Investments
ನೀವು ನಿಮ್ಮ ತಿಂಗಳ ಸಂಬಳದಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದ್ದೀರಾ?
PhonePe Regional|2 min read|11 June, 2021
ನಾನು ನನ್ನ ಸಂಬಳದಲ್ಲಿ ಶೇಕಡಾ ಎಷ್ಟನ್ನು ಉಳಿಸಬೇಕು? ಈ ಯೋಚನೆ ನಿಮ್ಮ ಮನಸ್ಸಿನಲ್ಲಿ ಬಂದಿದೆ ಎಂದಾದರೆ, ಈ ಯೋಚನೆ ಮಾಡುತ್ತಿರುವವರು ನೀವೊಬ್ಬರೇ ಅಲ್ಲ. ಇದು ಹೂಡಿಕೆದಾರರಿಗೆ ಇರಬಹುದಾದ ಸಾಮಾನ್ಯ ಪ್ರಶ್ನೆಯಾಗಿದೆ, ಅದರಲ್ಲೂ ಅವರ ಹೂಡಿಕೆಯ ಆರಂಭದ ವರ್ಷದಲ್ಲಿ ಈ ರೀತಿಯ ಯೋಚನೆ ಸಹಜವೇ.
ಎಲ್ಲರಿಗೂ ಒಂದೇ ಉತ್ತರ ಹೊಂದಾಣಿಕೆಯಾಗದೇ ಇರುವುದರಿಂದ, ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಹೂಡಿಕೆಯ ಮೊತ್ತವನ್ನು ಹೇಗೆ ವ್ಯಾಖ್ಯಾನಿಸುವುದು ಎಂಬುದರ ಕುರಿತು ಸಲಹೆಗಳನ್ನು ನಿಮಗೆ ನಾವು ನೀಡುತ್ತಿದ್ದೇವೆ.
ನಿಮಗೆ ಸರಿಯಾಗಿ ಅರ್ಥವಾಗುವಂತೆ ಮಾಡಲು ಕ್ರಿಕೆಟ್‌ನ ಹೋಲಿಕೆಯನ್ನು ತೆಗೆದುಕೊಳ್ಳೋಣ!
50 ಓವರ್‌ನ ಏಕದಿನ ಕ್ರಿಕೆಟ್ ಮ್ಯಾಚ್‌ನಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಬೆನ್ನಟ್ಟಲು ನಿಖರವಾದ ಗುರಿ ಸ್ಕೋರ್ ಹೊಂದಿರಲ್ಲ ಮತ್ತು ಪಂದ್ಯವನ್ನು ಗೆಲ್ಲಲು ಅವರು ಗಳಿಸಬೇಕಾದ ನಿಖರವಾದ ರನ್ ದರವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ.
ಆದಾಗ್ಯೂ, ಪಂದ್ಯವನ್ನು ಗೆಲ್ಲಲು ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಅಗತ್ಯವಿರುವ ಒಂದು ನಿರ್ದಿಷ್ಟ ರನ್ ಅನ್ನು ಅಂದಾಜು ಮಾಡುತ್ತಾರೆ (ಓವರ್‌ಗೆ 5–6 ರನ್ ಎಂದು ಹೇಳಲಾಗುತ್ತದೆ) (ಒಟ್ಟಾರೆ ರನ್ ಹೆಚ್ಚಾದಂತೆ, ಗೆಲ್ಲುವ ಅವಕಾಶ ಹೆಚ್ಚು).
ಹೀಗೆಯೇ, ನೀವು ನಿಮ್ಮ 20ರ ದಶಕ ಅಥವಾ 30ರ ದಶಕದ ಆರಂಭದಲ್ಲಿ, ನಿಮ್ಮ ಜೀವನಶೈಲಿ, ಆದಾಯ, ಕುಟುಂಬದ ಆಕಾಂಕ್ಷೆಗಳು ಮುಂತಾದವುಗಳ ಆಧಾರದ ಮೇಲೆ ಆ ಗುರಿಗಳು ಕಾಲಾನಂತರದಲ್ಲಿ ವಿಕಸನಗೊಳ್ಳುವುದರಿಂದ ನಿಮ್ಮ ದೀರ್ಘಕಾಲೀನ ಆರ್ಥಿಕ ಗುರಿಗಳ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆ ಇಲ್ಲದಿರಬಹುದು.
