂದರೆ ಸ್ಥಿರತೆಯೊಂದಿಗೆ ಪ್ರತಿ ತಿಂಗಳು 5,000 ದ ಹೂಡಿಕೆಯು ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನು ಸೃಷ್ಟಿಸುತ್ತದೆ.
ನಿಮಗೆ ಅನುಕೂಲವಾಗುವ ದಿನಚರಿ ರೂಢಿಸಿಕೊಳ್ಳಿ
ನೀವು ನಿಯಮಿತವಾಗಿ ವ್ಯಾಯಾಮ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಉತ್ತಮ ವ್ಯಾಯಾಮ ದಿನಚರಿಯನ್ನು ಸಹ ರೂಢಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಅಂದರೆ ಇದು ಸ್ನಾಯುಗಳನ್ನು ನಿರ್ಮಿಸಲು ತೂಕ ತರಬೇತಿ, ತೂಕ ನಷ್ಟಕ್ಕೆ ಕಾರ್ಡಿಯೋ ಅಥವಾ ಕೋರ್ ಶಕ್ತಿಗಾಗಿ ಪೈಲೇಟ್ಸ್ ಯಾವುದೇ ಆಗಿರಬಹುದು. ಸಂಕ್ಷಿಪ್ತವಾಗಿ, ನಿಮ್ಮ ಗುರಿಗೆ ತಕ್ಕಂತೆ ನೀವು ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳುತ್ತೀರಿ. ಅಂತೆಯೇ ಹೂಡಿಕೆಯೊಂದಿಗೆ, ನಿಮ್ಮ ಅಪಾಯದ ಆದ್ಯತೆಗಳು, ಗುರಿ ಮತ್ತು ನೀವು ಹೂಡಿಕೆ ಮಾಡಬೇಕಾದ ಸಮಯಕ್ಕೆ ತಕ್ಕಂತೆ ನೀವು ಹಣವನ್ನು ಹೂಡಿಕೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಬೇಕು.
ಅಲ್ಪಾವಧಿಯ ಗುರಿಯನ್ನು ಪೂರೈಸಲು ನೀವು ಹೆಚ್ಚಿನ ರಿಸ್ಕ್ ನಲ್ಲಿ ಹೂಡಿಕೆ ಮಾಡಿದರೆ ಏನಾಗುತ್ತದೆ? ನಿಮ್ಮ ಹೂಡಿಕೆಯು ಹಲವಾರು ಏರಿಳಿತಗಳ ಮೂಲಕ ಸ್ವಲ್ಪ ನಷ್ಟ ಮತ್ತು ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ. ಆದರೆ ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಇದನ್ನು ತಪ್ಪಿಸುವುದು ಸುಲಭ. ಹೂಡಿಕೆಯ ಅವಧಿ ಮತ್ತು ವಿಭಿನ್ನ ರಿಸ್ಕ್ ಪ್ರೊಫೈಲ್‌ಗಳನ್ನು ಆಧರಿಸಿದ ಕಿರು ಮಾರ್ಗದರ್ಶಿ ಇಲ್ಲಿದೆ:
ಯಾವುದೇ ಶಾರ್ಟ್‌ಕಟ್‌ಗಳಿಲ್ಲ, ಆದರೆ ದೀರ್ಘಾವಧಿಯ ಫಲಿತಾಂಶಗಳು ಅಸಾಧಾರಣವಾಗಬಹುದು
ವ್ಯಾಯಾಮವು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ಫಲಿತಾಂಶಗಳನ್ನು ನೋಡಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಒಮ್ಮೆ ನೀವು ನಿಮ್ಮ ಗುರಿಯನ್ನು ತಲುಪಿದ ನಂತರ, ಹಿಂತಿರುಗಿ ನೋಡುವುದಿಲ್ಲ. ಅಂತೆಯೇ, ಹೂಡಿಕೆಗಳ ವಿಷಯಕ್ಕೆ ಬಂದರೆ, ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ತ್ವರಿತ ಲಾಭವನ್ನು ಹುಡುಕುತ್ತಿದ್ದರೆ, ನೀವು ನಿರಾಶೆಗೊಳ್ಳಬಹುದು ಆದರೆ SIP ಗಳ ಮೂಲಕ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದು ನಿಮ್ಮ ಹೂಡಿಕೆಗಳನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ನಿರ್ಮಿಸಲು ಉತ್ತಮ ಮಾರ್ಗವಾಗಿದೆ.
ಕೊನೆಯದಾಗಿ, ವ್ಯಾಯಾಮದ ಅತ್ಯುತ್ತಮ ಗುಣಗಳನ್ನು ಶ್ಲಾಘಿಸುವ ಪ್ರಸಿದ್ಧ ಉಲ್ಲೇಖವನ್ನುತೆಗೆದುಕೊಳ್ಳೋಣ, ಅದು ಹೂಡಿಕೆ ಮಾಡಲು ಸೂಕ್ತವಾಗಿದೆ: “ನಿಮ್ಮ ಭವಿಷ್ಯದಲ್ಲಿ ನಿಮಗೆ ನೀವೇ ಧನ್ಯವಾದಗಳನ್ನು ಹೇಳಲು, ಇಂದು ಏನಾದರೂ ಮಾಡಿ”.
ಹಕ್ಕು ನಿರಾಕರಣೆ:ಮ್ಯುಚ್ಯುವಲ್ ಫಂಡ್‌ಗಳು ಮಾರುಕಟ್ಟೆಯ ರಿಸ್ಕ್‌ಗೆ ಒಳಪಟ್ಟಿರುತ್ತದೆ. ಯಾವುದೇ ಹೂಡಿಕೆ ಮಾಡುವ ಮೊದಲು ಯೋಜನೆಯ ಬಗ್ಗೆ ಇರುವ ದಾಖಲೆಯನ್ನು ಗಮನವಿಟ್ಟು ಓದಿ.