ಸ್ಪಷ್ಟವಾದ ಗುರಿ ಇಲ್ಲದೇ ಇದ್ದಾಗ ನೀವು ಮಾಡಬಹುದಾಗಿದ್ದೆಂದರೆ, ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಿ & ಒಂದು ನಿರ್ದಿಷ್ಟ ಸ್ವೀಕಾರಾರ್ಹ ಹೂಡಿಕೆ ದರವನ್ನು ಆರಿಸಿ — ಸಾಮಾನ್ಯವಾಗಿ, ನಿಮ್ಮ ನಿವ್ವಳ ಆದಾಯದ 30–40% ಹೂಡಿಕೆ ಮಾಡುವುದು ಆರೋಗ್ಯಕರ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.
ಬ್ಯಾಟ್ಸ್‌ಮನ್ ಪ್ರತಿ ಓವರ್‌ನಲ್ಲಿ5 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗದೇ ಇರಬಹುದು, ಅಂತೆಯೇ ನೀವೂ ಕೂಡಾ ಯಾವಾಗಲೂ 30–40% ಹೂಡಿಕೆ ಮಾಡಲು ಆಗದಿರಬಹುದು ಹಾಗೂ ಅದರಿಂದ ಏನೂ ಚಿಂತಿಸಬೇಕಿಲ್ಲ. ಕಾಲಾನಂತರದಲ್ಲಿ ಆ ಮಟ್ಟದ ಸರಾಸರಿ ಹೂಡಿಕೆಯನ್ನು ಪ್ರಯತ್ನಿಸುವುದು ಮತ್ತು ಸಾಧಿಸುವುದು ಇದರ ಆಲೋಚನೆ. ಅಲ್ಲದೆ, ನಿಮ್ಮ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ನಿಮಗೆ ಹೆಚ್ಚು ಉಳಿಸಲು ಸಾಧ್ಯವಾದರೆ (50% ಹೀಗೆ), ಹಾಗೆ ಮಾಡಿ, ಏಕೆಂದರೆ ಭವಿಷ್ಯದಲ್ಲಿ 30–40% ಹೂಡಿಕೆ ಮಾಡಲು ಎಷ್ಟೋ ಬಾರಿ ನಿಮಗೆ ಸಾಧ್ಯವಾಗದಂತಹ ಸಂದರ್ಭಗಳು ಇರಬಹುದು. ಆಗ ಇದು ಬ್ಯಾಲೆನ್ಸ್ ಆಗುತ್ತದೆ.
ನೆನಪಿಡಿ, ಸಣ್ಣ ವಯಸ್ಸಿನಲ್ಲಿ ಮತ್ತು ದೀರ್ಘಕಾಲದವರೆಗೆ ಮಾಡಿದ ಹೂಡಿಕೆಯು ನೀವು ಶ್ರೀಮಂತರಾಗಲು ಹೆಚ್ಚಿನ ಮೌಲ್ಯವನ್ನು ಸೇರಿಸುತ್ತದೆ. ಕಂಪೌಂಡಿಂಗ್‌ನ ಶಕ್ತಿಯಿಂದ ಇದು ಸಾಧ್ಯವಾಗುತ್ತದೆ (ಇದರ ಬಗ್ಗೆ ಇಲ್ಲಿಇನ್ನಷ್ಟು ಓದಿ)
ಈಗ, ನಮ್ಮ ಕ್ರಿಕೆಟ್ ಉದಾಹರಣೆಗೆ ಹಿಂತಿರುಗಿ ನೋಡೋಣ. ಆದರೆ ಈ ಬಾರಿ, ಏಕದಿನ ಪಂದ್ಯದಲ್ಲಿ ತಂಡವು ಎರಡನೇ ಬ್ಯಾಟಿಂಗ್ ಮಾಡುತ್ತಿದೆ ಎಂದುಕೊಳ್ಳೋಣ. ಅವರು ಎರಡನೇಯ ತಂಡವಾಗಿ ಬ್ಯಾಟಿಂಗ್ ಮಾಡುತ್ತಿರುವುದರಿಂದ, ಬ್ಯಾಟ್ಸ್‌ಮನ್‌ಗಳು ತಾವು ತಲುಪಬೇಕಾದ ನಿಖರವಾದ ಗುರಿಯನ್ನು ತಿಳಿದಿರುತ್ತಾರೆ. ಆದ್ದರಿಂದ ಅವರ ಇನ್ನಿಂಗ್ಸ್ ಅನ್ನು ಅದಕ್ಕೆ ತಕ್ಕಂತೆ ವೇಗಗೊಳಿಸಬಹುದು.
ಅಂತೆಯೇ, ನೀವು 30 ರ ದಶಕದ ಮಧ್ಯಭಾಗ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿರುವಾಗ, ನಿಮ್ಮ ಅಲ್ಪ, ಮಧ್ಯಮ ಮತ್ತು ದೀರ್ಘಕಾಲೀನ ಆರ್ಥಿಕ ಗುರಿಗಳ ಉತ್ತಮ ದೃಷ್ಟಿಕೋನವನ್ನು ನೀವು ಹೊಂದಿರುತ್ತೀರಿ. ಹಣಕಾಸಿನ ಗುರಿಗಳ ಮೇಲಿನ ಈ ಸ್ಪಷ್ಟತೆಯು ನಿಮ್ಮ ರಿಸ್ಕ್ ವಿವರ ಮತ್ತು ನಿರೀಕ್ಷಿತ ಆದಾಯದ ದರವನ್ನು ಪರಿಗಣಿಸಿ, ಆ ಹಣಕಾಸಿನ ಗುರಿಗಳನ್ನು ಸಾಧಿಸಲು ನೀವು ಹೂಡಿಕೆ ಮಾಡಬೇಕಾದ ಮೊತ್ತವನ್ನು ನಿರ್ಧರಿಸಲು ಸುಲಭಗೊಳಿಸುತ್ತದೆ. ಉದಾಹರಣೆಗೆ, ಹಣಕಾಸಿನ ಭದ್ರತೆಯನ್ನು ಸಾಧಿಸಲು ನಿರ್ದಿಷ್ಟ ಮೊತ್ತವನ್ನು ಸಂಗ್ರಹಿಸುವುದು, ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಯೋಜನೆ, ಕಾರನ್ನು ಖರೀದಿಸುವುದು ಮುಂತಾದ ಗುರಿಗಳನ್ನು ನೀವು ಹೊಂದಿರಬಹುದು (ನಾವು ಪ್ರತ್ಯೇಕ ಬ್ಲಾಗ್‌ನಲ್ಲಿ ಹಣಕಾಸಿನ ಗುರಿ ಆಧಾರಿತ ಹೂಡಿಕೆಯ ಬಗ್ಗೆ ಹೆಚ್ಚು ಕವರ್ ಮಾಡುತ್ತೇವೆ). ಈ ಪ್ರತಿಯೊಂದು ಗುರಿಗಳಿಗೆ ನೀವು ಕೆಲವು ನಿಯಮಿತ ಹೂಡಿಕೆಗಳನ್ನು ಮಾಡಬೇಕಾಗುತ್ತದೆ ಮತ್ತು ಅಂತಹ ಎಲ್ಲಾ ಹೂಡಿಕೆಗಳನ್ನು ಒಟ್ಟಿಗೆ ಸೇರಿಸುವುದರಿಂದ ನಿಮ್ಮ ಗುರಿ ತಲುಪಲು ಸಹಾಯ ಮಾಡುತ್ತದೆ.
ಕೊನೆಯದಾಗಿ, ನೀವು ಹೂಡಿಕೆಯನ್ನು ಆರಂಭಿಸಬೇಕೆಂದು ಮತ್ತೆ ಮತ್ತೆ ಹೇಳಿಕೊಳ್ಳುವುದು ಮುಖ್ಯ. ನಿಮ್ಮ ಆದಾಯದ 20%, 30% ಅಥವಾ 50% ಎಂಬುದು ಮುಖ್ಯವಲ್ಲ. ಒಮ್ಮೆ ನೀವು ಆರಂಭಿಸಿದ ಬಳಿಕ, ನಿಮ್ಮ ಸಂಪತ್ತು ಸೃಷ್ಟಿಯಲ್ಲಿ ನೀವು ಪ್ರಗತಿಯಲ್ಲಿರುವಾಗ ಹೂಡಿಕೆ ಮಾಡಿದ ಮೊತ್ತವನ್ನು ನೀವು ಯಾವಾಗಲೂ ಹೊಂದಿಸಬಹುದು.
ಮ್ಯುಚ್ಯುಚಲ್ ಫಂಡ್‌ಗಳು ಮಾರುಕಟ್ಟೆಯ ರಿಸ್ಕ್‌ಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ಯೋಜನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಗಮನವಿಟ್ಟು ಓದಿ.